ಹೈದ್ರಾಬಾದ್ ; ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಸಂಚಲನತ್ಮಾಕ ನಿರ್ಧಾರ ಕೈಗೊಂಡಿದ್ದಾರೆ. ಇಂದಿನಿಂದ ಎಪಿಯಾದ್ಯಂತ ಕಟ್ಟುನಿಟ್ಟಾದ ಪ್ಲಾಸ್ಟಿಕ್ ನಿಷೇಧವನ್ನ ಜಾರಿಗೆ ತರಲು ಆದೇಶಿಸಿದ್ದಾರೆ. ಮೊದಲ ಹಂತವಾಗಿ ಎಪಿಯಾದ್ಯಾಂತ ಇರುವ ಪ್ಲಾಸ್ಟಿಕ್ ಫ್ಲೆಕ್ಸಿ, ಬ್ಯಾನರ್ಗಳನ್ನ ತೆಗೆದು ಹಾಕುವಂತೆ ಆದೇಶಿಸಿದರು. ಆದ್ರೆ, ಇಂದು ಅವ್ರು ವಿಶಾಖಪಟ್ಟಣಕ್ಕೆ ಬರುತ್ತಿರುವಾಗ ಎಲ್ಲ ಕಡೆಯೂ ಫ್ಲೆಕ್ಸಿಗಳು ರಾರಾಜಿಸುತ್ತಿದ್ವು. ಅವೆಲ್ಲ ಅವರದ್ದೇ ಆಗಿದ್ದು, ಅವುಗಳನ್ನ ನೋಡಿ ಕೆಂಡಮಂಡಲರಾಗಿದ್ದಾರೆ. ಇನ್ನು ಕೂಡಲೇ ಕಿತ್ತೆಸೆಯುವಂತೆ ಆದೇಶಿಸಿದ್ದಾರೆ. ಆಗ ಅವು ಬಟ್ಟೆಯ ಬ್ಯಾನರ್ಗಳು ಎಂದು ಅಧಿಕಾರಿಗಳು ತಿಳಿಸಿದ್ದು, ಜಗನ್ ಸಂತಸ ವ್ಯಕ್ತಪಡಿಸಿದ್ದಾರೆ.
ಹೌದು, ಭೇಟಿ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಲ್ಲಿಕಾರ್ಜುನ ಅವರನ್ನ ಮುಖ್ಯಮಂತ್ರಿ ಜಗನ್ ಅಭಿನಂದಿಸಿದರು. ಯಾಕೆಂದ್ರೆ, ಸಿಎಂ ಜಗನ್ ಏರ್ ಪೋರ್ಟ್ʼನಿಂದ ಬೀಚ್ ರೋಡ್ʼವರೆಗೆ ತಮ್ಮದೇ ಫ್ಲೆಕ್ಸ್ ನೋಡಿ, ಪ್ಲಾಸ್ಟಿಕ್ ನಿಷೇಧ ಕಾರ್ಯಕ್ರಮಕ್ಕೆ ಹೋಗುವಾಗ ಫ್ಲೆಕ್ಸ್ ಹಾಕುವುದು ಸರಿಯಲ್ಲ ಎಂದು ಜಗನ್ ಕಿಡಿಕಾರಿದ್ರು. ಜನತೆಗೆ ತಪ್ಪು ಸಂದೇಶ ನೀಡುತ್ತಿದ್ದಾರಾ? ಎಂದು ಜಿಲ್ಲಾಧಿಕಾರಿಯನ್ನ ಪ್ರಶ್ನಿಸಿದರು. ಆಗ ಜಿಲ್ಲಾಧಿಕಾರಿ ಅವು ಪ್ಲಾಸ್ಟಿಕ್ ಫ್ಲೆಕ್ಸ್ ಅಲ್ಲ.. ಬಟ್ಟೆಯಿಂದ ಮಾಡಿದ್ದು ಎಂದು ವಿವರಿಸಿದರು. ಆಗ ಸಿಎಂ ಜಗನ್ ಸಂತಸ ವ್ಯಕ್ತಪಡಿಸಿದರು ಎನ್ನಲಾಗ್ತಿದೆ.
ರಾಜ್ಯಾದ್ಯಂತ ಪ್ಲಾಸ್ಟಿಕ್ ಫ್ಲೆಕ್ಸ್ ನಿಷೇಧ ಕಟ್ಟುನಿಟ್ಟಾಗಿ ಘೋಷಿಸಲಾಗಿದೆ. ಅಲ್ಲದೇ ತಿರುಪತಿಯನ್ನ ಈಗಾಗಲೇ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಮಾಡಲಾಗಿದೆ.