ಬೆಂಗಳೂರು: ಸಾರಿಗೆ ನೌಕರರ ಮುಖಂಡ ಹೆಚ್.ವಿ ಅನಂತ್ ಸುಬ್ಬರಾವ್ ಅವರು ಸಾರ್ಥಕತೆಯನ್ನು ಮೆರೆದಿದ್ದಾರೆ. ತಮ್ಮ ದೇಹವನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾನವನ್ನು ಮಾಡುವಂತೆ ಸೂಚಿಸಿದ್ದಂತೆ, ನಾಳೆ ಅಂತಿಮ ದರ್ಶನದ ಬಳಿಕ ಮಾಡಲಾಗುತ್ತಿದೆ.
ಇಂದು ಸಂಜೆ 5.30ರ ಸುಮಾರಿಗೆ ಹೃದಯಾಘಾತಕ್ಕೆ ಸಾರಿಗೆ ನೌಕರರ ಸಂಘಟನೆಯ ಮುಖಂಡ ಹೆಚ್.ವಿ ಅನಂತ್ ಸುಬ್ಬರಾವ್ ಒಳಗಾಗಿದ್ದರು. ಅವರನ್ನು ವಿಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು.
ಅನಂತ್ ಸುಬ್ಬರಾವ್ ನಿಧನದ ಹಿನ್ನಲೆಯಲ್ಲಿ ನಾಳೆ ನಿಗದಿಯಾಗಿದ್ದಂತ ಸಾರಿಗೆ ನೌಕರರ ಬೆಂಗಳೂರು ಚಲೋ ಹೋರಾಟವನ್ನು ಮುಂದೂಡಲಾಗಿದೆ. ಮತ್ತೊಂದೆಡೆ ಅವರ ಕುಟುಂಬಸ್ಥರು ಅವರ ಆಸೆಯಂತೆ ನಾಳೆ ಅವರ ಪಾರ್ಥೀವ ಶರೀರದ ಅಂತಿಮ ದರ್ಶನದ ಬಳಿಕ, ನಿಮ್ಹಾನ್ಸ್ ಆಸ್ಪತ್ರೆಗೆ ಅನಂತ್ ಸುಬ್ಬರಾವ್ ಅವರ ದೇಹವನ್ನು ದಾನ ಮಾಡಲು ನಿರ್ಧರಿಸಿದೆ.
ವರ್ಷಕ್ಕೊಮ್ಮೆ ಹೀಗೆ ಮಾಡಿ, ನಿಮ್ಮ ಬಗೆಹರಿಯದ ದುಃಖಗಳೆಲ್ಲ ಪರಿಹಾರ ಗ್ಯಾರಂಟಿ
BREAKING: ಚಿಕ್ಕಮಗಳೂರಲ್ಲಿ ಬೋರ್ ಲಾರಿ-ಬೊಲೆರೋ ನಡುವೆ ಭೀಕರ ಅಪಘಾತ: ಓರ್ವ ಸಾವು, 7 ಜನರ ಸ್ಥಿತಿ ಗಂಭೀರ








