Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನನ್ನದೊಂದೇ ನಿಜವಾದ ಧರ್ಮ ಎಂದು ಹೇಳುವುದು ತಪ್ಪು: ಅಲಹಾಬಾದ್ ಹೈಕೋರ್ಟ್!

26/03/2026 9:26 PM

ಅಲಿಯಾನ್ಜ್‌ ಜಿಯೊ ರಿಇನ್ಷೂರೆನ್ಸ್ ಸೇವೆ ಆರಂಭ‌

26/03/2026 9:18 PM

BREAKING: ಮಾದರಿ ನೀತಿ ಸಂಹಿತೆ ಹಿನ್ನಲೆ: ನಾಳೆಗೆ ಒಳಮೀಸಲಾತಿ ಸಂಬಂಧದ ವಿಶೇಷ ಸಂಪುಟ ಸಭೆ ಮುಂದೂಡಿಕೆ

26/03/2026 9:14 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಲಿಯಾನ್ಜ್‌ ಜಿಯೊ ರಿಇನ್ಷೂರೆನ್ಸ್ ಸೇವೆ ಆರಂಭ‌
INDIA

ಅಲಿಯಾನ್ಜ್‌ ಜಿಯೊ ರಿಇನ್ಷೂರೆನ್ಸ್ ಸೇವೆ ಆರಂಭ‌

By kannadanewsnow0926/03/2026 9:18 PM

ಮುಂಬಯಿ : ಜಿಯೊ ಫೈನಾನ್ಷಿಯಲ್‌ ಸರ್ವೀಸಸ್‌ ಲಿಮಿಟೆಡ್‌ (ಜೆಎಫ್‌ಎಸ್‌ಎಲ್) ಮತ್ತು ಅಲಿಯಾನ್ಜ್‌ ಗ್ರೂಪ್‌ (ಅಲಿಯಾನ್ಜ್) ತನ್ನ ಅಧೀನದಲ್ಲಿರುವ ಅಲಿಯಾನ್ಜ್‌ ಯುರೋಪ್‌ ಬಿ,ವಿ ಮೂಲಕ ಇಂದು ತಮ್ಮ ಜಂಟಿ ಸಹಭಾಗಿತ್ವದಲ್ಲಿ ಅಲಿಯಾನ್ಜ್‌ ಜಿಯೊ ರಿಇನ್ಷೂರೆನ್ಸ್‌ ಲಿಮಿಟೆಡ್‌ (ಅಲಿಯಾನ್ಜ್‌ ಜಿಯೊ ರಿಲಯನ್ಸ್) ಭಾರತದಲ್ಲಿ ರಿಇನ್ಷೂರೆನ್ಸ್‌ ಸೇವೆಯನ್ನು ಆರಂಭಿಸಿವೆ.

ಅಲಿಯಾನ್ಜ್‌ ಜಿಯೊ ರಿಲಯನ್ಸ್‌ ವಿಮೆ ನಿಯಂತ್ರಕ ಇನ್ಷೂರೆನ್ಸ್‌ ರೆಗ್ಯುಲೇಟರಿ ಆಂಡ್‌ ಡೆವಲಪ್‌ಮೆಂಟ್‌ ಅಥಾರಿಟಿ ಆಫ್‌ ಇಂಡಿಯಾ (ಐಆರ್‌ಡಿಎ) ಸಂಸ್ಥೆಯಿಂದ 2026ರ ಮಾರ್ಚ್‌ 12ರಂದು ಅನುಮೋದನೆಯನ್ನು ಗಳಿಸಿತ್ತು.

