ಬೆಂಗಳೂರು: ಮದ್ಯಪ್ರಿಯರಿಗೆ ಮತ್ತೊಂದು ಬಿಗ್‌ಶಾಕ್ ಎದುರಾಗಿದೆ. ರಾಜ್ಯ ಸರ್ಕಾರದ ಆದಾಯವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಈಗ ಮದ್ಯದದ ಮೇಲಿನ ಬೆಲೆಯನ್ನು ಹೆಚ್ಚಳ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
ಹೌದು, ಒಟಿ ಸೇರಿ ಇತರ ಕಡಿಮೆ ದರದ 180 ಎಂಎಲ್ ಬಾಟಲ್ ಮೇಲೆ 15 ರೂ. ಹೆಚ್ಚಳ ಮಾಡಲಿದೆ ಎನ್ನಲಾಗಿದೆ. ಅಂದರೆ ರಿಜನಲ್ ಚಾಯ್, ಹಝಾದ್, ರಾಜವಿಸ್ಕ್ತಿ ಸೇರಿದಂತೆ ಇತರೆ ಚೀಪ್ ಲಿಕ್ಕರ್‌ಗಳ ಬೆಲೆ ಹೆಚ್ಳಳ ಮಾಡುವುದಕ್ಕೆ ಸರ್ಕಾರ ಅಧಿಸೂಚನೆ ಹೊರಡಿಸಿದೆ ಎನ್ನಲಾಗಿದೆ.ಪ್ರಸಕ್ತ ವರ್ಷದ ಜನವರಿ ಮತ್ತು ಏಪ್ರಿಲ್‌ನಲ್ಲಿಯೂ ಬಿಯರ್ ದರ ಹೆಚ್ಚಿಸಲಾಗಿದೆ, ಪ್ರತಿನಿತ್ಯ ಮದ್ಯ ಮಾರಾಟದಿಂದಾಗಿ ಸಂಪನ್ಮೂಲ | 80-100 ಕೋಟಿ ರೂ. ಆದಾಯ ಸರ್ಕಾರಕ್ಕೆ ಬರುತ್ತಿದೆ