ಕೆಎನ್ಎನ್ ಡಿಜಿಟಲ್ ಡೆಸ್ಕ್ :ನಾವೆಲ್ಲಾ ಹೆಚ್ಚಾಗಿ ಆಹಾರ ತಯಾರಿಸಲು ಸಕ್ಕರೆಯನ್ನು ಬಳಸುತ್ತೇವೆ ಇದನ್ನು ಹೆಚ್ಚಾಗಿ ಬಳಸಿದ್ರೆ ಸಕ್ಕರೆ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ. ಇದಕ್ಕೆ ಬದಲಾಗಿ ಕಲ್ಲು ಸಕ್ಕರೆಯನ್ನು ಬಸಬಹುದು ಕಲ್ಲು ಸಕ್ಕರೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
BREAKING NEWS : ಓಲಾ, ಊಬರ್ ಆಟೋ ದರ ನಿಗದಿ ವಿಚಾರ : ನ.21 ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
ಕಲ್ಲು ಸಕ್ಕರೆ ಅನೇಕ ಆರೋಗ್ಯ ಪ್ರಯೋಜನಗಳು
ಶೀತ ಮತ್ತು ಕೆಮ್ಮಿಗೆ ರಾಮಬಾಣ
ವಿಶೇಷವಾಗಿ ಚಳಿಗಾಲದಲ್ಲಿ ಶೀತ ಮತ್ತು ಶೀತಕ್ಕೆ ಸಂಬಂಧ ಪಟ್ಟ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಶೀತ ಕೆಮ್ಮು ಮುಂತಾದ ಸಮಸ್ಯೆಗಳು ಕಾಡುತ್ತವೆ. ಈ ಪ್ರಕ್ರಿಯೆಯಲ್ಲಿ ನಮಗೆ ಕಲ್ಲು ಸಕ್ಕರೆ ಸಾಕಷ್ಟು ಸಹಾಯಕ್ಕೆ ಬರುತ್ತದೆ. ಕಪ್ಪು ಕಾಳು ಮೆಣಸಿನ ಜೊತೆ ಅರ್ಧ ಟೀ ಚಮಚ ಕಲ್ಲು ಸಕ್ಕರೆ ಹಾಕಿ ಮಿಶ್ರಣ ಮಾಡಿ ಇದನ್ನು ಸೇವಿಸುವ ಅಭ್ಯಾಸ ಮಾಡಿಕೊಂಡರೆ ಶೀತದಿಂದ ಉಂಟಾದ ಗಂಟಲು ನೋವು ವಾಸಿಯಾಗುತ್ತದೆ.
ಇನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ಕಲ್ಲು ಸಕ್ಕರೆ ಮತ್ತು ಕಪ್ಪು ಮೆಣಸನ್ನು ಮಿಶ್ರಣ ಮಾಡಿ ಕುಡಿಯುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ
ಉತ್ತಮ ಜೀರ್ಣ ಪ್ರಕ್ರಿಯೆಎ ಸಹಾಯಕ
ಸಾಮಾನ್ಯವಾಗಿ ನಮಗೆ ಶೀತ ಉಂಟಾದ ಸಂದರ್ಭದಲ್ಲಿ ಯಾವುದೇ ಆಹಾರ ತಿಂದರೂ ಬಾಯಿಗೆ ರುಚಿ ಸಿಗುವುದಿಲ್ಲ. ಇದರಿಂದ ನಾವು ಸೇವಿಸಿದ ಆಹಾರ ಸರಿಯಾಗಿ ಜೀರ್ಣ ಕೂಡ ಆಗುವುದಿಲ್ಲ. ಹೆಚ್ಚಾಗಿ ವಾಕರಿಕೆ ಮತ್ತು ವಾಂತಿ ಸಮಸ್ಯೆ ಕಾಡುತ್ತದೆ. ಕೆಲವರಿಗೆ ಅಜೀರ್ಣತೆ ಉಂಟಾಗಿ ಮಲಬದ್ಧತೆಯ ಸಮಸ್ಯೆ ಕೂಡ ಎದುರಾಗುತ್ತದೆ. ಆಹಾರ ಸೇವನೆಯ ನಂತರ ಬಾಯಲ್ಲಿ ಒಂದು ಮಧ್ಯಮ ಗಾತ್ರದ ಕಲ್ಲು ಸಕ್ಕರೆ ಚೂರನ್ನು ಹಾಕಿಕೊಂಡು ಸ್ವಲ್ಪ ಹೊತ್ತು ಅದರ ರಸ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ನಿಧಾನವಾಗಿ ನಿಮ್ಮ ಜೀರ್ಣಾಂಗ ವ್ಯವಸ್ಥೆ ಉತ್ತಮಗೊಂಡು ನಿಮ್ಮ ಆರೋಗ್ಯ ವೃದ್ಧಿಗೊಳ್ಳುತ್ತದೆ.
