ನವದೆಹಲಿ: ಹಿರಿಯ ರೈಲ್ವೆ ಅಧಿಕಾರಿ ಅನಿಲ್ ಕುಮಾರ್ ಲಹೋಟಿ ಅವರು ರೈಲ್ವೆ ಮಂಡಳಿಯ ಮುಂದಿನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಲಿದ್ದಾರೆ. ಪ್ರಸ್ತುತ, ಅವರು ರೈಲ್ವೆ ಮಂಡಳಿಯ ಸದಸ್ಯ (ಮೂಲಸೌಕರ್ಯ) ಆಗಿದ್ದಾರೆ. ಇವರು ಜನವರಿ 1, 2023 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಹಾಲಿ ರೈಲ್ವೆ ಮಂಡಳಿ ಅಧ್ಯಕ್ಷ ಮತ್ತು ಸಿಇಒ ವಿ.ಕೆ.ತ್ರಿಪಾಠಿ ಅವರು ಡಿಸೆಂಬರ್ 31 ರಂದು ನಿವೃತ್ತರಾಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದ ನೇಮಕಾತಿ ಸಮಿತಿಯು ಲಹೋಟಿ ಅವರ ನೇಮಕಕ್ಕೆ ಅನುಮೋದನೆ ನೀಡಿದೆ.
ಸಮಗ್ರ ರೈಲ್ವೆ ಸೇವೆಯಾದ ಇಂಡಿಯನ್ ರೈಲ್ವೆ ಮ್ಯಾನೇಜ್ಮೆಂಟ್ ಸರ್ವೀಸ್ (ಐಆರ್ಎಂಎಸ್) ಗೆ ಸರ್ಕಾರ ಅಧಿಸೂಚನೆ ಹೊರಡಿಸಿದ ನಂತರ ರೈಲ್ವೆ ಮಂಡಳಿಯ ಮುಖ್ಯಸ್ಥರ ಮೊದಲ ನೇಮಕಾತಿ ಇದಾಗಿದೆ.
ಲಹೋಟಿ ಅವರು 1984 ರ ಇಂಜಿನಿಯರ್ಸ್ ಬ್ಯಾಚ್ನ ಭಾರತೀಯ ರೈಲ್ವೆ ಸೇವೆಗಳ ಸದಸ್ಯರಾಗಿದ್ದಾರೆ. ಈ ಹಿಂದೆ ಅವರನ್ನು ಪಶ್ಚಿಮ ರೈಲ್ವೆಯ ಜನರಲ್ ಮ್ಯಾನೇಜರ್ ಆಗಿ ನೇಮಿಸಲಾಗಿತ್ತು. ಭಾರತೀಯ ರೈಲ್ವೆಯ ನಾಗ್ಪುರ, ಜಬಲ್ಪುರ ಮತ್ತು ಭುಸಾವಲ್ ವಿಭಾಗಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಮಧ್ಯಪ್ರದೇಶದ ಗುನಾ ಮೂಲದವರಾದ ಲಹೋಟಿ ಐಐಟಿ ರೂರ್ಕಿಯಿಂದ ಮಾಸ್ಟರ್ ಆಫ್ ಎಂಜಿನಿಯರಿಂಗ್ ಪದವಿ ಪಡೆದರು.
BIG NEWS: ಇಂದಿನಿಂದ ರಾಜ್ಯಾಧ್ಯಂತ ‘ಮಾಸ್ಕ್ ಕಡ್ಡಾಯ’: ‘ಹೊಸ ವರ್ಷ ಸಂಭ್ರಮ’ಕ್ಕೆ ಈ ಷರತ್ತು ಅನ್ವಯ