ಧರ್ಮಸ್ಥಳ: ಶವ ಹೂತಿಟ್ಟಿದ್ದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿ ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ನ್ಯಾಯಾಂಗ ಬಂಧನವಾಗಿ ಜೈಲುಪಾಲಾಗಿದ್ದಾರೆ. ಈ ಬೆನ್ನಲ್ಲೇ ಧರ್ಮಸ್ಥಳ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಸೌಜನ್ಯ ಮಾವ ವಿಠಲ್ ಗೌಡಗೆ ತಲೆ ಬುರುಡೆ ಐಡಿಯಾ ನೀಡಿದ್ದೇ ಗಿರೀಶ್ ಮಟ್ಟಣ್ಣನವರ್ ಎಂಬುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಎಸ್ಐಟಿ ಎದುರು ಸೌಜನ್ಯ ಮಾವ ವಿಠ್ಠಲ್ ಗೌಡ ಅವರೇ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ. ಕಾಡಿನಲ್ಲಿ ತಲೆ ಬುರುಡೆ ಹುಡುಕಿ ತರುವಂತೆ ಐಡಿಯಾ ನೀಡಿದ್ದೇ ಗಿರೀಶ್ ಮಟ್ಟಣ್ಣನವರ್ ಎಂಬುದಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ.
ಗಿರೀಶ್ ಮಟ್ಟಣ್ಣನವರ ಪ್ಲಾನ್ ನಂತೆ ವಿಠ್ಠಲ್ ಗೌಡ ಅವರು ಒಂದು ವರ್ಷದ ಹಿಂದೆ ಬುರುಡೆ ತಂದಿದ್ದರಂತೆ. ಬಂಗ್ಲೆಗುಡ್ಡದಿಂದ ಬುರುಡೆ ಹುಡುಕಿ ತಂದಿದ್ದರಂತೆ. ವಿಠ್ಠಲ್ ಗೌಡಗೆ ಕಾರಿನ ಚಾಲಕನಾಗಿ ಪ್ರದೀಪ್ ಗೌಡ ಸಾಥ್ ನೀಡಿದ್ದರಂತೆ. ವಿಠ್ಠಲ್ ಗೌಡ ಮತ್ತು ಪ್ರದೀಪ್ ಬೆಂಗಳೂರಿಗೆ ಪ್ರಯಾಣ ಮಾಡಿದ್ದಾರೆ. ಕಾರಿನಲ್ಲೇ ಬುರುಡೆ ಬೆಂಗಳೂರಿಗೆ ವಿಠ್ಠಲ್ ಗೌಡ ಕೊಂಡೊಯ್ದಿದ್ದಾರೆ. ಬೆಂಗಳೂರಲ್ಲಿ ತಲೆ ಬುರುಡೆಯೊಂದಿಗೆ ವಿಠ್ಠಲ್ ಗೌಡ, ಪ್ರದೀವ್ ಅವರು ಗಿರೀಶ್ ಮಟ್ಟಣ್ಣನವರ್ ಭೇಟಿಯಾಗಿದ್ದಾರೆ ಎನ್ನಲಾಗುತ್ತಿದೆ.
ವಿಠ್ಠಲ್ ಗೌಡ ತಂದುಕೊಟ್ಟಂತ ಬುರುಡೆಯನ್ನು ಜಯಂತ್ ಗೆ ಗಿರೀಶ್ ಮಟ್ಟಣ್ಣನವರ್ ಅವರು ಉಜಿರೆಯ ತಿಮರೋಡಿ ಮನೆಯಲ್ಲಿ ಭೇಟಿಯಾಗಿ ನೀಡಿದ್ದರಂತೆ. ಅಲ್ಲಿಯೇ ಗ್ಯಾಂಗ್ ಒಟ್ಟಾಗಿ ಸೇರಿ ಚಿನ್ನಯ್ಯ ಕೈಗೆ ಬುರುಡೆ ಇಡಲಾಗಿತ್ತು ಎಂಬುದಾಗಿ ಎಸ್ಐಟಿ ಮುಂದೆ ಸೌಜನ್ಯ ಮಾವ ವಿಠ್ಠಲ್ ಗೌಡ ಹೇಳಿದ್ದಾರೆ ಎನ್ನಲಾಗಿದೆ.
BREAKING: ರಮೇಶ್ ಬಾಬು ಸೇರಿ ನಾಲ್ವರನ್ನು ವಿಧಾನ ಪರಿಷತ್ ಸದಸ್ಯರಾಗಿ ನಾಮನಿರ್ದೇಶನ: ರಾಜ್ಯ ಸರ್ಕಾರ ಆದೇಶ
SHOCKING : ವಿವಾಹಿತನಿಂದ ನಿರಂತರ ಅತ್ಯಾಚಾರ : ಮಗುವಿಗೆ ಜನ್ಮ ನೀಡಿದ 11 ವರ್ಷದ ಬಾಲಕಿ.!