ನೂತನ ಅಲಿಯಾನ್ಜ್‌ ಜಿಯೊ ಸಂಸ್ಥೆಯ ಪ್ರಧಾನ ಕಚೇರಿ ಮುಂಬಯಿನಲ್ಲಿ ಅಸ್ತಿತ್ವಕ್ಕೆ ಬಂದಿದೆ. ಭಾರತೀಯ ರಿಇನ್ಷೂರೆನ್ಸ್‌ ಮಾರುಕಟ್ಟೆಯಲ್ಲಿ ದೀರ್ಘಾವಧಿಯ ಪಾಲುದಾರಿಕೆಗೆ ಉಭಯ ಸಂಸ್ಥೆಗಳು ಬದ್ಧವಾಗಿವೆ. “2047ಕ್ಕೆ ಎಲ್ಲರಿಗೂ ವಿಮೆʼ ಎಂಬ ರಾಷ್ಟ್ರೀಯ ಅಭಿಯಾನಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಲಿವೆ.

“ಅಲಿಯಾನ್ಜ್‌ ಜಿಯೊ ರಿಲಯನ್ಸ್‌ ಸಂಸ್ಥೆಯ ಉದಯದಿಂದ ಹೊಸ ಮೈಲುಗಲ್ಲು ಸ್ಥಾಪನೆಯಾದಂತಾಗಿದೆ. ಅಲಿಯಾನ್ಜ್‌ ಜತೆ ನಮ್ಮ ಅತ್ಯುತ್ತಮ ಮತ್ತು ದೀರ್ಘಕಾಲೀನ ಸಹಭಾಗಿತ್ವಕ್ಕೆ ಇದು ಮೊದಲ ಹೆಜ್ಜೆಯಾಗಿದೆ. ವಿಮೆ ವಲಯದ ಒಟ್ಟಾರೆ ಬೆಳವಣಿಗೆಗೆ ಇದು ಮಹತ್ವದ ಬೆಳವಣಿಗೆಯಾಗಿ ಪರಿಣಮಿಸಿದೆʼʼ ಎಂದು ಜಿಯೊ ಫೈನಾನ್ಷಿಯಲ್‌ ಸರ್ವೀಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಿತೇಶ್‌ ಸೇಥಿಯಾ ಅವರು ಹೇಳಿದ್ದಾರೆ.

ಅಲಿಯಾನ್ಜ್‌ ಎಸ್‌ಇ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಕ್ರಿಸ್‌ ಟೌನ್‌ಸೆಂಡ್‌ ಅವರು ಮಾತನಾಡಿ, ” ಅಲಿಯಾನ್ಜ್‌ ಜಿಯೊ ರಿಲಯನ್ಸ್‌ ವಿಮೆದಾರರಿಗೆ ವಿನೂತನ ಮತ್ತು ಹೆಚ್ಚು ರಿಸ್ಕ್‌ ಸಲ್ಯೂಷನ್ಸ್‌ಗಳನ್ನು ನೀಡಲಿದೆ. ಈ ಜಂಟಿ ಸಹಭಾಗಿತ್ವದಿಂದ ಭಾರತದ ವಿಮೆ ವಲಯಕ್ಕೆ ಜಾಗತಿಕ ತಂತ್ರಜ್ಞಾನದ ಪರಿಣತಿ ದೊರೆಯಲಿದೆ. ದೇಶದ ಡಿಜಿಟಲ್‌ ಮತ್ತು ಹಣಕಾಸು ಇಕೊ ಸಿಸ್ಟಮ್‌ಗೆ ಪೂರಕವಾಗಿರಲಿದೆ. ಭಾರತದಲ್ಲಿ ರಿಇನ್ಷೂರೆನ್ಸ್‌ ಫ್ರಾಂಚೈಸಿಗಳ ಸ್ಥಿರವಾದ ಬೆಳವಣಿಗೆಗೆ ಇದು ಮೊದಲ ಹೆಜ್ಜೆಯಾಗಿದೆʼʼ ಎಂದು ವಿವರಿಸಿದರು.

