ಮೈಸೂರು : ಲೋಕಸಭೆ ಚುನಾವಣೆ ಹಿನ್ನೆಲೆ ನಿನ್ನೆ ಚನ್ನಪಟ್ಟಣದಲ್ಲಿ ಕೇಂದ್ರ ಗೃಹ ಸಚಿವ ಅವರು ಬೃಹತ್ ರೋಡ್ ಶೋ ನಡೆಸಿದರು.ಈ ಕುರಿತಾಗಿ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದು, ಬರ ಪರಿಹಾರಕ್ಕೆ ಕುರಿತಂತೆ ಅಮಿತ್ ಶಾ ಅವರಿಗೆ ನಮ್ಮ ಜೊತೆ ಚರ್ಚೆ ಮಾಡಲು ಧಮ್ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಏಪ್ರಿಲ್ 3ನೇ ವಾರದಲ್ಲಿ ‘ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ’ ಪ್ರಕಟ- ಮೂಲಗಳು | Karnataka PUC 2nd Result 2024
ಮೈಸೂರಲ್ಲಿ ಚುನಾವಣಾ ಪ್ರಚಾರದ ವೇಳೆ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ, ನಮ್ಮ ಜೊತೆ ಚರ್ಚೆಗೆ ಬರೋಕೆ ಅಮಿತ್ ಶಾ ಗೆ ಧಮ್ ಇಲ್ಲ ಎಂದು ಮೈಸೂರಿನಲ್ಲಿ ಅಮಿತ್ ಶಾ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.ಅಮಿತ್ ಶಾ ನೆನ್ನೆ ಬಂದು ಸುಳ್ಳು ಹೇಳಿ ಹೋಗಿದ್ದಾರೆ.ನಮ್ಮ ಜೊತೆ ಒಂದೇ ವೇದಿಕೆಗೆ ಬನ್ನಿ ಚರ್ಚೆ ಮಾಡೋಣ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಸುಳ್ಳು ಹೇಳುತ್ತಿದ್ದೀವಾ ನೀವು ಹೇಳುತ್ತಿದ್ದೀರಾ ಎಂದು ತೀರ್ಮಾನ ಆಗಲಿ ಎಂದು ಅವರು ಕಿಡಿ ಕಾರಿದರು.
BREAKING : ಬೆಳಗಾವಿಯಲ್ಲಿ ಚುನಾವಣಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ : ದಾಖಲೆ ಇಲ್ಲದ 9.56ಲಕ್ಷ ಮೌಲ್ಯದ ‘TV’ ವಶ
ನಿನ್ನೆ ಚನ್ನಪಟ್ಟಣಕ್ಕೆ ಅಮಿತ್ ಶಾ ಅವರು ಬಂದಿದ್ದರು ಅವರ ಇಡೀ ಅವರ ಭಾಷಣ ಸುಳ್ಳಿನಿಂದ ಕೂಡಿತ್ತು. ಸಿದ್ದರಾಮಯ್ಯನವರು ರಾಜಕೀಯ ಮಾಡುತ್ತಿದ್ದಾರೆ ಬರ ಕುರಿತಂತೆ ವರದಿಯನ್ನು ನಿಧಾನಕ್ಕೆ ಕೊಟ್ಟಿದ್ದಾರೆ ಹಾಗಾಗಿ ಅನುದಾನ ಬಿಡುಗಡೆ ಮಾಡಲಿಲ್ಲವೆಂದು ಹೇಳಿದರು. ಇದಕ್ಕೆ ಸಿಎಂ
ವರದಿ ಕೊಟ್ಟು 6 ತಿಂಗಳು ಕಳೆದಿದೆ ಕೇಂದ್ರ ತಂಡ ಕೂಡ ವರದಿ ಸಲ್ಲಿಸಲು ತಿಂಗಳಾಗಿದೆ ಇದುವರೆಗೂ ಒಂದು ಸಭೆ ಕರೆದಿಲ್ಲ ಅನುದಾನ ಬಿಡುಗಡೆ ಮಾಡಿಲ್ಲ ಎಂದರು.
ಅಮಿತ್ ಶಾ ಅವರು ಜನಗಳಿಗೆ ಯಾಕೆ ಸುಳ್ಳು ಮಾಹಿತಿ ಕೊಡುತ್ತೀರಿ ಅದೇ ವೇದಿಕೆಗೆ ಬನ್ನಿ ನಾವು ಸುಳ್ಳು ಹೇಳಿರುತ್ತೀವ ನೀವು ಸುಳ್ಳು ಹೇಳುತ್ತಿದ್ದಾರ ಚರ್ಚೆಯಾಗಲಿ.ಹೀಗಾಗಿ ಅಮಿತ್ ಶಾ ಅವರಿಗೆ ಚರ್ಚೆ ಮಾಡಲು ಧಮ್ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.