ಹುಬ್ಬಳ್ಳಿ : ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ನಸುಕಿನ ಜಾವದಲ್ಲಿ ಅಂಜಲಿ ಅಂಬೀಗೆರ ಎನ್ನುವ ಯುವತಿಯನ್ನು ಪ್ರೀತಿ ನಿರಾಕರಣೆ ಮಾಡಿದ್ದಕ್ಕಾಗಿ ವಿಶ್ವ ಅಲಿಯಾಸ್ ಗಿರೀಶ್ ಸಾವಂತ್ ಎನ್ನುವ ಯುವಕ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದ. ಇದೀಗ ಆರೋಪಿಯಾಗಿರುವ ವಿಶ್ವ ಅವರ ತಾಯಿ ಶ್ವೇತಾ ಹೇಳಿಕೆ ನೀಡಿದ್ದು, ಅಂತಹ ಮಗ ನನಗೆ ಬೇಕಿಲ್ಲ. ನಾನು ಅವನನ್ನು ನೋಡಲು ಎಲ್ಲಿಯೂ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಜಲಿ ಅಂಬಿಗೇರ ಕೊಲೆ ಪ್ರಕರಣ ಆರೋಪಿಯ ವಿಶ್ವ ತಾಯಿ ಶ್ವೇತಾ ಹೇಳಿಕೆ ನೀಡಿದ್ದು, ನನಗೆ ಇವನೊಬ್ಬನೆ ಮಗ ಏನು ಕೆಲಸ ಮಾಡುತ್ತಿದ್ದನು ಗೊತ್ತಿಲ್ಲ. ನ್ಯಾಯಾಲಯ ಅವನಿಗೆ ಏನೂ ಶಿಕ್ಷೆ ಕೊಡುತ್ತದೆಯೋ ಕೊಡಲಿ ಎಂದು ತಿಳಿಸಿದರು.
ನನ್ನ ಮಗ ವಿಶ್ವ ಮಾಡಿದ ತಪ್ಪಿಗೆ ನಾವೆಲ್ಲ ಶಿಕ್ಷೆ ಅನುಭವಿಸುತ್ತಿದ್ದೇವೆ. ಮೊದಲು ವಿಶ್ವ ಚೆನ್ನಾಗಿದ್ದ ನಾಲ್ಕು ವರ್ಷದ ನಂತರ ಹೀಗೆ ಆಗಿದ್ದಾನೆ. ಅಂತಹ ಮಗ ನನಗೆ ಬೇಡ ಅವನನ್ನು ನೋಡಲು ಹೋಗುವುದಿಲ್ಲ ಎಂದು ಹುಬ್ಬಳ್ಳಿಯಲ್ಲಿ ಆರೋಪಿ ವಿಶ್ವತಾಯಿ ಶ್ವೇತಾ ಹೇಳಿಕೆ ನೀಡಿದರು.
ಘಟನೆ ಹಿನ್ನೆಲೆ?
ಆರೋಪಿ ಗಿರೀಶ್ ಮೈಸೂರಿನ ಮಹಾರಾಜ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ. ಅಂಜಲಿ ಹಾಗೂ ಗಿರೀಶ್ ಪರಿಸ್ಪರ ಪ್ರೀತಿಸುತ್ತಿದ್ದರು. ಒಂದು ವಾರದ ಹಿಂದೆ ಅಂಜಲಿ 2 ಸಾವಿರ ರೂ. ಹಣ ಕೇಳಿದ್ದರು. ಆದರೆ ಗಿರೀಶ್ 1ಸಾವಿರ ರೂ. ಮಾತ್ರ ಫೋನ್ ಪೇ ಮಾಡಿದ್ದ. ನಂತರ ಅಂಜಲಿ ಗಿರೀಶ್ ನಂಬರ್ ಬ್ಲ್ಯಾಕ್ ಲೀಸ್ಟ್ ನಲ್ಲಿ ಹಾಕಿದ್ದಳು. ಇದರಿಂದ ಸಿಟ್ಟಿಗೆದ್ದ ಗಿರೀಶ್ ಮುಂಜಾನೆ 4,30 ರ ಸುಮಾರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ.
ಕೊಲೆ ಮಾಡಿದ ಬಳಿಕ ಗಿರೀಶ್ ಹುಬ್ಬಳ್ಳಿಯಿಂದ ಹಾವೇರಿಗೆ ಬಂದಿದ್ದ. ಹಾವೇರಿಯಿಂದ ಮೈಸೂರಿಗೆ ರೈಲು ಹತ್ತಿದ್ದ. ಮೈಸೂರಿಗೆ ಹೋಗಿ ರಾತ್ರಿ ಉಳಿದುಕೊಂಡು ಮತ್ತೆ ಮೈಸೂರಿನಿಂದ ಹುಬ್ಬಳ್ಳಿಗೆ ರೈಲಿನಲ್ಲಿ ತೆರಳುತ್ತಿದ್ದ ಈತ ರೈಲಿನಲ್ಲಿಯೂ ಕಿರುಕ್ ಮಾಡಿದ್ದ. ರೈಲಿನಲ್ಲಿ ತುಮಕೂರು ಮೂಲದ ಮಹಿಳೆಯೊಬ್ಬರಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ್ದ. ಈ ವೇಳೆ ಉಳಿದ ಪ್ರಯಾಣಿಕರು ಆರೋಪಿ ಗಿರೀಶ್ ನನ್ನು ಹಿಡಿದು ಥಳಿಸಿದ್ದರು. ಅಲ್ಲದೇ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಅಂಜಲಿಯನ್ನು ಕೊಲೆ ಮಾಡಿದ ಬಳಿಕ ಹುಬ್ಬಳ್ಳಿಯಿಂದ ಹಾವೇರಿಗೆ ತೆರಳಿದ್ದ ಆರೋಪಿ ಬಳಿಕ ಹಾವೇರಿಯಿಂದ ಮೈಸೂರಿಗೆ ರೈಲಿನಲ್ಲಿ ಹೋಗಿದ್ದ. ಬಳಿಕ ಮಹಾರಾಜ ಹೋಟೆಲ್ ನಲ್ಲಿ ಮಲಗಿದ್ದ. ನಂತರ ಮೈಸೂರಿನಿಂದ ಹುಬ್ಬಳ್ಳಿಗೆ ವಾಪಾಸ್ ಆಗುತ್ತಿದ್ದಾಗ ದಾವಣಗೆರೆಯ ಮಾಯಕೊಂಡದ ರೈಲು ನಿಲ್ದಾಣದಲ್ಲಿ ರೈಲಿನಿಂದ ಜಿಗಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದ ಈ ವೇಳೆ ಆರೋಪಿ ಗಿರೀಶನನ್ನು ಪೊಲೀಸರು ಬಂಧಿಸಿದ್ದಾರೆ.