ಬೆಂಗಳೂರು : ಮಸೀದಿಗಳನ್ನು ಕೆಡವಿ ಮತ್ತೆ ದೇವಸ್ಥಾನಗಳನ್ನು ನಿರ್ಮಾಣ ಮಾಡುವ ತನಕ ಹಿಂದೂ ಸಮಾಜ ವಿರಮಿಸಲ್ಲ. ಸಾವಿರ ವರ್ಷಗಳ ಸೇಡು ತೀರಿಸಿಕೊಳ್ಳುವ ಸಮಯ ಬಂದಿದೆ. ಸೇಡು ತೀರಿಸಿಕೊಳ್ಳದಿದ್ದರೆ ಇದು ಹಿಂದು ರಕ್ತವೇ ಅಲ್ಲ ಎಂದು ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ವಾಕ್ ಸಮರ ಏರ್ಪಟ್ಟಿದೆ.
ಹೆಗ್ಡೆ ಪರ ಬ್ಯಾಟ್ ಬೀಸಿದ ಕೆಎಸ್ ಈಶ್ವರಪ್ಪ
ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ ವಿಚಾರವಾಗಿ ಅನಂತ್ ಕುಮಾರ್ ಹೆಗಡೆ ಪರ ಕೆ ಎಸ್ ಈಶ್ವರಪ್ಪ ಬ್ಯಾಟಿಂಗ್ ನಡೆಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ಕೂಡ ತಿದ್ದಿಕೊಳ್ಳಬೇಕು ಮೋದಿ ಬಗ್ಗೆ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿದ್ದಾರೆ. ಹಿಜಾಬ್ ಬಗ್ಗೆ ಹೇಳಿಕೆ ಕೊಡುತ್ತಾರೆ.ಇದ್ಯಾವ ನ್ಯಾಯ? ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಪ್ರಶ್ನಿಸಿದರು.
ಬಾಬ್ರಿ ಮಸೀದಿ ನಿರ್ನಾಮದಂತೆ ಭಟ್ಕಳದಲ್ಲೂ ಮಾಡುತ್ತೇವೆ ಭಟ್ಕಳದ ಚಿನ್ನದ ಬಳ್ಳಿ ಮಸೀದಿ ಸಹ ನಿರ್ನಾಮ ಮಾಡುತ್ತೇವೆ ಎಂದು ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಕೆಎಸ್ ಈಶ್ವರಪ್ಪ ಸಮರ್ಥಿಸಿಕೊಂಡಿದ್ದು ಸಂಸದರ ಪ್ರಚೋದನ ಹೇಳಿಕೆಗೆ ಕೆಎಸ್ ಈಶ್ವರಪ್ಪ ಸಮರ್ಥಿಸಿಕೊಂಡಿದ್ದಾರೆ.
ದೇವಸ್ಥಾನಗಳನ್ನು ಹೊಡೆದು ಮಸೀದಿಗಳನ್ನು ನಿರ್ಮಿಸಿದ್ದಾರೆ ಹಾಗಾಗಿ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ ಇದೇನು ತಪ್ಪಲ್ಲ ಎಂದು ಮಾರಿ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದರು. ಇದನ್ನು ಎಲ್ಲಾ ಭಾರತೀಯರು ಸ್ವಾಗತ ಮಾಡಬೇಕು. ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದರು.
ಸಿಎಂ. ಗೊಂದಲದಲ್ಲಿದ್ದಾರೆ : ಬೊಮ್ಮಾಯಿ
ರಾಮಮಂದಿರ ವಿಚಾರವಾಗಿ ಸಿದ್ದರಾಮಯ್ಯ ಗೊಂದಲದಲ್ಲಿದ್ದಾರೆ. ಸಿದ್ದರಾಮಯ್ಯ ಹೆಸರಲ್ಲಿ ರಾಮ ಇದೆ ರಾಜಕೀಯಕ್ಕಾಗಿ ಅವರ ಹೆಸರಲ್ಲಿರುವ ರಾಮನನ್ನೇ ಕಡೆಗಣಿಸಿದರು ಅಧಿಕಾರದ ರಾಜಕಾರಣಕ್ಕಾಗಿ ರಾಮನನ್ನು ಕಡೆಗಣೆ ಮಾಡಿದ್ದಾರೆ ತಡವಾದರೂ ಸಿಎಂ ಸಿದ್ದರಾಮಯ್ಯಗೆ ಜ್ಞಾನೋದಯವಾಗಿದೆ ಜನವರಿ 22ರ ನಂತರ ಹೋಗುತ್ತೇನೆ ಅಂತಾರೆ ಬಳಿಕ ಇಲ್ಲ ಅಂತಾರೆ.
