ಬೆಂಗಳೂರು : ಇಂದು ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಮೂರು ಅಪಘಾತಗಳು ಸಂಭವಿಸಿದ್ದು, ಮೊದಲನೇ ಅಪಘಾತ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಬಳಿ ನಡೆದಿದ್ದು, ಇನ್ನು ಎರಡನೇ ಅಪಘಾತ ಯಶವಂತಪುರದ ತಡೆಗೋಡೆಗೆ ಬೊಲೆರೋ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.ಇದೀಗ ಮೂರನೇ ಅಪಘಾತ ಸಂಭವಿಸಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ದಟ್ಟ ಮಂಜು ಹಿನ್ನೆಲೆಯಲ್ಲಿ ರಸ್ತೆ ಕಾಣದೆ ಸಿಮೆಂಟ್ ಲಾರಿ ಒಂದು ಪಲ್ಟಿ ಆಗಿರುವ ಘಟನೆ ನಡೆದಿದೆ.
ಹೌದು ದಟ್ಟ ಮಂಜು ಕವಿದಿದ್ದ ಹಿನ್ನೆಲೆ ರಸ್ತೆ ಕಾಣದೆ ಸಿಮೆಂಟ್ ಲಾರಿ ಪಲ್ಟಿಯಾಗಿದೆ. ಇಂದು ಬೆಳಿಗ್ಗೆ ಕೊಡಿಪಾಳ್ಯ ಕೆರೆಯ ಏರಿಯ ಬಳಿ ಸಿಮೆಂಟ್ ಬಲ್ಕರ್ ಲಾರಿ ಪಲ್ಟಿಯಾಗಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೋಡಿಪಾಳ್ಯದ ಕೆರೆ ಏರಿ ಬಳಿ ಇಂದು ಬೆಳಿಗ್ಗೆ ಮಂಜು ಕವಿದಿದ್ದ ಹಿನ್ನೆಲೆಯಲ್ಲಿ ರಸ್ತೆ ಕಾಣದೆ ಸಿಮೆಂಟ್ ಲಾರಿ ಪಲ್ಟಿಯಾಗಿ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಲಾರಿಯ ಚಾಲಕ ಮತ್ತು ಕ್ಲೀನರ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ರಸ್ತೆಯಲ್ಲಿ ಯಾವುದೇ ವಾಹನಗಳ ಸಂಚಾರವಿಲ್ಲದ ಕಾರಣ ಭಾರಿ ಅನಾಹುತ ಒಂದು ತಪ್ಪಿದೆ.ಅಪಘಾತದ ಕುರಿತಂತೆ ದೊಡ್ಡ ಬೆಳವಂಗಲ ಪೊಲೀಸ್ ಠಾಣೆಯಲ್ಲಿ ಈ ಒಂದು ಘಟನೆ ನಡೆದಿದೆ.