ಕಲಬುರ್ಗಿ : ಮೈಸೂರಿನ ಅರುಣ್ ಯೋಗಿರಾಜ್ ಅವರ ಕೈಯಲ್ಲಿ ಮೂಡಿಬಂದಂತಹ ರಾಮಲಲ್ಲ ಮೂರ್ತಿಯನ್ನು ಈಗಾಗಲೇ ಅಯೋಧ್ಯ ಶ್ರೀರಾಮ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ.ಅದೇ ರೀತಿಯಾಗಿ ಈ ಒಂದು ಕಾರ್ಯಕ್ರಮಕ್ಕೆ ಗಣ್ಯರಿಗೆ ಆಹ್ವಾನ ನೀಡಿದ್ದು, ಆ ಆಹ್ವಾನ ಪತ್ರಿಕೆಯಲ್ಲಿರುವ ಲೋಗೋ ಕಲಬುರ್ಗಿ ಕಲಾವಿದ ತಯಾರಿಸಿದ್ದು ಎಂದು ತಿಳಿದು ಬಂದಿದ್ದು ಇದೀಗ ಕರ್ನಾಟಕಕ್ಕೆ ಮತ್ತೊಂದು ಗರಿ ಸಿಕ್ಕಿದಂತಾಗಿದೆ.
ಆಹ್ವಾನ ಪತ್ರಿಕೆಯ ಮೇಲೆ ಪ್ರಕಾಶಿಸುವ ಸೂರ್ಯನ ಮಧ್ಯೆ ಕಂಗೊಳಿಸುವ ಶ್ರೀರಾಮನ ಭಾವಚಿತ್ರವಿದೆ. ಕೆಳಭಾಗದಲ್ಲಿ ಕುಳಿತಿರುವ ಹನುಮಂತನ ಚಿತ್ರವಿದೆ. ಈ ರೀತಿಯಾದ ಲೋಗೋವನ್ನು ಕಲಬುರಗಿಯ ಕಲಾವಿದ ರಮೇಶ್ ತಿಪ್ಪನೂರ್ ಅವರು ಡಿಸೈನ್ ಮಾಡಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಲೋಗೋ ತಯಾರಿಸಲು ಕರೆ ಕೊಟ್ಟಿತ್ತು. ದೇಶದ ವಿವಿಧ ಕಲಾವಿದರು ಲೋಗೋ ತಾಯಾರಿಸಿ ಟ್ರಸ್ಟ್ಗೆ ಕಳುಹುಸಿದ್ದರು.
ಇನ್ನು ಕಲಾವಿದ ರಮೇಶ್ ತಿಪ್ಪನೂರ್ ಅವರು ತಾವು ತಯಾರಿಸಿದ ಲೋಗೋವನ್ನು ವಿಹೆಚ್ಪಿ ಮುಖಂಡ ಗೋಪಾಲ್ ಜಿ ಅವರ ಮೂಲಕ ಟ್ರಸ್ಟ್ಗೆ ಕಳುಹಿಸಿದ್ದಾರೆ. ಟ್ರಸ್ಟ್ ದೇಶದ ವಿವಿಧಡೆಯಿಂದ ಬಂದ ಲೋಗೋ ಪರಿಶೀಲಿಸಿ, ಕೊನೆಗೆ ಕಲಬುರಗಿಯಲ್ಲಿ ತಯಾರಾದ ಲೋಗೋವನ್ನು ಅಂತಿಮಗೊಳಿಸಿದ್ದಾರೆ. ಒಟ್ಟಿನಲ್ಲಿ ಶ್ರೀ ರಾಮನ ಸೇವೆಗಾಗಿ ಕನ್ನಡಿಗರ ಅಳಿಲು ಸೇವೆ ಅಪಾರವಾಗಿದ್ದು ಹೆಮ್ಮೆಯ ಸಂಗತಿಯಾಗಿದೆ.