ಹುಬ್ಬಳ್ಳಿ : ಇತ್ತೀಚಿಗೆ ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತೆ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ವಿದ್ಯಾರ್ಥಿ ನೇಹಾ ಹಿರೇಮಠ ಕೊಲೆ ಮಾಸುವ ಮುನ್ನವೇ ಇದೀಗ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಮಲಗಿದ್ದ ಯುವತಿಗೆ ಚಾಕು ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹೌದು ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಈ ಒಂದು ಘಟನೆ ನಡೆದಿದ್ದು, ಚಾಕುವಿನಿಂದ ಇರಿದು ಅಂಜಲಿ ಅಂಬಿಗರ ಎನ್ನುವ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ನಸುಕಿನ ವೇಳೆ ಯುವತಿ ಮಲಗಿದ್ದಾಗ ಆಕೆಯ ಪ್ರಿಯಕರ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೇ.
ಪ್ರಿಯಕರನ ಹೆಸರು ವಿಶ್ವ ಅಲಿಯಾಸ್ ಗಿರೀಶ್ ಎಂದು ಹೇಳಲಾಗುತ್ತಿದ್ದು, ಕೊಲೆಯಾದ ಅಂಜಲಿಗೆ ಮೈಸೂರಿಗೆ ಬಾ ಎಂದು ಧಮ್ಕಿ ಹಾಕಿದ್ದಾನೆ. ಒಂದು ವೇಳೆ ಮೈಸೂರಿಗೆ ಬರದೆ ಹೋದರೆ ನೇಹಾ ಕೊಂದಂತೆ ನಿನ್ನನ್ನು ಕೊಳ್ಳುತ್ತೇನೆ ಎಂದು ಬೆದರಿಕೆ ಒಡ್ಡಿದ್ದಾನೆ.ಈ ಒಂದು ವಿಷಯ ಅವಳ ಅಜ್ಜಿ ಗಂಗಮ್ಮ ಪೊಲೀಸರಿಗೆ ದೂರು ನೀಡಲು ಹೋದಾಗ ಇದು ಮೂಢನಂಬಿಕೆ ಎಂದು ಪೊಲೀಸರು ಕೂಡ ಅದನ್ನ ನಿರ್ಲಕ್ಷಿಸಿದ್ದಾರೆ.
ಆದರೆ ಇದೀಗ ನಸುಕಿನ ಜಾವ ಅಂಜಲಿ ಮನೆಗೆ ಬಂದು ಮನೆಯಲ್ಲಿ ಸುಮಾರು ನಾಲ್ಕು ಜನ ಇದ್ದರೂ ಕೂಡ, ಅವರ ಎದುರಲ್ಲಿಯೇ ವಿಶ್ವ ಅಂಜಲಿಗೆ ಹಲವಾರು ಬಾರಿ ಚುಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಅಲ್ಲದೆ ಆರೋಪಿ ವಿಶ್ವನ ಮೇಲೆ ಬೈಕು ಕಳ್ಳತನ ಸೇರಿ ಹಲವು ಪ್ರಕರಣಗಳು ಇವೆ ಎಂದು ಹೇಳಲಾಗುತ್ತಿದೆ.ಘಟನೆ ಕುರಿತಂತೆ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.