Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸೇನಾ ಕ್ಯಾಪ್ಟನ್ ಪ್ರೇಯಸಿಗೆ ಮಾಡಿದ ಪ್ರಪೋಸ್ ಪುಲ್ ವೈರಲ್; ನೆಟ್ಟಿಗರ ಕಾಮೆಂಟ್ ಸುರಿಮಳೆ

​ನಾರ್ವೆ ಚೆಸ್: ಗುಕೇಶ್ ವಿರುದ್ಧ ರೋಚಕ ಜಯ ಸಾಧಿಸಿದ ಪ್ರಜ್ಞಾನಂದ; ಪ್ರಶಸ್ತಿ ರೇಸ್‌ನಲ್ಲಿ ಮುನ್ನಡೆ!

BREAKING: ಕಲಬುರ್ಗಿಯಲ್ಲಿ ಪ್ರೀತಿ ನಿರಾಕರಣೆಯ ಭೀತಿಯಲ್ಲಿ ರೈಲಿಗೆ ತಲೆಕೊಟ್ಟು ಪ್ರೇಮಿಗಳು ಆತ್ಮಹತ್ಯೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 2027ರ ಜನಗಣತಿಗೆ ಮುಹೂರ್ತ ಫಿಕ್ಸ್: ಏಪ್ರಿಲ್ 1ರಿಂದ ‘ಸ್ವಯಂ-ಗಣತಿ’ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ | Census 2027
KARNATAKA

2027ರ ಜನಗಣತಿಗೆ ಮುಹೂರ್ತ ಫಿಕ್ಸ್: ಏಪ್ರಿಲ್ 1ರಿಂದ ‘ಸ್ವಯಂ-ಗಣತಿ’ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ | Census 2027

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ದೇಶದ ಮಹತ್ವದ ಆಡಳಿತಾತ್ಮಕ ಪ್ರಕ್ರಿಯೆಯಾದ 2027ರ ಜನಗಣತಿಗೆ ಕ್ಷಣಗಣನೆ ಆರಂಭವಾಗಿದೆ. ಇದರ ಮೊದಲ ಹಂತವಾಗಿ ‘ಮನೆಗಳ ಪಟ್ಟಿ ಮತ್ತು ಮನೆ ಗಣತಿ’ (HLO) ಕಾರ್ಯಕ್ಕೆ ಕರ್ನಾಟಕ ಸರ್ಕಾರವು ಚಾಲನೆ ನೀಡಿದ್ದು, ಸಾರ್ವಜನಿಕರು ತಾವಾಗಿಯೇ ಮಾಹಿತಿ ದಾಖಲಿಸಲು ‘ಸ್ವಯಂ-ಗಣತಿ’ (Self-Enumeration) ಎಂಬ ವಿಶೇಷ ಅವಕಾಶವನ್ನು ಕಲ್ಪಿಸಿದೆ.

ಏನಿದು ಸ್ವಯಂ-ಗಣತಿ?

ಈ ಬಾರಿ ಜನಗಣತಿ ಪ್ರಕ್ರಿಯೆಯನ್ನು ಹೆಚ್ಚು ಸರಳಗೊಳಿಸಲಾಗಿದ್ದು, ಸಾರ್ವಜನಿಕರು ಗಣತಿದಾರರಿಗಾಗಿ ಕಾಯುವ ಅಗತ್ಯವಿಲ್ಲದೆ ಆನ್‌ಲೈನ್ ಮೂಲಕವೇ ತಮ್ಮ ಕುಟುಂಬದ ವಿವರಗಳನ್ನು ಸಲ್ಲಿಸಬಹುದು.

ಮನೆಯ ಯಾವುದೇ ಒಬ್ಬ ಜವಾಬ್ದಾರಿಯುತ ಸದಸ್ಯರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಇದಕ್ಕೆ ಕೇವಲ 15 ರಿಂದ 20 ನಿಮಿಷಗಳ ಕಾಲಾವಕಾಶ ಸಾಕು.

ನೋಂದಣಿ ಮಾಡುವುದು ಹೇಗೆ?

ಅಧಿಕೃತ ಜಾಲತಾಣ: ಸಾರ್ವಜನಿಕರು https://se.census.gov.in ಪೋರ್ಟಲ್‌ಗೆ ಭೇಟಿ ನೀಡಬೇಕು.
ನಿಗದಿತ ಅವಧಿ: ಈ ಸ್ವಯಂ-ಗಣತಿ ಪ್ರಕ್ರಿಯೆಯು 2026ರ ಏಪ್ರಿಲ್ 1 ರಿಂದ ಏಪ್ರಿಲ್ 15ರವರೆಗೆ (15 ದಿನಗಳು) ಮಾತ್ರ ಲಭ್ಯವಿರುತ್ತದೆ.

SE ID ಪಡೆಯುವುದು: ಮಾಹಿತಿ ಸಲ್ಲಿಕೆಯಾದ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್‌ಗೆ ‘ಸ್ವಯಂ-ಗಣತಿ ಐಡಿ’ (SE ID) ಬರಲಿದೆ. ಇದನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ಕಡ್ಡಾಯ.

ಗಣತಿದಾರರು ಮನೆಗೆ ಬಂದಾಗ ಏನು ಮಾಡಬೇಕು?