ರಿಇನ್ಷೂರೆನ್ಸ್‌ ಜೆವಿ ಅಲಿಯಾನ್ಜ್‌ ಜಿಯೊ ರಿ(Allianz Jio Re)ನ ಸಾರಥ್ಯವನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೋನಿಯಾ ರಾವಲ್‌ ಅವರು ವಹಿಸಲಿದ್ದಾರೆ. ಸೋನಿಯಾ ಅವರು ಏಷ್ಯಾಫೆಸಿಫಿಕ್‌ ವಲಯದಲ್ಲಿ ರಿಸ್ಕ್‌ ಮ್ಯಾನೇಜ್‌ ಮೆಂಟ್‌ ಮತ್ತು ರಿಇನ್ಷೂರೆನ್ಸ್‌ ವಿಭಾಗದಲ್ಲಿ 17 ವರ್ಷಗಳ ವೃತ್ತಿಪರ ಅನುಭವವನ್ನು ಹೊಂದಿದ್ದಾರೆ. 2016ರಿಂದ ಸಿಂಗಾಪುರದಲ್ಲಿ ಅಲಿಯಾನ್ಜ್‌ ರಿಇನ್ಷೂರೆನ್ಸ್‌ನಲ್ಲಿ ಭಾರತ ಮತ್ತು ಆಸಿಯಾನ್‌ ಮಾರುಕಟ್ಟೆಗಳಿಗೆ ಕಾರ್ಯನಿರ್ವಹಿಸಿದ್ದರು.

“ಅಲಿಯಾನ್ಸ್‌ ಜಿಯೊ ರಿ(Allianz Jio Re)ನ ನಾಯಕತ್ವದ ಜವಾಬ್ದಾರಿಯನ್ನು ನಿರ್ವಹಿಸಲು ನನಗೆ ಗೌರವದಾಯಕ ಎನ್ನಿಸುತ್ತಿದೆ. ಭಾರತದ ವಿಮೆ ಕ್ಷೇತ್ರದಲ್ಲಿ ರಿಇನ್ಷೂರೆನ್ಸ್‌ ಬಿಸಿನೆಸ್‌ ಬೆಳವಣಿಗೆಯ ಮುಂದಿನ ಪಯಣದ ಬಗ್ಗೆ ನಾನು ಕಾತರನಾಗಿರುವೆ. ಜಾಗತಿಕ ತಂತ್ರಜ್ಞಾನ ಮತ್ತು ಸ್ಥಳೀಯ ಅನುಭವದ ಸಂಗಮ ಇದಾಗಲಿದೆ. ಗ್ರಾಹಕರಿಗೆ ವಿಶ್ವಾಸಾರ್ಹ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ನೀಡುವ ಸಂಸ್ಥೆಯಾಗಿ ಹೊರಹೊಮ್ಮಲಿದೆʼʼ ಎಂದು ಅಲಿಯಾನ್ಜ್‌ ಜಿಯೊ ರಿ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋನಿಯಾ ರಾವಲ್‌ ಹೇಳಿದ್ದಾರೆ.

BREAKING: ಮಾದರಿ ನೀತಿ ಸಂಹಿತೆ ಹಿನ್ನಲೆ: ನಾಳೆಗೆ ಒಳಮೀಸಲಾತಿ ಸಂಬಂಧದ ವಿಶೇಷ ಸಂಪುಟ ಸಭೆ ಮುಂದೂಡಿಕೆ

BREAKING: 2027ರ ಜನಗಣತಿಗೆ ಮುಹೂರ್ತ ಫಿಕ್ಸ್: ಏಪ್ರಿಲ್ 1ರಿಂದ ‘ಸ್ವಯಂ-ಗಣತಿ’ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ | Census 2027

Share. Facebook Twitter LinkedIn WhatsApp Email

Related Posts

ನನ್ನದೊಂದೇ ನಿಜವಾದ ಧರ್ಮ ಎಂದು ಹೇಳುವುದು ತಪ್ಪು: ಅಲಹಾಬಾದ್ ಹೈಕೋರ್ಟ್!

