ಶಿವಮೊಗ್ಗ: ರಾಜ್ಯದಲ್ಲಿ ಸಾಲದ ಬಾಧೆಗೆ ಮತ್ತೊಬ್ಬ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸಾಲದ ಬಾಧೆಗೆ ಮತ್ತೊಬ್ಬ ರೈತ ಬಲಿಯಾದಂತೆ ಆಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಶೆಟ್ಟಿಕೊಪ್ಪ ಗ್ರಾಮದ ರೈತ ಗಾಮಪ್ಪ(60) ಎಂಬುವರೇ ಆತ್ಮಹತ್ಯೆಗೆ ಶರಣಾದಂತ ರೈತನಾಗಿದ್ದಾನೆ. ಸಾಲದ ಬಾಧೆ ತಾಳಲಾರದೇ ಗಾಮಪ್ಪ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.
ಆನಂದಪುರದ ಚೆನ್ನಶೆಟ್ಟಿಕೊಪ್ಪದ ಗಾಮಪ್ಪ ಅವರು ತಮ್ಮ ಜಮೀನಿನಲ್ಲಿ ಅಡಿಕೆ, ಶುಂಠಿ, ಭತ್ತ ಹಾಗೂ ಕಬ್ಬು ಬೆಳೆಯನ್ನು ಬಳೆಯುತ್ತಿದ್ದರು. ಈ ವರ್ಷ ಮಳೆ ಹೆಚ್ಚಾಗಿ ಅಡಿಕೆಗೆ ಕೊಳೆ ರೋಗ ಹಾಗೂ ಶುಂಠಿಗೆ ಎಲೆಚುಕ್ಕಿ ರೋಗ ಬಂದು ಬೆಳೆ ನಾಶವಾಗಿತ್ತು. ಈ ಹಿನ್ನಲೆಯಲ್ಲಿ ಸಾಲ ಮಾಡಿ ಬೆಳೆದಿದ್ದಂತ ಫಸಲು ಕೈಗೆ ಬಾರದೇ ಇದ್ದದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಂದಹಾಗೇ ಗಾಮಪ್ಪ ಅವರು ಬೆಳೆಗಾಗಿ 20,000ವನ್ನು ಸೊಸೈಟಿಯಿಂದ ಸಾಲ ಪಡೆದಿದ್ದರೇ, 40,000 ನಗದು ಸಾಲ, 40 ಸಾವಿರ ಬ್ಯಾಂಕಿನಿಂದ ಸಾಲ ಸೇರಿದಂತೆ 3 ಲಕ್ಷಕ್ಕೂ ಹೆಚ್ಚು ಸಾಲವನ್ನು ಬೆಳೆಗಾಗಿ ಮಾಡಿದ್ದರು ಎನ್ನಲಾಗುತ್ತಿದೆ.
ಹಾಸನಾಂಬ ದರ್ಶನಕ್ಕೆ ಜನರಿಗೆ ತಮ್ಮ ಗುರುತಿನ ಚೀಟಿ ನೀಡಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್
BIG NEWS: ಪ್ರಿಯಕರನ ಜೊತೆ ಓಡಿ ಹೋದ ಪುತ್ರಿ: ಶೃದ್ದಾಂಜಲಿ ಬ್ಯಾನರ್ ಹಾಕಿ, ಇಡೀ ಊರಿಗೆ ತಿಥಿ ಊಟ ಹಾಕಿಸಿದ ತಂದೆ