Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮಾಜಿ ಸಚಿವ ಬಿ ನಾಗೇಂದ್ರಗೂ ‘ED’ ಶಾಕ್ : ಬೆಂಗಳೂರಿನ ಶಾಸಕರ ಭವನದಲ್ಲಿ ದಾಖಲೆ ಪರಿಶೀಲನೆ

11/06/2025 9:32 AM

ಮಾರಣಾಂತಿಕ ‘ರಕ್ತದ ಕ್ಯಾನ್ಸರ್‌’ನಿಂದ ಬಳಲುತ್ತಿದ್ದ 3 ವರ್ಷದ ಮಗುವಿಗೆ ಪೊರ್ಟೀಸ್ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಚಿಕಿತ್ಸೆ

11/06/2025 9:29 AM

BIG NEWS : ‘CET’ಯಲ್ಲಿ ಕಡಿಮೆ ಅಂಕ ಬಂದಿದಕ್ಕೆ ಮಗಳು ಆತ್ಮಹತ್ಯೆ : ಮನನೊಂದ ತಾಯಿಯು ನೇಣಿಗೆ ಶರಣು!

11/06/2025 9:27 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಾವೇರಿ ಆಸ್ಪತ್ರೆಯಿಂದ ಬನ್ನೇರುಘಟ್ಟ ಉದ್ಯಾನವನಕ್ಕೆ ‘ಆಂಬ್ಯುಲೆನ್ಸ್’ ಕೊಡುಗೆ : ಪ್ರವಾಸಿಗರಿಗೂ ಸೇವೆ ಲಭ್ಯ : ಈಶ್ವರ್ ಖಂಡ್ರೆ
KARNATAKA

ಕಾವೇರಿ ಆಸ್ಪತ್ರೆಯಿಂದ ಬನ್ನೇರುಘಟ್ಟ ಉದ್ಯಾನವನಕ್ಕೆ ‘ಆಂಬ್ಯುಲೆನ್ಸ್’ ಕೊಡುಗೆ : ಪ್ರವಾಸಿಗರಿಗೂ ಸೇವೆ ಲಭ್ಯ : ಈಶ್ವರ್ ಖಂಡ್ರೆ

By kannadanewsnow0506/02/2025 1:47 PM

ಬೆಂಗಳೂರು : ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನಕ್ಕೆ ಕೊಡುಗೆಯಾಗಿ ಬಂದಿರುವ ಆಂಬ್ಯುಲೆನ್ಸ್, ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೂ ಪ್ರಯೋಜನ ಒದಗಿಸಲಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ವಿಕಾಸಸೌಧದ ಗಾಂಧಿ ಪ್ರತಿಮೆ ಬಳಿ ಇಂದು ಬೆಂಗಳೂರಿನ ಕಾವೇರಿ ಆಸ್ಪತ್ರೆ ಸಮೂಹ ಬನ್ನೇರುಘಟ್ಟ ಉದ್ಯಾನಕ್ಕೆ ಕೊಡುಗೆಯಾಗಿ ನೀಡಿದ ಆಂಬ್ಯುಲೆನ್ಸ್ ವಾಹನವನ್ನು ಇಲಾಖೆಯ ಪರವಾಗಿ ಸ್ವೀಕರಿಸಿ, ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ಅವರಿಗೆ ಹಸ್ತಾಂತರಿಸಿ ಮಾತನಾಡಿದ ಅವರು, ತುರ್ತು ಆರೋಗ್ಯ ಸಂದರ್ಭದಲ್ಲಿ ಸ್ಥಳೀಯ ಪಂಚಾಯ್ತಿ ವ್ಯಾಪ್ತಿಯ ನಿವಾಸಿಗಳಿಗೆ, ಉದ್ಯಾನದ ಸಿಬ್ಬಂದಿಗೆ ಮತ್ತು ಪ್ರವಾಸಿಗರಿಗೆ ಈ ಆಂಬ್ಯುಲೆನ್ಸ್ ನೆರವು ಲಭಿಸುವಂತಾಗಬೇಕು ಎಂದರು.

ಬನ್ನೇರುಘಟ್ಟ ಬೆಂಗಳೂರು ಬಳಿಯೇ ಇರುವ ದೊಡ್ಡ ಕಾನನ ಪ್ರದೇಶವಾಗಿದ್ದು, 1970ರಲ್ಲಿ ಉದ್ಯಾನ ಸ್ಥಾಪಿಸಲಾಯಿತು, 1974ರಲ್ಲಿ ರಾಷ್ಟ್ರೀಯ ಉದ್ಯಾನ ಎಂದು ಘೋಷಿಸಲಾಯಿತು. ಪ್ರಸ್ತುತ ಇಲ್ಲಿ ಮೃಗಾಲಯ, ಚಿಟ್ಟೆ ಪಾರ್ಕ್, ಕರಡಿ ಸಫಾರಿ, ಹುಲಿ ಸಫಾರಿ, ಸಿಂಹ ಸಫಾರಿ ಇದ್ದು, ಇತ್ತೀಚೆಗೆ ತಾವೇ ಚಿರತೆ ಸಫಾರಿಯನ್ನೂ ಉದ್ಘಾಟಿಸಿದ್ದು, ಇದು ಪ್ರವಾಸಿಗರಿಗೆ ಜನಾಕರ್ಷಣೆ ಕೇಂದ್ರವಾಗಿದೆ ಎಂದರು.

