ಇಸ್ಲಾಮಾಬಾದ್: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಶಿಷ್ಟ ಪ್ರೇಮಕಥೆಯೊಂದು ಸುದ್ದಿ ಮಾಡುತ್ತಿದೆ. ಪಾಕಿಸ್ತಾನದ 28 ವರ್ಷದ ಯುವಕ 83 ವರ್ಷದ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದಾನೆ.
ಮಹಿಳೆಯ ವಯಸ್ಸು 83 ವರ್ಷವಾಗಿದ್ದರೆ, ಆಕೆಯ ಪತಿಗೆ ಕೇವಲ 28 ವರ್ಷ. ಪೋಲೆಂಡ್ ನಿವಾಸಿಯಾಗಿರುವ ವೃದ್ಧೆ ಬ್ರೋಮಾ ತನ್ನ 28 ವರ್ಷದ ಗೆಳೆಯ ಹಫೀಜ್ ನದೀಮ್ ನನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ಬಂದಿದ್ದಳು. ಕಳೆದ ವರ್ಷ ನವೆಂಬರ್ 1 ರಂದು ಹಫ್ಜಾಬಾದ್ನ ಕಾಜಿಪುರದಲ್ಲಿ ಇಬ್ಬರೂ ವಿವಾಹವಾಗಿದ್ದರು. ಈ ವರ್ಷ ದಂಪತಿಗಳು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಾರೆ.
ಫೇಸ್ ಬುಕ್ನಲ್ಲಿ ಪೋಲಿಷ್ ಮಹಿಳೆ ಮತ್ತು ಪಾಕಿಸ್ತಾನಿ ಯುವಕನ ಮೊದಲ ಭೇಟಿಯಾಗಿದೆ. ಕ್ರಮೇಣ ಇವರಿಬ್ಬರ ಸ್ನೇಹ ಪ್ರೇಮಕ್ಕೆ ತಿರುಗಿದೆ. ಇಬ್ಬರೂ ಪರಸ್ಪರ ಮದುವೆಯಾಗುವ ಭರವಸೆ ನೀಡಿದ್ದರು. ಅದನ್ನು ಪೂರೈಸಲು ಮಹಿಳೆ ಪಾಕಿಸ್ತಾನಕ್ಕೆ ಬಂದು ಅಲ್ಲೇ ಇಬ್ಬರೂ ವಿವಾಹವಾದರು. ಆರಂಭದಲ್ಲಿ ಫೇಸ್ ಬುಕ್ನಲ್ಲೇ ಇಬ್ಬರ ನಡುವೆ ಮಾತುಕತೆ ನಡೆಯುತ್ತಿತ್ತು. ನಂತರ ಅವರು ತಮ್ಮ ನಡುವಿನ ವಯಸ್ಸಿನ ವ್ಯತ್ಯಾಸವನ್ನು ಲೆಕ್ಕಿಸದೆ ತಮ್ಮ ಜೀವನದುದ್ದಕ್ಕೂ ಪರಸ್ಪರ ಬದುಕಲು ನಿರ್ಧರಿಸಿದರು. ಮಹಿಳೆಯ ಪತಿ ಹಫೀಜ್ ನದೀಮ್ ಪಾಕಿಸ್ತಾನದ ಕಾಜಿಪುರ ನಿವಾಸಿಯಾಗಿದ್ದು, ಆಟೋ ಮೆಕ್ಯಾನಿಕ್ ಆಗಿದ್ದಾರೆ.
BIG NEWS: ಸಾಗರ್ ಧನಕರ್ ಹತ್ಯೆ ಪ್ರಕರಣ: ತಿಹಾರ್ ಜೈಲಿನಿಂದ ಕುಸ್ತಿಪಟು ʻಸುಶೀಲ್ ಕುಮಾರ್ʼ ಬಿಡುಗಡೆ