ದೈಹಿಕ ಶಕ್ತಿ ಹೆಚ್ಚಳ
ಕಲ್ಲು ಸಕ್ಕರೆಯಲ್ಲಿ ಹೆಚ್ಚಿನ ಪ್ರಮಾಣದ ಶಕ್ತಿಯ ಅಂಶವಿದೆ. ಇದರಿಂದ ನಿಮ್ಮ ದೇಹಕ್ಕೆ ಹೊಸ ಚೈತನ್ಯ ಸಿಕ್ಕಿದಂತಾಗಿ, ನಿಮ್ಮ ಮಾನಸಿಕ ಆರೋಗ್ಯ ಸಹ ಉತ್ತಮಗೊಂಡು ಮನಸ್ಸು ಮತ್ತು ದೇಹ ಸದಾ ಚಟುವಟಿಕೆಯಿಂದ ಕೂಡಿರಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಋತುಚಕ್ರದಲ್ಲಿರುವ ಮಹಿಳೆಯರಿಗೆ ಉಂಟಾಗುವ ಮಾನಸಿಕ ಕಿರಿಕಿರಿ ಕಲ್ಲು ಸಕ್ಕರೆ ಸೇವನೆಯಿಂದ ತಪ್ಪುತ್ತದೆ. ಸಣ್ಣ ಮಕ್ಕಳಲ್ಲಿ ಕೂಡ ನೆನಪಿನ ಶಕ್ತಿ ಜಾಸ್ತಿ ಮಾಡಿ ದೀರ್ಘ ಕಾಲದ ಮೆದುಳಿನ ಆಯಾಸವನ್ನು ಕಡಿಮೆ ಮಾಡುವ ಶಕ್ತಿ ಕಲ್ಲು ಸಕ್ಕರೆಗೆ ಇದೆ.
ಮನಸ್ಸಿಗೆ ಶಾಂತಿ, ನೆಮ್ಮದಿ
ಮಾನಸಿಕ ಒತ್ತಡ ದೂರವಾಗಿ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕಬೇಕಾದರೆ ಒಂದು ಲೋಟ ನೀರಿಗೆ 1 ಟೇಬಲ್ ಚಮಚ ಕಲ್ಲು ಸಕ್ಕರೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸಂಜೆಯ ಸಮಯದಲ್ಲಿ ಕುಡಿದರೆ ಸಾಕಷ್ಟು ಒಳ್ಳೆಯದು ಎಂಬುದು ತಜ್ಞರ ಅಭಿಪ್ರಾಯ.
ದೇಹಕ್ಕೆ ತಕ್ಷಣವೇ ಆಯಾಸವನ್ನು ದೂರ ಮಾಡುವಂತಹ ಮತ್ತು ನವ ಚೈತನ್ಯವನ್ನು ಒದಗಿಸುವಂತಹ ಪಾನೀಯ ಇದು ಎಂದು ಹೇಳಬಹುದು.
ಕಾಫಿ ಚಹಾ ತಯಾರಿಸಲು
ನಾವು ಪ್ರತಿ ದಿನ ಸಿಹಿ ಅಡುಗೆಗೆ ಅಥವಾ ಕಾಫಿ ಚಹಾ ತಯಾರಿಸಲು ಬಳಸುವ ಸಾಮಾನ್ಯ ಸಕ್ಕರೆಗಿಂತ ಕಲ್ಲು ಸಕ್ಕರೆ ಬಳಕೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ನಾವು ತಯಾರಿಸುವ ಆಹಾರ ಪದಾರ್ಥಗಳು ಸಾಕಷ್ಟು ರುಚಿ ಕೊಡುತ್ತದೆ ಎಂದು ಹೇಳುತ್ತಾರೆ.
ಯಾವ ಬಣ್ಣದ ಕಲ್ಲು ಸಕ್ಕರೆ ಸೂಕ್ತ?
ಹೆಚ್ಚು ಬೂದು ಬಣ್ಣ ಮತ್ತು ಹಳದಿ ಮಿಶ್ರಿತ ಕಲ್ಲು ಸಕ್ಕರೆ ಬಳಸಿದರೆ ಸೂಕ್ತ. ಸ್ಪಷ್ಟವಾದ ಕಲ್ಲು ಸಕ್ಕರೆ ಅಷ್ಟೊಂದು ರುಚಿ ಕೊಡುವುದಿಲ್ಲ ಎಂದು ಹಲವರ ಅಭಿಪ್ರಾಯ ಇದೆ.
ಕುತೂಹಲ ಮೂಡಿಸಿದ ಸಚಿವ ಜೆ.ಸಿ ಮಾಧುಸ್ವಾಮಿ-ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಭೇಟಿ