ಮಂಡ್ಯ: ಜಿಲ್ಲೆಯ ಕಾರೆಮನೆ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ನಿವೃತ್ತ ಯೋಧ ಬಲಿಯಾಗಿರುವ ಘಟನೆ ನಡೆದಿದೆ.
39 ವರ್ಷದ ಎಸ್.ಎನ್ ಕುಮಾರ್ ಮೃತ ನಿವೃತ್ತ ಯೋಧ. ತಂದೆ ಜೊತೆ ಬೈಕ್ನಲ್ಲಿ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಸಾತನೂರಿನಿಂದ ಮಂಡ್ಯಗೆ ಬರುತ್ತಿದ್ದ ವೇಳೆ ಕಾರೆಮನೆ ಗೇಟ್ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಅವಘಡ ಸಂಭವಿಸಿದೆ.
ಗುಂಡಿಯನ್ನು ತಪ್ಪಿಸಲು ಹೋಗಿ ಎದುರಿನಿಂದ ಬಂದ ಬೈಕ್ ಗೆ ಡಿಕ್ಕಿ ಹೊಡೆದ ಕೆಳಗೆ ಬಿದ್ದ ಕುಮಾರ್ ಗೆ ಹಿಂದಿನಿಂದ ಬಂದ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಸಾವವನ್ನಪ್ಪಿದ್ದಾರೆ. ತಂದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸೇನೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿದ್ದ ಕುಮಾರ್, ನಿವೃತ್ತಿ ಬಳಿಕ ಪೊಲೀಸ್ ಪೇದೆಯಾಗಿ ತರಬೇತಿಗೆ ಹೋಗುತ್ತಿದ್ದರು. ನಿನ್ನೆ ಸ್ವಗ್ರಾಮ ಸಾತನೂರು ಗ್ರಾಮಕ್ಕೆ ಕುಮಾರ್ ಬಂದಿದ್ದ ವೇಳೆ ಈ ಘಟನೆ ಜರುಗಿದ್ದು, ಮಂಡ್ಯ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.