BREAKING: ಚಿಕ್ಕಮಗಳೂರಲ್ಲಿ ಬೋರ್ ಲಾರಿ-ಬೊಲೆರೋ ನಡುವೆ ಭೀಕರ ಅಪಘಾತ: ಓರ್ವ ಸಾವು, 7 ಜನರ ಸ್ಥಿತಿ ಗಂಭೀರ

ಚಿಕ್ಕಮಗಳೂರು: ಲಾರಿ ಹಾಗೂ ಬೊಲೆರೋ ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಬೊಲೆರೋ ವಾಹನದಲ್ಲಿದ್ದಂತ ಓರ್ವ ಸಾವನ್ನಪ್ಪಿ, 7 ಜನರು ಗಂಭೀರವಾಗಿ ಗಾಯಗೊಂಡಿರುವಂತ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ದೋರನಾಳು ಬಳಿಯಲ್ಲಿ ಎಂ.ಜಿ ಹಳ್ಳಿಯಿಂದ ಬೊಲೆರೋ ವಾಹನದಲ್ಲಿ ಕಲ್ಲತ್ತಿಗಿರಿಗೆ ತೆರಳುತ್ತಿದ್ದಾಗ ಬೋರ್ ವೆಲ್ ಲಾರಿಗೆ ಬೊಲೆರೋ ವಾಹನ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಬೊಲೆರೋ ಮುಂಭಾಗ ನಜ್ಜುಗುಜ್ಜಾಗಿದೆ. ಈ ಅಪಘಾತದಲ್ಲಿ ಬೊಲೆರೋ ವಾಹನದಲ್ಲಿದ್ದಂತ ಚಂದ್ರು(31) ಎಂಬುವರು ತರೀಕೆರೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. … Continue reading BREAKING: ಚಿಕ್ಕಮಗಳೂರಲ್ಲಿ ಬೋರ್ ಲಾರಿ-ಬೊಲೆರೋ ನಡುವೆ ಭೀಕರ ಅಪಘಾತ: ಓರ್ವ ಸಾವು, 7 ಜನರ ಸ್ಥಿತಿ ಗಂಭೀರ