ಸ್ವಯಂ-ಗಣತಿ ಪೂರ್ಣಗೊಳಿಸಿದ ನಂತರವೂ ಗಣತಿದಾರರು ಮನೆ-ಮನೆಗೆ ಭೇಟಿ ನೀಡುತ್ತಾರೆ. ಆ ಸಮಯದಲ್ಲಿ ನೀವು ಈಗಾಗಲೇ ಪಡೆದಿರುವ SE ID ಯನ್ನು ಅವರಿಗೆ ತೋರಿಸಬೇಕು. ಇದರಿಂದ ನಿಮ್ಮ ಮಾಹಿತಿಯ ದೃಢೀಕರಣ ತಕ್ಷಣವೇ ಮುಗಿಯುತ್ತದೆ ಮತ್ತು ಗಣತಿದಾರರ ಕೆಲಸವೂ ಸುಲಭವಾಗಲಿದೆ.

ಸರ್ಕಾರದ ಆದೇಶ: “ರಾಜ್ಯದ ಎಲ್ಲಾ ಇಲಾಖೆಗಳು, ನಿಗಮ ಮತ್ತು ಮಂಡಳಿಗಳ ಅಧಿಕಾರಿಗಳು ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು. ನಾಗರಿಕರು ಸಕ್ರಿಯವಾಗಿ ಭಾಗವಹಿಸಿ 2027ರ ಜನಗಣತಿಯನ್ನು ಯಶಸ್ವಿಗೊಳಿಸಬೇಕು,” ಎಂದು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಗಳಾದ ನರಸಿಂಹಮೂರ್ತಿ ಜಿ.ಕೆ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share. Facebook Twitter LinkedIn WhatsApp Email

Related Posts

BREAKING: ಕಲಬುರ್ಗಿಯಲ್ಲಿ ಪ್ರೀತಿ ನಿರಾಕರಣೆಯ ಭೀತಿಯಲ್ಲಿ ರೈಲಿಗೆ ತಲೆಕೊಟ್ಟು ಪ್ರೇಮಿಗಳು ಆತ್ಮಹತ್ಯೆ!

1 Min Read

BREAKING: ವಿಧಾನ ಪರಿಷತ್ ಚುನಾವಣೆಗೆ 5ನೇ ಅಭ್ಯರ್ಥಿ ಕಣಕ್ಕೆ ಇಳಿಸಿದ ಕಾಂಗ್ರೆಸ್

1 Min Read

BREAKING: ಧಾರವಾಡ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿಗೆ ಪ್ರಾಧ್ಯಾಪಕನಿಂದಲೇ ಕಿರುಕುಳ!

2 Mins Read
Recent News

ಸೇನಾ ಕ್ಯಾಪ್ಟನ್ ಪ್ರೇಯಸಿಗೆ ಮಾಡಿದ ಪ್ರಪೋಸ್ ಪುಲ್ ವೈರಲ್; ನೆಟ್ಟಿಗರ ಕಾಮೆಂಟ್ ಸುರಿಮಳೆ

​ನಾರ್ವೆ ಚೆಸ್: ಗುಕೇಶ್ ವಿರುದ್ಧ ರೋಚಕ ಜಯ ಸಾಧಿಸಿದ ಪ್ರಜ್ಞಾನಂದ; ಪ್ರಶಸ್ತಿ ರೇಸ್‌ನಲ್ಲಿ ಮುನ್ನಡೆ!

BREAKING: ಕಲಬುರ್ಗಿಯಲ್ಲಿ ಪ್ರೀತಿ ನಿರಾಕರಣೆಯ ಭೀತಿಯಲ್ಲಿ ರೈಲಿಗೆ ತಲೆಕೊಟ್ಟು ಪ್ರೇಮಿಗಳು ಆತ್ಮಹತ್ಯೆ!

BREAKING: ವಿಧಾನ ಪರಿಷತ್ ಚುನಾವಣೆಗೆ 5ನೇ ಅಭ್ಯರ್ಥಿ ಕಣಕ್ಕೆ ಇಳಿಸಿದ ಕಾಂಗ್ರೆಸ್

State News
KARNATAKA

BREAKING: ಕಲಬುರ್ಗಿಯಲ್ಲಿ ಪ್ರೀತಿ ನಿರಾಕರಣೆಯ ಭೀತಿಯಲ್ಲಿ ರೈಲಿಗೆ ತಲೆಕೊಟ್ಟು ಪ್ರೇಮಿಗಳು ಆತ್ಮಹತ್ಯೆ!

By ವಸಂತ ಬಿ ಈಶ್ವರಗೆರೆ KARNATAKA 1 Min Read

ಕಲಬುರ್ಗಿ: ಮನೆಯವರು ತಮ್ಮ ಪ್ರೀತಿಯನ್ನು ಒಪ್ಪುವುದಿಲ್ಲ ಹಾಗೂ ಮದುವೆಗೆ ವಿರೋಧ ಮಾಡುತ್ತಾರೆ ಎಂಬ ಆತಂಕಕ್ಕೆ ಹೆದರಿದ ಪ್ರೇಮಿಗಳಿಬ್ಬರು ರೈಲಿಗೆ ತಲೆಕೊಟ್ಟು…

BREAKING: ವಿಧಾನ ಪರಿಷತ್ ಚುನಾವಣೆಗೆ 5ನೇ ಅಭ್ಯರ್ಥಿ ಕಣಕ್ಕೆ ಇಳಿಸಿದ ಕಾಂಗ್ರೆಸ್

BREAKING: ಧಾರವಾಡ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿಗೆ ಪ್ರಾಧ್ಯಾಪಕನಿಂದಲೇ ಕಿರುಕುಳ!

ಕೆಂಪೇಗೌಡ ಜಯಂತಿಯಂದು ಬಿಡಿಎ ವತಿಯಿಂದ 15 ಲಕ್ಷ ಸಸಿ ನೆಡುವ ಕಾರ್ಯಕ್ರಮ: ಸಿಎಂ ಡಿ.ಕೆ.ಶಿವಕುಮಾರ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.