ರಾಯಚೂರು: ಮಕ್ಕಳು ತಿನ್ನುವ ಚಾಕೊಲೇಟ್ ನಲ್ಲಿ ಗಾಂಜಾ ಮಿಶ್ರಣ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ರಾಯಚೂರಿನ ನಗರದ 8 ಕಡೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪಾನ್ ಶಾಪ್, ಕಿರಾಣಿ ಸ್ಟೋರ್, ಬೇಕರಿ ಸೇರಿ 8 ಕಡೆ ರೇಡ್ ಮಾಡಿದ್ದಾರೆ. ಆದ್ರೆ ಸರ್ಚ್ ವಾರಂಟ್ ಇಲ್ಲದೇ ಶೋಧ ನಡೆಸಿದ್ದಾರೆಂದು ಅಂಗಡಿ ಮಾಲೀಕರು ಹಾಗೂ ಅಬಕಾರಿ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ.ನಗರದಲ್ಲಿ ಚಾಕೊಲೇಟ್ ಮಾದರಿಯಲ್ಲೇ ಗಾಂಜಾ ಮಿಶ್ರಿತ ಚಾಕೊಲೇಟ್ ತಯಾರಿ ಮಾಡಲಾಗುತ್ತಿದೆ ಎಂಬ ಮಾಹಿತಿ ಅಧಿಕಾರಿಗಳಿಗೆ ಸಿಕ್ಕಿದೆ. ಹೀಗಾಗಿ ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಯಾದಗಿರಿಯಲ್ಲಿ ಇದೇ ಮಾದರಿಯ ಗಾಂಜಾ ಚಾಕೊಲೇಟ್ ಸೀಜ್ ಮಾಡಲಾಗಿತ್ತು. ಈ ಹಿನ್ನೆಲೆ ರಾಯಚೂರಿನಲ್ಲಿ ದಂಧೆಕೋರರು ಅಲರ್ಟ್ ಆಗಿದ್ದಾರೆ. ಹಾಗೂ ಸರ್ಚ್ ವೇಳೆ ಅಂಗಡಿ ಮಾಲೀಕರಿಗೂ ಅಬಕಾರಿ ಸಿಬ್ಬಂದಿ ನಡುವೆ ಟಾಕ್ ವಾರ್ ನಡೆದಿದೆ. ತಮ್ಮ ಸಮುದಾಯ ಟಾರ್ಗೆಟ್ ಮಾಡಿ ದಾಳಿ ಮಾಡಲಾಗುತ್ತಿದೆ ಎಂದು ವ್ಯಾಪಾರಸ್ಥರು ಆರೋಪ ಮಾಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.