ರಾಜೌರಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಐತಿಹಾಸಿಕ ಸಾಧನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಕಣಿವೆಯ ರಾಜೌರಿಯಲ್ಲಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಪ್ರಧಾನಿ ಮೋದಿ ಅವರು ಕಣಿವೆಯನ್ನು ಮೂರು ಕುಟುಂಬಗಳ ಬಿಗಿ ಹಿಡಿತದಿಂದ ಮುಕ್ತಗೊಳಿಸಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.ಇನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ದಲಿತರು, ಹಿಂದುಳಿದವರು ಮತ್ತು ಬೆಟ್ಟಗಳಲ್ಲಿ ವಾಸಿಸುವವರಿಗೆ ಮೀಸಲಾತಿ ಪ್ರಯೋಜನಗಳನ್ನು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಜಮ್ಮು-ಕಾಶ್ಮೀರವನ್ನು 3 ಕುಟುಂಬಗಳು ಆಳಿವೆ. ಎಲ್ಲ ಸೌಲಭ್ಯಗಳನ್ನೂ ಆ 3 ಕುಟುಂಬಗಳೇ ಅನುಭವಿಸಿವೆ. ಪಹಾರಿ ಸಮುದಾಯಕ್ಕೆ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದಾರೆ.
ಕಣಿವೆಗೆ ಈ ಹಿಂದೆ ನೀಡಲಾಗಿದ್ದ 370ನೇ ವಿಧಿಯನ್ನು ಮೂರು ಕುಟುಂಬಗಳು ತಮ್ಮ ಲಾಭಕ್ಕಾಗಿ ಬಳಸಿಕೊಂಡಿವೆ. ಪ್ರಧಾನಿ ಮೋದಿ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಕಣಿವೆಯ ಎಲ್ಲಾ ಜನರಿಗೆ ಸಮಾನತೆ ಒದಗಿಸಿದ್ದಾರೆ ಎಂದರು.
J-K: Gujjar, Bakarwal, Pahari communities to get reservations soon says Amit Shah in Rajouri
Read @ANI Story | https://t.co/9ITnRdEVue#AmitShah #AmitShahInRajouri #ShahRally pic.twitter.com/3e1jOuEJnY
— ANI Digital (@ani_digital) October 4, 2022