ರಾಷ್ಟ್ರೀಯ ಉದ್ಯಾನಕ್ಕೆ ಬರುವ ಪ್ರವಾಸಿಗರಿಗೆ ಮತ್ತು ಇಲ್ಲಿನ ಸಿಬ್ಬಂದಿಗೆ ತುರ್ತು ಆರೋಗ್ಯ ಸೇವೆಯ ಅಗತ್ಯವಿದ್ದಾಗ ಆಸ್ಪತ್ರೆಗೆ ಕರೆ ತರಲು ಆಂಬ್ಯುಲೆನ್ಸ್ ವಾಹನದ ಅಗತ್ಯ ಮನಗಂಡು ಕಾವೇರಿ ಆಸ್ಪತ್ರೆಯವರು ಇಂದು ಒಂದು ಆಂಬ್ಯುಲೆನ್ಸ್ ಅನ್ನು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಅಡಿ ನೀಡಿದೆ ಎಂದು ಅಭಿನಂದಿಸಿದರು. ಕಾವೇರಿ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ವಿಜಯಭಾಸ್ಕರನ್, ಉಪಾಧ್ಯಕ್ಷ ವಿಲ್ಫ್ರೆಡ್ ಸ್ಯಾಮ್ಸನ್ ಮತ್ತಿತರರರು ಉಪಸ್ಥಿತರಿದ್ದರು.

Share. Facebook Twitter LinkedIn WhatsApp Email

Related Posts

BREAKING : ಮಾಜಿ ಸಚಿವ ಬಿ ನಾಗೇಂದ್ರಗೂ ‘ED’ ಶಾಕ್ : ಬೆಂಗಳೂರಿನ ಶಾಸಕರ ಭವನದಲ್ಲಿ ದಾಖಲೆ ಪರಿಶೀಲನೆ

11/06/2025 9:32 AM1 Min Read

ಮಾರಣಾಂತಿಕ ‘ರಕ್ತದ ಕ್ಯಾನ್ಸರ್‌’ನಿಂದ ಬಳಲುತ್ತಿದ್ದ 3 ವರ್ಷದ ಮಗುವಿಗೆ ಪೊರ್ಟೀಸ್ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಚಿಕಿತ್ಸೆ

11/06/2025 9:29 AM1 Min Read

BIG NEWS : ‘CET’ಯಲ್ಲಿ ಕಡಿಮೆ ಅಂಕ ಬಂದಿದಕ್ಕೆ ಮಗಳು ಆತ್ಮಹತ್ಯೆ : ಮನನೊಂದ ತಾಯಿಯು ನೇಣಿಗೆ ಶರಣು!

11/06/2025 9:27 AM1 Min Read
Recent News

BREAKING : ಮಾಜಿ ಸಚಿವ ಬಿ ನಾಗೇಂದ್ರಗೂ ‘ED’ ಶಾಕ್ : ಬೆಂಗಳೂರಿನ ಶಾಸಕರ ಭವನದಲ್ಲಿ ದಾಖಲೆ ಪರಿಶೀಲನೆ

11/06/2025 9:32 AM

ಮಾರಣಾಂತಿಕ ‘ರಕ್ತದ ಕ್ಯಾನ್ಸರ್‌’ನಿಂದ ಬಳಲುತ್ತಿದ್ದ 3 ವರ್ಷದ ಮಗುವಿಗೆ ಪೊರ್ಟೀಸ್ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಚಿಕಿತ್ಸೆ

11/06/2025 9:29 AM

BIG NEWS : ‘CET’ಯಲ್ಲಿ ಕಡಿಮೆ ಅಂಕ ಬಂದಿದಕ್ಕೆ ಮಗಳು ಆತ್ಮಹತ್ಯೆ : ಮನನೊಂದ ತಾಯಿಯು ನೇಣಿಗೆ ಶರಣು!

11/06/2025 9:27 AM

ದೇವಾಲಯದೊಳಗೆ ಹೋಗುವ ಮೊದಲು ಹೊಸಿಲಿಗೆ ಏಕೆ ನಮಸ್ಕರಿಸುತ್ತಾರೆ?

11/06/2025 9:15 AM
State News
KARNATAKA

BREAKING : ಮಾಜಿ ಸಚಿವ ಬಿ ನಾಗೇಂದ್ರಗೂ ‘ED’ ಶಾಕ್ : ಬೆಂಗಳೂರಿನ ಶಾಸಕರ ಭವನದಲ್ಲಿ ದಾಖಲೆ ಪರಿಶೀಲನೆ

By kannadanewsnow0511/06/2025 9:32 AM KARNATAKA 1 Min Read

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಳ್ಳಂಬೆಳಗ್ಗೆ ಬಳ್ಳಾರಿಯಲಿರುವ…

ಮಾರಣಾಂತಿಕ ‘ರಕ್ತದ ಕ್ಯಾನ್ಸರ್‌’ನಿಂದ ಬಳಲುತ್ತಿದ್ದ 3 ವರ್ಷದ ಮಗುವಿಗೆ ಪೊರ್ಟೀಸ್ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಚಿಕಿತ್ಸೆ

11/06/2025 9:29 AM

BIG NEWS : ‘CET’ಯಲ್ಲಿ ಕಡಿಮೆ ಅಂಕ ಬಂದಿದಕ್ಕೆ ಮಗಳು ಆತ್ಮಹತ್ಯೆ : ಮನನೊಂದ ತಾಯಿಯು ನೇಣಿಗೆ ಶರಣು!

11/06/2025 9:27 AM

ದೇವಾಲಯದೊಳಗೆ ಹೋಗುವ ಮೊದಲು ಹೊಸಿಲಿಗೆ ಏಕೆ ನಮಸ್ಕರಿಸುತ್ತಾರೆ?

11/06/2025 9:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.