ಚಾಮರಾಜನಗರ : ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ವಿಚಾರವಾಗಿ ಮಾತನಾಡಿದ ಸಚಿವ ಕೆ. ವೆಂಕಟೇಶ್ ಅವರು, ಸಂಸದ ಅನಂತ್ ಕುಮಾರ್ ಹೆಗಡೆಗೆ ಸಂಸ್ಕಾರನೇ ಇಲ್ಲ.ಆ ಮನುಷ್ಯನಿಗೆ ಸಂಸ್ಕಾರ ಅಂದರೆ ಏನು ಅಂತಾನೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಭಟ್ಕಳದಲ್ಲೂ ಮಸೀದಿ ನಿರುನಾಮ ಮಾಡುತ್ತೇವೆ ಅಂದಿದ್ದಾರೆ.ಇದಕ್ಕೆ ಏನು ಬಂದೋಬಸ್ತ್ ಮಾಡಬೇಕು ಮಾಡುತ್ತದೆ.ನಮ್ಮ ಸರ್ಕಾರ ಏನೆಲ್ಲ ಕ್ರಮ ಕೈಗೊಳ್ಳಬೇಕು ಯಾವ ರೀತಿ ಬಂದೋಬಸ್ ಮಾಡಬೇಕು ಎಲ್ಲವನ್ನು ಮಾಡುತ್ತದೆ.ಬೇರೆ ಸಮಾಜದ ದೇಗುಲ ದ್ವಂಸ ಮಾಡಲು ಬಿಡೋಕ್ಕಾಗುತ್ತಾ? ಎಂದು ಚಾಮರಾಜನಗರದಲ್ಲಿ ಸಚಿವ ಕೆ ವೆಂಕಟೇಶ್ ಪ್ರತಿಕ್ರಿಯೆ ನೀಡಿದರು.
ಇನ್ನು ಲೋಕಸಭೆ ಚುನಾವಣೆಗೆ ಮೈಸೂರು ಕ್ಷೇತ್ರದಿಂದ ಸಿದ್ದರಾಮಯ್ಯ ಅವರ ಮಗ ಯತೀಂದ್ರ ಅವರು ಸ್ಪರ್ಧೆ ಮಾಡುವ ವಿಚಾರವಾಗಿ ಉತ್ತರಿಸಿದ ಅವರು, ನನಗೆ ಗೊತ್ತಿರುವ ಮಾಹಿತಿ ಪ್ರಕಾರ ಯತೀಂದ್ರ ಸ್ಪರ್ಧೆ ಮಾಡುವುದಿಲ್ಲ ಮೈಸೂರಿಂದ ಯತೀಂದ್ರ ಕಣಕ್ಕೆ ಇಳಿಯುವುದಿಲ್ಲ. ನಾನಂತೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಇದು ನನ್ನ ಕೊನೆ ಚುನಾವಣೆ ನನಗೂ ಕೂಡ ವಯಸ್ಸಾಗಿದೆ ಅಸೆಂಬ್ಲಿ ಚುನಾವಣೆಗೂ ಸ್ಪರ್ಧಿಸುವುದಿಲ್ಲ ಎಂದು ಚಾಮರಾಜನಗರದಲ್ಲಿ ಸಚಿವ ಕೆ ವೆಂಕಟೇಶ್