ಬೆಂಗಳೂರು : ಶಿಕ್ಷಣ ಇಲಾಖೆ ಮತ್ತೊಂದು ಎಡವಟ್ಟು ಮಾಡಿದ್ದು, CBSC ಪಠ್ಯದಲ್ಲಿ ತುಂಗಭದ್ರಾ ನದಿ ಆಂಧ್ರಪ್ರದೇಶದಲ್ಲಿದೆ ಎಂದು ಉಲ್ಲೇಖಿಸಿದೆ.
ನದಿಗಳ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡುವ ಕೆಲಸ ಮಾಡುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪ ಮಾಡಿದೆ. 4 ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿ CBSC ಪಠ್ಯದಲ್ಲಿ ತುಂಗಭದ್ರಾ ನದಿ ಆಂಧ್ರಪ್ರದೇಶದಲ್ಲಿದೆ ಎಂದು ಉಲ್ಲೇಖಿಸಲಾಗಿದೆ, ಪುಸ್ತಕ ಸಮಿತಿ ಮಾಡಿರುವ ಯಡವಟ್ಟಿಗೆ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವರ ವಿರುದ್ಧ ಎಎಪಿ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಕಿಡಿಕಾರಿದ್ದಾರೆ.
ತುಂಗ ಭದ್ರೆ ಆಂದ್ರ ಪ್ರದೇಶದಲ್ಲಿದೆ ಅಂದರೆ ಇದಕ್ಕಿಂತ ದೊಡ್ಡ ಅವಮಾನ ಇನ್ನೇನಿದೆ ಮುಖ್ಯಮಂತ್ರಿಗಳೇ..?? ನಾಳೆ ಬಳ್ಳಾರಿ ಆಂದ್ರದಲ್ಲಿದೆ, ಬೆಳಗಾವಿ ಮಹಾರಾಷ್ಟ್ರದಲ್ಲಿದೆ ಅಂತ ಮಕ್ಕಳಿಗೆ ಕಲಿಸಿದರೆ ಯಾರು ಕೇಳೋರು..? ಎಂದು ಕಿಡಿಕಾರಿದ್ದಾರೆ. 10ನೇ ಪಾಠ ವಾಟರ್ ರಿಸೋಸರ್ಸ್ ಎಂಬ ಅಧ್ಯಾಯನದಲ್ಲಿ ನದಿ, ಅಣೆಕಟ್ಟುಗಳ ಪರಿಚಯ ಅಂಶ ಇರುತ್ತೆ. ಇದರಲ್ಲಿ ತುಂಗಾಭದ್ರ ಜಲಾಶಯ ಆಂಧ್ರ ಪ್ರದೇಶದಲ್ಲಿ ಇದೆ ಎಂದು ಉಲ್ಲೇಖ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ತುಂಗ ಭದ್ರೆ ಆಂದ್ರ ಪ್ರದೇಶದಲ್ಲಿದೆ ಅಂದರೆ ಇದಕ್ಕಿಂತ ದೊಡ್ಡ ಅವಮಾನ ಇನ್ನೇನಿದೆ ಮುಖ್ಯಮಂತ್ರಿಗಳೇ..?? ನಾಳೆ ಬಳ್ಳಾರಿ ಆಂದ್ರದಲ್ಲಿದೆ, ಬೆಳಗಾವಿ ಮಹಾರಾಷ್ಟ್ರದಲ್ಲಿದೆ ಅಂತ ಮಕ್ಕಳಿಗೆ ಕಲಿಸಿದರೆ ಯಾರು ಕೇಳೋರು..?? https://t.co/hyw4IlgEsG
— Mohan Dasari – ಮೋಹನ್ ದಾಸರಿ (@MohanDasari_) December 10, 2022
BIGG NEWS : 22 ಸಾವಿರ ವಸತಿ ರಹಿತ ಕುಟುಂಬಗಳಿಗೆ ‘ಉಚಿತ ನಿವೇಶನ’ : ಸಚಿವ ಸುಧಾಕರ್ ಘೋಷಣೆ
GOOD NEWS : ಉಚಿತ ಆರೋಗ್ಯ ಸೇವೆ ನೀಡುವ ‘ಶಾಂತಾ ಮೊಬೈಲ್ ಕ್ಲಿನಿಕ್’ಗೆ ಸಚಿವ ಸುಧಾಕರ್ ಚಾಲನೆ