ಕೆಎನ್ಎನ್ಡಿಜಿಟಲ್ಡೆಸ್ಕ್: ರಾಜ್ಯದಲ್ಲಿರುವ ದಲಿತರ ಪೈಕಿ ಹೆಚ್ಚು ಜನಸಂಖ್ಯೆಯಲ್ಲಿ ಮಾದಿಗರಿಗೆ ಕಾಂಗ್ರೆಸ್ನಲ್ಲಿ ಸರಿಯಾದ ರಾಜಕೀಯ ಸ್ಥಾನಮಾನ ದೊರಕುತ್ತಿಲ್ಲ ಎನ್ನುವ ಹೊತ್ತಿನಲ್ಲಿ ಈಗ ಕಾಂಗ್ರೆಸ್ಗೆ ಮತ್ತೊಂದು ಹೊಡೆತ ನೀಡಲು ಬಿಜೆಪಿ ಸಿದ್ದವಾಗಿದೆ.
ಹಿರಿಯ ಐಎಎಸ್ ಅಧಿಕಾರಿ ಮತ್ತು ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅನಿಲ್ ಕುಮಾರ್ ಬಿಹೆಚ್ ಅವರು 2023 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಪಡೆದು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಈ ಮೂಲಕ ತುಮಕೂರಿನ ಮತ್ತೊಂದು ಕ್ಷೇತ್ರದಲ್ಲಿ ಕಮಲ ಬಾವುಟವನ್ನು ಹಾರಿಸಲು ಬಿಜೆಪಿ ಸಿದ್ದವಾಗಿದ್ದು, ಎಲ್ಲವು ಅಂದುಕೊಂಡತೇ ಆದ್ರೆ, ಅನಿಲ್ ಕುಮಾರ್ ಬಿಹೆಚ್ ಡಾ.ಜಿ.ಪರಮೇಶ್ವರ ಅವರ ವಿರುದ್ಧ ಸ್ಪರ್ಧಿಸುವ ಸಾಧ್ಯತೆ ಹೆಚ್ಚಳವಾಗಿದೆ. ಕೊರಟಗೆರೆಯಲ್ಲಿ ಮಾದಿಗ ಜಾತಿಯ ಮತಗಳೇ ನಿರ್ಣಾಕವಾಗಿದ್ದು, ಸಮುದಾಯದ ನಾಯಕರುಗಳು ಕೂಡ ಈ ಬಾರಿ ಮಾದಿಗರಿಗೆ ಓಟು ಹಾಕಲು ಮುಂದಾಗಿದ್ದಾರೆ ಎನ್ನಲಾಗಿದೆ. ಇದಲ್ಲದೇ ಕಾಂಗ್ರೆಸ್ ಒಳಮೀಸಲಾತಿಗೆ ಸಂಬಂಧಪಟ್ಠಂತೆ ಮಾಡಿದ್ದೇ ಎನ್ನಲಾದ ಮೋಸ ಕೂಡ ಜಿಲ್ಲಾ ಮಾದಿಗ ಸಮುದಾಯದಲ್ಲಿ ಸಿಟ್ಟು ಮೂಡಿಸಿದ್ದು, ಪರಮೇಶ್ವರ್ ಅವರ ಮೇಲಿನ ಸಿಟ್ಟು ಕೂಡ ಇಲ್ಲಿ ಓಡು ಕೆಲಸ ಮಾಡಲಾಗುತ್ತಿದೆ ಎನ್ನಲಾಗಿದೆ.