ಬೆಂಗಳೂರು : ಇಂದು ಮಂಡ್ಯದಲ್ಲಿ ಚುನಾವಣಾ ರಣಕಹಳೆ ಮೊಳಗಿಸಿದ ಅಮಿತ್ ಶಾ ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದಾರೆ.
ನಾಳೆ ಡಿ.31 ರಂದು ಅಮಿತ್ ಶಾ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಆವತಿ ಬೆಟ್ಟಕ್ಕೆ ಭೇಟಿ ನೀಡಲಿದ್ದು, 35 ಎಕರೆ ಪ್ರದೇಶಲ್ಲಿ ನಿರ್ಮಾಣವಾಗುತ್ತಿರುವ ಬಿಪಿಆರ್ ಡಿ ಕಟ್ಟಡ ನಿರ್ಮಾಣದ ಭೂಮಿ ಪೂಜೆ ನೆರವೇರಿಸಲಿದ್ದಾರೆ. ನಾಳೆ 11 ಗಂಟೆಗೆ ಕಾರ್ಯಕ್ರಮ ನೆರವೇರಲಿದೆ. ಈ ಹಿನ್ನೆಲೆ ಆವತಿ ಬೆಟ್ಟ ಹಾಗೂ ಖಾಸಗಿ ಶಾಲೆ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಆವತಿ ಬೆಟ್ಟಕ್ಕೆ ನಾಳೆ ಅಮಿತ್ ಶಾ ಭೇಟಿ ಹಿನ್ನೆಲೆ ಆವತಿ ಬೆಟ್ಟಕ್ಕೆ ಸಾರ್ವಜನಿಕರ ವಾಹನ ಪ್ರವೇಶ ಕ್ಕೆ ನಿರ್ಬಂಧ ಹೇರಲಾಗಿದೆ. ಯಾವುದೇ ಅಹಿಕತರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, 10 ಡಿವೈಎಸ್ಪಿ, ಮೂವರು ಎಸ್ ಪಿ, 25 ಸಿಪಿಐ, 100 ಪಿಎಸ್ಐ ಸೇರಿ ಒಟ್ಟು 500 ಮಂದಿ ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.
BIG NEWS : ರೈಲ್ವೆ ಮೂಲಸೌಕರ್ಯ ಆಧುನೀಕರಣಕ್ಕೆ ಸರ್ಕಾರ ದಾಖಲೆ ಹೂಡಿಕೆ ಮಾಡುತ್ತಿದೆ : ಪ್ರಧಾನಿ ಮೋದಿ| PM Modi
BREAKING NEWS : ಬೀದರ್ ನಲ್ಲಿ ಬಿ.ಎಸ್ಸಿ ನರ್ಸಿಂಗ್ ಕೋರ್ಸ್ ಆರಂಭಕ್ಕೆ ರಾಜ್ಯ ಸರ್ಕಾರ ಆದೇಶ