ಬೆಂಗಳೂರು : ಹಿಂದೂಗಳ ಹತ್ಯೆ ನಡೆಯುತ್ತದೆ ಎನ್ನುವುದಕ್ಕೆ ಸಿ.ಟಿ ರವಿ ಬ್ರಹ್ಮನಾ..? ಎಂದು ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ವಾಗ್ಧಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ್ರೆ ಹಿಂದೂಗಳ ಹತ್ಯೆಯಾಗಯಾಗುತ್ತೆ ಅನ್ನೋ ಸಿಟಿ ರವಿ ಹೇಳಿಕೆಗೆ ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ತಿರುಗೇಟು ಕೊಟ್ಟಿದ್ದಾರೆ. ಸಿ.ಟಿ.ರವಿ ತರಹದವರು ಬಿಜೆಪಿಯಲ್ಲಿ ಬಹಳ ಜನ ಇದ್ದಾರೆ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಹಿಂದೂ ಅಲ್ಲವಾ.. ಸಿಟಿ ರವಿ ಅವರಿಗೆ ಬೇರೆ ಕೆಲಸವೇ ಇಲ್ಲ. ಧರ್ಮದ ವಿಷಯ ತಂದು ಜನರನ್ನ ರೊಚ್ಚಿಗೆಳಿಸೋ ಕೆಲಸ ಮಾಡುತ್ತಿದ್ದಾರೆ ಅಂತಾ ಕಿಡಿಕಾರಿದ್ದಾರೆ.
ಸಿದ್ರಾಮುಲ್ಲಾಖಾನ್ ಅಧಿಕಾರಕ್ಕೆ ಬಂದರೆ ಹಿಂದೂಗಳ ಹತ್ಯೆಯಾಗುತ್ತವೆ. ಸಿದ್ದರಾಮಯ್ಯಗೆ ಸಿದ್ರಾಮುಲ್ಲಾ ಖಾನ್ ಎಂದು ಜನರೇ ಹೆಸರಿಟ್ಟಿದ್ದಾರೆ ಎಂದು ಶಾಸಕ ಸಿ.ಟಿ. ರವಿ ಹೇಳಿಕೆ ನೀಡಿದ್ದರು., ಸಿದ್ದರಾಮಯ್ಯಗೆ ಸಿದ್ರಾಮುಲ್ಲಾಖಾನ್ ಎಂದು ನಾನಷ್ಟೇ ಹೇಳಿಲ್ಲ, ಈ ಹಿಂದೆ ಈಶ್ವರಪ್ಪ ಕೂಡ ಹೇಳಿದ್ದರು. ಸಿದ್ದರಾಮಯ್ಯರಿಗೆ ಟಿಪ್ಪು ಸುಲ್ತಾನ್, ಟಿಪ್ಪು ಟೋಪಿ ಪ್ರಿಯವಾದುದು ಅಲ್ಲವೇ, ಅದಕ್ಕೆ ಹಾಗೆ ಹೇಳಿದೆ ಎಂದಿದ್ದಾರೆ.