ಮಂಡ್ಯ: ರಾಜ್ಯದಲ್ಲಿ ಅಮಾನುಷ ಘಟನೆ ಎನ್ನುವಂತೆ ನಾಟಿ ಮಾಡಿದ ಭತ್ತದ ಪೈರಿಗೆ ಕಳೆನಾಶಕವನ್ನು ಕಿಡಿಗೇಡಿಗಳು ಸಿಂಪಡಿಸಿರುವಂತ ಕೃತ್ಯ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬಿಂಡೇನಹಳ್ಳಿ ಗ್ರಾಮದಲ್ಲಿ ನಾಟಿ ಮಾಡಿದಂತ ಭತ್ತದ ಪೈರಿಗೆ ಕಿಡಿಗೇಡುಗಳ ಕಳೆನಾಶಕ ಸಿಂಪಡಿಸಿ ವಿಕೃತಿ ಮೆರೆದಿದ್ದಾರೆ. ಕಿಡಿಗೇಡಿಗಳ ಈ ಕೃತ್ಯದಿಂದಾಗಿ ಗದ್ದೆಯಲ್ಲಿ ನಾಟಿ ಮಾಡಿದ ಭತ್ತದ ಪೈರು ಸಂಪೂರ್ಣ ನಾಶವಾಗಿದೆ. ಹೀಗಾಗಿ ಭತ್ತದ ಬೆಳೆ ಕಳೆದುಕೊಂಡು ರೈತನ ಗೋಳಾಟ ನಡೆಸಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬಿಂಡೇನಹಳ್ಳಿ ಗ್ರಾಮದಲ್ಲಿ ಜಮೀನೊಂದರಲ್ಲಿ ಘಟನೆ ನಡೆದಿದೆ. ಗ್ರಾಮದ ಕುಳ್ಳೇಗೌಡ ಎಂಬುವವರಿಗೆ ಸೇರಿದ ಜಮೀನು ಇದಾಗಿದೆ. ಕಳೆದ 15 ದಿನಗಳ ಹಿಂದೆ ಗದ್ದೆಯಲ್ಲಿ ನಾಟಿಯನ್ನು ರೈತ ಕುಳ್ಳೇಗೌಡ ಮಾಡಿದ್ದರು. ಈ ಭತ್ತದ ಪೈರಿಗೆ ಕಳೆನಾಶಕ ಸಿಂಪಡಿಸಿರುವ ಹಿನ್ನಲೆ ಸಂಪೂರ್ಣವಾಗಿ ನಾಶವಾಗಿದೆ. ಭತ್ತ ಕಳೆದು ಕೊಂಡ ರೈತ ಕಂಗಾಲಾಗಿದ್ದಾರೆ.
ಹಳೆ ದ್ವೇಷಕ್ಕೆ ಅದೇ ಗ್ರಾಮದ ಕಿಡಿಗೇಡಿಗಳಿಂದ ಕೃತ್ಯ ನಡೆಸಿರುವುದಾಗಿ ರೈತ ಆರೋಪಿಸಿದ್ದಾರೆ. ಕಿಡಿಕೇಡಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪರಿಹಾರಕ್ಕಾಗಿ ನೊಂದ ರೈತ ಕುಟುಂಬ ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ. ನಾಗಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ವರದಿ: ಗಿರೀಶ್ ರಾಜ್, ಮಂಡ್ಯ
ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಿ, ದೊಡ್ಡ ನಾಯಕರಾಗಿ ಬೆಳೆಯಿರಿ: ಡಿಸಿಎಂ ಡಿಕೆಶಿ ಕಿವಿಮಾತು
SHOCKING : ವಿವಾಹಿತನಿಂದ ನಿರಂತರ ಅತ್ಯಾಚಾರ : ಮಗುವಿಗೆ ಜನ್ಮ ನೀಡಿದ 11 ವರ್ಷದ ಬಾಲಕಿ.!