ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗಂಧದಗುಡಿ ಮೂಲಕ ಮತ್ತೆ ಕನ್ನಡಿಗರ ಎದುರಿಗೆ ಬಂದಿದ್ದಾರೆ. ಅಪ್ಪುವನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ. ಕೊನೆಯ ಚಿತ್ರ ಗಂಧದಗುಡಿ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಈ ನಡುವೆ ನಂದಿನಿ ಹಾಲಿನ ಪ್ಯಾಕೇಟ್ನಲ್ಲಿ ಗಂಧದಗುಡಿ ಹೆಸರು ಪ್ರಕಟಿಸುವ ಮೂಲಕ ಅಪ್ಪುಗೆ ಕೆಎಂಎಫ್ನಿಂದ ವಿಶೇಷ ಗೌರವ ಸಲ್ಲಿಸಿದ್ದಾರೆ
ಇತ್ತ ಗಂಧದಗುಡಿ ಸಿನಿಮಾಗೆ ಕೆಎಂಎಫ್ ಸಹ ತನ್ನ ಬೆಂಬಲ ನೀಡಿದೆ. ಈ ಮೂಲಕ ಬ್ರಾಂಡ್ ಅಂಬಾಸಿಡರ್ ಆಗಿದ್ದ ಪುನೀತ್ ರಾಜ್ಕುಮಾರ್ ಅವರಿಗೆ ಗೌರವ ಸಲ್ಲಿಸಲು ಮುಂದಾಗಿದೆ. ನಂದಿನಿ ಹಾಲಿನ ಪ್ಯಾಕೇಟ್ ನಲ್ಲಿ ಗಂಧದಗುಡಿ ಹೆಸರನ್ನು ಮುದ್ರಿಸಿದೆ ಕೆಎಂಎಫ್ ವಿಭಿನ್ನವಾಗಿ ಗೌರವ ತೋರಿದೆ.
ಮುಂದಿನ 15 ದಿನಗಳ ಕಾಲ ಹಾಲಿನ ಪ್ಯಾಕೆಟ್ ಮೇಲೆ ಗಂಧದಗುಡಿ ಹೆಸರನ್ನು ಮುದ್ರಿಸಲು KMF ನಿರ್ಧರಿಸಿದೆ. ಕರ್ನಾಟಕ ರತ್ನ ನೀಡುತ್ತಿರುವ ಸಲುವಾಗಿಯೂ ಈ ರೀತಿ ಗೌರವಿಸಲು ಕೆಎಂಎಫ್ ನಿರ್ಧರಿಸಲಾಗಿದೆ. ಪುನೀತ್ ರಾಜ್ಕುಮಾರ್ ಈ ಹಿಂದೆ KMFನ ಬ್ರಾಂಡ್ ಅಂಬಾಸಿಡರ್ ಆಗಿದ್ರು. ಹೀಗೆ ತನ್ನ ಅಂಬಾಸಿಡರ್ ಆಗಿದ್ದ ಅಪ್ಪು ರೈತರ ಸಹಾಯಕ್ಕೂ ಕೈ ಜೋಡಿಸಿದ್ದರು. ಹೀಗಾಗಿ ಕೆಎಂಎಫ್ ಈ ಮೂಲಕ ವಿಶೇಷವಾಗಿ ಗೌರವ ಸಲ್ಲಿಸಲು ಕೆಎಂಎಫ್ ಮುಂದಾಗಿದೆ.
ನಂದಿನಿ ಹಾಲಿನ ಪ್ಯಾಕೆಟ್ನಲ್ಲಿ ಗಂಧದಗುಡಿ ಹೆಸರನ್ನು ಮುದ್ರಿಸಲಾಗಿದೆ. 15 ದಿನಗಳ ಕಾಲ ಹಾಲಿನ ಪ್ಯಾಕೇಟ್ ಮೇಲೆ ಹೆಸರು ಮುದ್ರಿಸಲಾಗುತ್ತದೆ.ಈ ಬಗ್ಗೆ ಮಾಧ್ಯಮಗಳಿಗೆ KMF MD ಸತೀಶ್ ಮಾಹಿತಿ ನೀಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ನೀಡುತ್ತಿರುವ ಸಲುವಾಗಿಯೂ ಈ ಗೌರವ ಸಲ್ಲಿಸಲಾಗ್ತಿದೆ ಎಂದು ಹೇಳಿದ್ರು.