ಬೆಂಗಳೂರು: ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರದಲ್ಲಿ ಪಶು ಆಹಾರ ದರವನ್ನು ಸರ್ಕಾರ ಪದೇ ಪದೆ ಹೆಚ್ಚಿಸುತ್ತಿದ್ದಾರೆ. ಆದರೆ ಹಾಲಿನ ದರ ಏರಿಕೆಯಲ್ಲಿ ಮಾತ್ರ ಮೀನಾಮೀಷಾ ಎಣಿಸುತ್ತಿದ್ದಾರೆ.
BIGG NEWS: ಕೋಟಿ ಕಂಠಗಳಲ್ಲಿ ಕನ್ನಡದ ಗಾನ; ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ
ಹೈನುಗಾರಿಕೆಯನ್ನ ರೈತರಿಗೆ ಲಾಭದಾಯಕ ಉದ್ದಿಮೆಯಾಗಿ ಮಾಡುವ ಬದಲಿಗೆ ರೈತರಿಗೆ ಹೊರೆಯನ್ನಾಗಿ ಮಾಡುತ್ತಿರುವ ಸರ್ಕಾರದ ವಿರುದ್ಧ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ನವೆಂಬರ್ 8
ಪ್ರತಿಭಟನೆ ನಡೆಸಲಿದ್ದಾರೆ. ರಾಜಾನುಕುಂಟೆ ಬಳಿಯ ಪಶು ಆಹಾರ ಉತ್ಪಾದನಾ ಘಟಕದ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
BIGG NEWS: ಕೋಟಿ ಕಂಠಗಳಲ್ಲಿ ಕನ್ನಡದ ಗಾನ; ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿನ ದರ ಏರಿಕೆ ಮಾಡದ ಸರ್ಕಾರ ಪಶು ಆಹಾರವನ್ನು ಮಾತ್ರ ಪದೇ ಪದೆ ಹೆಚ್ಚಳ ಮಾಡುತ್ತಿದೆ. ವೈಜ್ಞಾನಿಕವಾಗಿ ಹಾಲಿನ ದರವನ್ನು 100 ರೂ.ಗೆ ಏರಿಕೆ ಮಾಡಬೇಕು. ಆದರೆ, ನಾವು ಕೇಳುತ್ತಿರುವುದು 40 ರೂಪಾಯಿ ನಿಗದಿ ಮಾಡಿ ಎಂದು. ಇದಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ ನವೆಂಬರ್ 8 ರಂದು ಅನಿರ್ದಿಷ್ಟಾವಧಿ ಧರಣಿಯನ್ನ ರಾಜಾನುಕುಂಟೆ ಬಳಿಯ ಪಶು ಆಹಾರ ಉತ್ಪಾದಕ ಘಟಕದ ಮುಂಭಾಗ ಹಮ್ಮಿಕೊಂಡಿದ್ದೇವೆ.