ಸಿಎಂ ಸಿದ್ದರಾಮಯ್ಯ ಗೊಂದಲದಲ್ಲಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು ಸಿದ್ದರಾಮಯ್ಯ ಆತ್ಮಸಾಕ್ಷಿ ಅಯೋಧ್ಯೆಗೆ ಹೋಗಬೇಕು ಅಂತಿದೆ ಆದರೆ ಕಾಂಗ್ರೆಸ್ ವರಿಷ್ಠರು ಹೋಗುವುದು ಬೇಡ ಅಂತಿದ್ದಾರೆ ಹೀಗಾಗಿ ಸಿದ್ದರಾಮಯ್ಯ ಗೊಂದಲದಲ್ಲಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಹೆಗ್ಡೆ ದಡ್ಡತನದಿಂದ ಮಾತನಾಡಿದ್ದಾರೆ : ಲಾಡ್
ಈ ತರಹ ಮಾತನಾಡುವುದರಿಂದ ಏನು ಸಾಧನೆ ಮಾಡುತ್ತಾರೆ ಇದು ಅವರ ಸಂಸ್ಕೃತಿ ತೋರಿಸುತ್ತೇನೆ ಎಂದು ಸಂತೋಷ್ ಲಾಡ್ ಕಿಡಿ ಕಾರಿದ್ದಾರೆ ಹುಬ್ಬಳ್ಳಿಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಿಡಿ ಕಾರಿದ್ದಾರೆ ಇದನ್ನು ನಾನು ಖಂಡಿಸುತ್ತೇನೆ ಎಂದು ಸಂತೋಷ್ ಲಾಡ್ ತಿಳಿಸಿದ್ದಾರೆ .
ನಾವು ಕೂಡ ಹೀಗೆ ಎಲ್ಲರ ವಿರುದ್ಧ ಮಾತನಾಡಬಹುದು ಆದರೆ ಇದು ನಮ್ಮ ಸಂಸ್ಕೃತಿ ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಶೋಷಿತ ನಾಯಕ 50 ವರ್ಷ ಹಳ್ಳಿ ಹಳ್ಳಿ ಅಲೆದಾಡಿ ಬಂದ ಶೋಷಿತ ನಾಯಕರಾಗಿದ್ದಾರೆ ಕೇವಲ ರಾಜಕೀಯಕ್ಕಾಗಿ ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದರು ದಡ್ಡತನದಿಂದ ಮಾತನಾಡಿದ್ದು ಖಂಡನೀಯ ಎಂದು ಹುಬ್ಬಳ್ಳಿಯಲ್ಲಿ ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದ್ದಾರೆ.
ಅನಂತ ಕುಮಾರ್ ಹೆಗ್ಡೆ ಹೇಳಿದ್ದೇನು?
ದೇಶದಲ್ಲಿ ಅಪಮಾನಗೊಂಡ ಸಾಕಷ್ಟು ಸಂಕೇತಗಳಿವೆ. ಅದನ್ನು ಕಿತ್ತುಹಾಕುವ ತನಕ ಹಿಂದೂಸಮಾಜವಿರಮಿಸಲ್ಲ. ರಣಭೈರವ ಎದ್ದಾಗಿದೆ, ಮತ್ತೆ ಕೂರುವ ಪ್ರಶ್ನೆಯೇ ಇಲ್ಲ. ಸಾವಿರ ವರ್ಷಗಳ ಸೇಡು ತೀರಿಸಿಕೊಳ್ಳುವ ಸಮಯ ಬಂದಿದೆ. ಸೇಡು ತೀರಿಸಿಕೊಳ್ಳದಿದ್ದರೆ ಇದು ಹಿಂದು ರಕ್ತವೇ ಅಲ್ಲ. ಇದನ್ನು ಬೆದರಿಕೆ ಅಂತ ಬೇಕಾದರೂ ತಿಳಿದುಕೊಳ್ಳಿ ಎಂದು ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.
ಕುಮಟಾದಲ್ಲಿ ಶನಿವಾರ ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆ ನಡೆಸಿದ ಅವರು, ಭಟ್ಕಳದ ಚಿನ್ನದ ಪಳ್ಳಿ ಮಸೀದಿ ಹಿಂದೆ ಹಿಂದೂ ದೇವಾಲಯವಾಗಿತ್ತು. ಶಿರಸಿಯ ಸಿಪಿ ಬಜಾರ್‌ನಲ್ಲಿರುವ ದೊಡ್ಡ ಮಸೀದಿ ವಿಜಯ ವಿಠಲ ದೇವಸ್ಥಾನ ಆಗಿತ್ತು. ಶ್ರೀರಂಗಪಟ್ಟಣದಲ್ಲಿರುವ ದೊಡ್ಡ ಮಸೀದಿ ಮಾರುತಿ ದೇವಸ್ಥಾನ ಆಗಿತ್ತು. ಈಗ ಹೋದರೂ ಅಲ್ಲಿ ಮಾರುತಿ ಮೂರ್ತಿ ಕಾಣುತ್ತದೆ. ದೇಶದ, ಹಳ್ಳಿಯ ಮೂಲೆ ಮೂಲೆಗಳಲ್ಲಿ ಅಪಮಾನಗೊಂಡ ಸಂಕೇತಗಗಳಿವೆ.