ಮೈಸೂರು : ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 28 ಕ್ಷೇತ್ರಗಳನ್ನು ಗೆಲ್ಲುವ ಗುರಿ ಹಿನ್ನೆಲೆಯಲ್ಲಿ ಎಂದು ಕೇಂದ್ರ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ್ದು, ಮೈಸೂರಿನಲ್ಲಿ ಬಿಜೆಪಿ ನಾಯಕರು ಅಂದಿಗೆ ಸಭೆ ನಡೆಸಲಿದ್ದಾರೆ ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬಿಜೆಪಿ ಮಾಜಿ ಶಾಸಕ ಪ್ರೀತಮ್ ಗೌಡ ಹಾಗೂ ಹಾಲಿ ಸಂಸದ ಪ್ರತಾಪ್ ಸಿಂಹ ನಡುವೆ ಕ್ಲಸ್ಟರ್ ನಾಯಕರ ವಿಚಾರಕ್ಕೆ ಸಂಬಂಧಿಸಿದಂತೆ ಕಿತ್ತಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಅಮಿತ್ ಶಾ ಬೇಟಿ ವೇಳೆ ಬಿಜೆಪಿ ಮಾಜಿ ಶಾಸಕ ಪ್ರೀತಮ್ ಗೌಡ ಹಾಗೂ ಹಾಲಿ ಸಂಸದ ಪ್ರತಾಪ್ ಸಿಂಹ ನಡುವೆ ವಾಕ್ ಸಮರ ನಡೆದಿದೆ. ಸಂಸದ ಹಾಗೂ ಮಾಜಿ ಶಾಸಕ ಪರಸ್ಪರ ಬೈದಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.ಅಮಿತ್ ಶಾ ಸ್ವಾಗತಕ್ಕೆ ಕ್ಲಸ್ಟರ್ ನಾಯಕರ ವಿಚಾರವಾಗಿ ಕಿತ್ತಾಡಿಕೊಂಡಿದ್ದಾರೆ.
ಅಮಿತ್ ಶಾ ಸ್ವಾಗತಕ್ಕೆ ನಾಯಕರ ಲೈನಪ್ ಉಸ್ತುವಾರಿಯನ್ನು ಪ್ರೀತಮ್ ಗೌಡ ಹೊತ್ತಿದ್ದರು. ಪಟ್ಟಿಯಲ್ಲಿ ಮೈಸೂರು ಸ್ಥಳೀಯ ನಾಯಕರ ಹೆಸರು ಇರಲಿಲ್ಲ. ಆದ್ದರಿಂದ ಪ್ರಥಮ ಗೌಡರನ್ನು ಈ ವೇಳೆ ಸಂಸದ ಪ್ರತಾಪ್ ಸಿಂಹ ನೇರವಾಗಿ ಪ್ರಶ್ನಿಸಿದ್ದಾರೆ.ತಾನು ಮಾಡಿದ್ದೆ ಸರಿ ಅನ್ನೋ ರೀತಿ ಪ್ರೀತಂ ಗೌಡ ಉತ್ತರ ನೀಡಿದ್ದಾರೆ.
ಪ್ರೀತಂ ಗೌಡ ಪ್ರತಾಪ್ ಸಿಂಹ ನಡುವೆ ಈ ವೇಳೆ ಮಾತಿನ ಚಕಮಕಿ ನಡೆದಿದೆ. ಇವಳೆ ಪ್ರತಾಪ್ ಸಿಂಹ ಇದೆಲ್ಲವನ್ನು ನೀವು ನಿಮ್ಮ ಹಾಸನದಲ್ಲಿ ಇಟ್ಟುಕೊಳ್ಳಿ ಮೈಸೂರಿನಲ್ಲಿ ಬೇಡ ಎಂದು ಕಿಡಿ ಕಾರಿದ್ದಾರೆ. ಈ ವೇಳೆ ಸ್ಥಳೀಯ ಬಿಜೆಪಿ ನಾಯಕರು ಇಬ್ಬರನ್ನು ಸಮಾಧಾನ ಮಾಡಿದ್ದಾರೆ. ಸ್ಥಳೀಯ ಬಿಜೆಪಿ ನಾಯಕರಲ್ಲಿ ಯಾವುದೇ ರೀತಿಯಾಗಿ ಒಮ್ಮತ ಇಲ್ಲ ಎಂಬುವುದು ಮೇಲ್ನೋಟಕ್ಕೆ ಕಂಡುಬಂದಿದೆ.