ಚೆನ್ನೈ : ತಮಿಳುನಾಡಿನ ರಾಜಕೀಯದಲ್ಲಿ ಇದೀಗ ಭಾರಿ ಬದಲಾವಣೆ ಆಗಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜೋತೆ AIADMK ಮೈತ್ರಿಯ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿವೆ. AIADMK NDA ಮೈತ್ರಿಕೂಟದ ಭಾಗವಾಗಲಿದೆ. ಮೈತ್ರಿ ಆಗಿ ಸ್ಪರ್ಧಿಸೋ ಬಗ್ಗೆ ನಾವಿಬ್ಬರೂ ನಿರ್ಧರಿಸಿದ್ದೇವೆ ಎಂದು ಕೇಂದ್ರ ಸಚಿವ ಅಮಿತ್ ಷಾ ಘೋಷಣೆ ಮಾಡಿದರು.
ಚೆನ್ನೈನಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಷಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳಗಿ ಹೋಗಿದೆ. ಅಕ್ರಮ ಮಧ್ಯ ಮಾರಾಟ ಅಕ್ರಮ ಮರಳು ಗಣಿಗಾರಿಕೆ ನಡೀತಿದೆ. ಡಿಎಂಕೆ ಸರ್ಕಾರ ಉದ್ಯೋಗ ನೀಡಲು ಹಣ ಪಡೆಯುತ್ತಿದೆ. ನೀಟ್ ಕ್ಷೇತ್ರ ಮರ ವಿಂಗಡಣೆ ವಿಚಾರ ರಾಜಕೀಯಕ್ಕೆ ಬಳಸಿದ್ದಾರೆ ಎಂದು ತಮಿಳುನಾಡು ಡಿಎಂಕೆ ಸರ್ಕಾರದ ವಿರುದ್ಧ ಅಮಿತ್ ಶಾ ವಾಗ್ದಾಳಿ ನಡೆಸಿದರು.