26/03/2026 9:26 PM1 Min Read

16,000 ಟನ್ ‘LPG’ ಹೊತ್ತ ‘ಅಪೊಲೊ ಓಷನ್’ ಭಾರತಕ್ಕೆ ಆಗಮನ ; ಜನಸಾಮಾನ್ಯ ಪರಿಹಾರ!

26/03/2026 9:01 PM1 Min Read

BREAKING : ಇನ್ಮುಂದೆ ‘ಒಲಿಂಪಿಕ್ಸ್’ನಲ್ಲಿ ಮಹಿಳಾ ಕ್ರೀಡೆಗಳಿಂದ ‘ಟ್ರಾನ್ಸ್ಜೆಂಡರ್ ಕ್ರೀಡಾಪಟು’ಗಳಿಗೆ ನಿಷೇಧ!

26/03/2026 8:08 PM1 Min Read
Recent News

ನನ್ನದೊಂದೇ ನಿಜವಾದ ಧರ್ಮ ಎಂದು ಹೇಳುವುದು ತಪ್ಪು: ಅಲಹಾಬಾದ್ ಹೈಕೋರ್ಟ್!

26/03/2026 9:26 PM

ಅಲಿಯಾನ್ಜ್‌ ಜಿಯೊ ರಿಇನ್ಷೂರೆನ್ಸ್ ಸೇವೆ ಆರಂಭ‌

26/03/2026 9:18 PM

BREAKING: ಮಾದರಿ ನೀತಿ ಸಂಹಿತೆ ಹಿನ್ನಲೆ: ನಾಳೆಗೆ ಒಳಮೀಸಲಾತಿ ಸಂಬಂಧದ ವಿಶೇಷ ಸಂಪುಟ ಸಭೆ ಮುಂದೂಡಿಕೆ

26/03/2026 9:14 PM

16,000 ಟನ್ ‘LPG’ ಹೊತ್ತ ‘ಅಪೊಲೊ ಓಷನ್’ ಭಾರತಕ್ಕೆ ಆಗಮನ ; ಜನಸಾಮಾನ್ಯ ಪರಿಹಾರ!

26/03/2026 9:01 PM
State News
KARNATAKA

BREAKING: ಮಾದರಿ ನೀತಿ ಸಂಹಿತೆ ಹಿನ್ನಲೆ: ನಾಳೆಗೆ ಒಳಮೀಸಲಾತಿ ಸಂಬಂಧದ ವಿಶೇಷ ಸಂಪುಟ ಸಭೆ ಮುಂದೂಡಿಕೆ

By kannadanewsnow0926/03/2026 9:14 PM KARNATAKA 1 Min Read

ಬೆಂಗಳೂರು: ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ನೀಡುವ ಬಗ್ಗೆ ಚರ್ಚಿಸಲು ನಾಳೆ, ದಿನಾಂಕ:27.03.2026, ಶುಕ್ರವಾರ…

BREAKING: ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಸುಭಾನ್ ಸಾಬ್ ಪಕ್ಷದಿಂದ ಉಚ್ಚಾಟನೆ

26/03/2026 8:20 PM

ALERT : `ಲೈಂಗಿಕ ಆಸಕ್ತಿ’ ಕಡಿಮೆಯಾಗಲು ಕಾರಣಗಳೇನು? ಇಲ್ಲಿವೆ ಪುರುಷರು ತಿಳಿದುಕೊಳ್ಳಲೇಬೇಕಾದ ಅಂಶಗಳು !

26/03/2026 8:17 PM

BREAKING: 2027ರ ಜನಗಣತಿಗೆ ಮುಹೂರ್ತ ಫಿಕ್ಸ್: ಏಪ್ರಿಲ್ 1ರಿಂದ ‘ಸ್ವಯಂ-ಗಣತಿ’ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ | Census 2027

26/03/2026 8:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.