ಬೆಂಗಳೂರು : ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, 2 ಡಿ ಮೀಸಲಾತಿ ನೀಡಲು ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಈ ಕುರಿತು ಸುದ್ದಿಗಾರರಿಗೆ ಕೂಡಲಸಂಗಮ ಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು, ಮೀಸಲಾತಿ ಸಿಕ್ಕಿದೆ ಎಂದು ಹಿಗ್ಗುವುದು ಬೇಡ, ಸಿಕ್ಕಿಲ್ಲ ಎಂದು ಕುಗ್ಗುವುದು ಬೇಡ ಎಂದು ಹೇಳಿದರು.
ಸಚಿವ ಸಂಪುಟದ ವರದಿ ಇನ್ನೂ ಕೂಡ ನಮ್ಮ ಕೈಸೇರಿಲ್ಲ. ಸರ್ಕಾರ ಹೊಸ ವರ್ಗಗಳನ್ನು ಮಾಡಿರುವ ಬಗ್ಗೆ ಮತ್ತು ನಾವು ಕೇಳಿರುವ ಮೀಸಲಾತಿ ಪ್ರಮಾಣ ನಮಗೆ ಕೊಡಲಾಗಿದೆಯೇ ಎಂಬುದನ್ನು ಚರ್ಚೆ ಮಾಡುತ್ತೇವೆ , ಪ್ರವರ್ಗ 2Aಗೆ ಸೇರ್ಪಡೆಯಾದರೆ ಶೇ.15 ಮೀಸಲಾತಿ ಅನುಕೂಲ ಸಿಗುತ್ತಿತ್ತು. ಹಾಗಾಗಿ ಸರ್ಕಾರದ ಮುಂದೆ ಮೀಸಲಾತಿಗೆ ಬೇಡಿಕೆ ಇಡಲಾಗಿತ್ತು. ಇದೀಗ 2D ಮೀಸಲಾತಿ ಪಂಚಮಸಾಲಿ ಸಮುದಾಯಕ್ಕೆ ಸಿಕ್ಕಿದೆ ಎಂದರು.
ಇಂದು ನಡೆದ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆಯಲ್ಲಿ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ. ಸಂಪುಟ ಸಭೆ ಬಳಿಕ ಸಚಿವ ಮಾಧುಸ್ವಾಮಿ ಈ ಕುರಿತು ಮಾಹಿತಿ ನೀಡಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ನೀಡುವುದಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ಪಂಚಮಸಾಲಿ ಸಮುದಾಯಕ್ಕೆ ಗುಡ್ ನ್ಯೂಸ್ ಸಿಕ್ಕಂತಾಗಿಪಂಚಮಸಾಲಿ ಮೀಸಲಾತಿ’ ಗೆ ಒತ್ತಾಯಿಸಿ ಪಂಚಮಸಾಲಿ ಸಮುದಾಯದ ಮುಖಂಡರು ಭಾರೀ ಪ್ರತಿಭಟನೆ ನಡೆಸಿದ್ದು, ಇಂದಿನ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಪ್ರಕಟವಾಗಿದೆ.
‘ಸಂಗೊಳ್ಳಿ ರಾಯಣ್ಣ’ ಸೇರಿ ನಾಲ್ಕು ಪ್ರತಿಮೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಬೊಮ್ಮಾಯಿ
BREAKING NEWS : ‘ಪಂಚಮಸಾಲಿ’ ಸಮುದಾಯಕ್ಕೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ 2 ಡಿ ಮೀಸಲಾತಿ ಘೋಷಣೆ