ರಾಮನಗರ : ಜಿಲ್ಲೆಯಲ್ಲಿ ಮತ್ತೊಂದು ವಿವಾದ ಎಂಟ್ರಿಯಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸ್ವ ಗ್ರಾಮ ದೊಡ್ಡ ಆಲಹಳ್ಳಿಯಲ್ಲಿ ಪಡಿತರ ಚೀಟಿ ಹಿಂಭಾಗ ಏಸು ಕ್ರಿಸ್ತ, ಲಕ್ಷ್ಮಿ ದೇವಿ ಫೋಟೋ ಮುದ್ರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
BIGG NEWS : ಜಾನುವಾರುಗಳಲ್ಲಿ ಚರ್ಮಗಂಟು ರೋಗ : ವಿಜಯನಗರ ಜಿಲ್ಲೆಯಾದ್ಯಂತ ಸಂತೆ, ಜಾತ್ರೆ ನಿಷೇಧಿಸಿ ಆದೇಶ
ಪಡಿತರ ಚೀಟಿ ಹಿಂಭಾಗ ಏಸು ಕ್ರಿಸ್ತನ ಫೋಟೋ ಮುದ್ರಿಸಲಾಗಿರುವ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಸರ್ಕಾರದಿಂದ ನೀಡಲಾಗುವ ಪಡಿತರ ಚೀಟಿ ಹಿಂಭಾಗ ಏಸು ಕ್ರಿಸ್ತ, ಲಕ್ಷ್ಮಿ ದೇವಿ ಫೋಟೋ ಮುದ್ರಿಸಲಾಗಿದ್ದು ಈ ಬಗ್ಗೆ ಹಿಂದೂಪರ ಸಂಘಟನೆಗಳು ಆಕ್ರೋಶ ಹೊರ ಹಾಕಿವೆ.
BIGG NEWS : ಜಾನುವಾರುಗಳಲ್ಲಿ ಚರ್ಮಗಂಟು ರೋಗ : ವಿಜಯನಗರ ಜಿಲ್ಲೆಯಾದ್ಯಂತ ಸಂತೆ, ಜಾತ್ರೆ ನಿಷೇಧಿಸಿ ಆದೇಶ
ಅಲ್ಲದೆ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಲು ಶ್ರೀರಾಮ ಸೇನೆ ಮುಂದಾಗಿದೆ. ಮತ್ತೊಂದೆಡೆ ವೈರಲ್ ಆಗಿರುವ ಫೋಟೋ ಬಗ್ಗೆ ತನಿಖೆ ನಡೆಸಲು ಕನಕಪುರ ತಹಶೀಲ್ದಾರ್ ಮುಂದಾಗಿದ್ದಾರೆ. ಪೊಲೀಸರ ಜೊತೆಗೂಡಿ ತಹಶೀಲ್ದಾರ್ ವಿಶ್ವನಾಥ್ ತನಿಖೆಗೆ ಮುಂದಾಗಿದ್ದಾರೆ.
BIGG NEWS : ಜಾನುವಾರುಗಳಲ್ಲಿ ಚರ್ಮಗಂಟು ರೋಗ : ವಿಜಯನಗರ ಜಿಲ್ಲೆಯಾದ್ಯಂತ ಸಂತೆ, ಜಾತ್ರೆ ನಿಷೇಧಿಸಿ ಆದೇಶ
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯಲ್ಲಿ ಪಡಿತರ ಚೀಟಿ ಹಿಂಭಾಗ ಏಸು ಕ್ರಿಸ್ತನ ಫೋಟೋ ಹಾಕಲಾಗಿದ್ದು ಕೆಳಗೆ ನ್ಯೂ ಪುಷ್ಪ ಸ್ಟೂಡಿಯೋ ದೊಡ್ಡ ಆಲಹಳ್ಳಿ ಎಂದು ಮುದ್ರಿಸಲಾಗಿದೆ. ಈ ಹಿಂದೆ ಪಡಿತರ ಪಡೆಯಲು ಜನ ಸಹಿ ಹಾಕಬೇಕಿತ್ತು. ಆದ್ರೆ ಈಗ ಎಲ್ಲವೂ ಡಿಜಿಟಲ್ ಆಗಿದ್ದು ಪಡಿತರ ಚೀಟಿ ತೋರಿಸಿ ಬೆರಳಚ್ಚು ನೀಡಿದರೆ ಸಾಕು. ಆದ್ರೆ ಈಗ ಪಡಿತರ ಚೀಟಿಯಲ್ಲಿ ಏಸು ಕ್ರಿಸ್ತನ ಫೋಟೋ ಮುದ್ರಿಸಲಾಗಿದ್ದು ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳು ಮುಂದಾಗಿದ್ದು ಸತ್ಯ ಬಯಲಾಗಲಿದೆ.