ಉತ್ತರಪ್ರದೇಶ: ಪೋಷಕರು ಅಧಿಕಾರಿ ಎನ್ನುವ ಕಾರಣಕ್ಕಾಗಿ ಮದ್ಯವ್ಯಸನಿಯಾಗಿದ್ದರೂ ಆತನಿಗೆ ಹೆಣ್ಣು ಕೊಡುವುದು ಸರಿಯಲ್ಲ. ಮದ್ಯವ್ಯಸನಿ ಅಧಿಕಾರಿಗಿಂತ ಒಂದ ಮದ್ಯವ್ಯಸನಿ ಅಲ್ಲದ ಆಟೋ ರಿಕ್ಷ ಚಾಲಕನೋ, ಕೂಲಿ ಕಾರ್ಮಿಕನೋ ಉತ್ತಮ ವರ ಎಂಬುದಾಗಿ ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಸುಲ್ತಾನ್ ಪುರದ ಲಂಬುವದಲ್ಲಿ ಮದ್ಯವರ್ಜನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ಮದ್ಯ ವ್ಯಸನಿಗಳ ಜೀವಿತಾವಧಿಯು ಕಡಿಮೆಯಾಗಿರುತ್ತದೆ. ನಾನು ಸಂಸದನಾಗಿ, ನನ್ನ ಪತ್ನಿ ಶಾಸಕಿಯಾಗಿದ್ದರೂ, ನಮ್ಮ ಮದ್ಯವ್ಯಸನಿಯಾಗಿದ್ದ ಮಗನನ್ನು ಉಳಿಸಿಕೊಳ್ಳುವುದಕ್ಕೆ ಆಗಲಿಲ್ಲ ಎಂಬುದಾಗಿ ಭಾವುಕರಾಗಿ ನುಡಿದರು.
ನನ್ನ ಮಗ ಆಕಾಶ್ ಕಿಶೋರ್, ಸ್ನೇಹಿತರೊಂದಿಗೆ ಸೇರಿ ಮದ್ಯ ವ್ಯಸನವನ್ನು ರೂಢಿ ಮಾಡಿಕೊಂಡಿದ್ದನು. ಇದನ್ನು ಬಿಡೋಸದಕ್ಕೆ ಮದ್ಯವರ್ಜನ ಕೇಂದ್ರಕ್ಕೂ ದಾಖಲಿಸಿದ್ದೆವು. ಅಲ್ಲಿಂದ ಬಂದ ನಂತ್ರ ಮದುವೆ ಕೂಡ ಮಾಡಿಸಿದೆವು. ಆದ್ರೇ ಮದುವೆ ಬಳಿಕ ಮತ್ತು ಕುಡಿಯೋದಕ್ಕೆ ಆರಂಭಿಸಿ, ಆತ ಸಾವನ್ನಪ್ಪಿದನು ಎಂಬುದಾಗಿ ಮಗನನ್ನು ನೆನೆದು ಕಣ್ಣೀರಿಟ್ಟರು.
ಅಧಿಕಾರಿ, ಅವರ ಮಗ, ಇವರ ಮಗ ಎಂಬ ಕಾರಣದಿಂದಾಗಿ ಮದ್ಯವ್ಯಸನಿಯಾಗಿದ್ದರೂ ಆಂತಹ ವ್ಯಕ್ತಿಗೆ ಹೆಣ್ಣುಮಕ್ಕಳ ಪೋಷಕರು ಮಗಳನ್ನು ಕೊಡಬಾರದು. ಅವನಿಗಿಂತಲೂ ಮದ್ಯವ್ಯಸನಿಯಾಗಿರದಂತ ಆಟೋ ಚಾಲಕನೋ, ಕೂಲಿ ಕಾರ್ಮಿಕನೋ ಉತ್ತಮ ವರ ಎಂಬುದಾಗಿ ಸಲಹೆ ನೀಡಿದರು.
‘ನಿಮಗೆ ಅಚ್ಚರಿ’ಯಾದರೂ ಸತ್ಯ: ಈ ರಾಜ್ಯದಲ್ಲಿ ‘ಸರ್ಕಾರಿ ಕಚೇರಿ’ಗಳಿಗೆ ‘ಸಗಣಿಯಿಂದ ತಯಾರಿಸಿದ ಬಣ್ಣ’ ಬಳಕೆ
BIGG NEWS : `ಪಿಎಂ ಕಿಸಾನ್ ಯೋಜನೆ’ ಅನರ್ಹ ಫಲಾನುಭವಿಗಳಿಗೆ ಬಿಗ್ ಶಾಕ್!