ಬೆಂಗಳೂರು: ಪಿ.ಎಸ್.ಐ.ಮತ್ತು ಸಿಟಿಐ ಪರೀಕ್ಷೆ ಪತ್ರಿಕೆ ಲೀಕ್ ಮಾಡಿರುವ ಆರೋಪ ಕೇಳಿ ಬಂದಿದೆ. ಇಂಟೆಲಿಜೆನ್ಸ್ ವಿಭಾಗದಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಲಿಂಗಯ್ಯ ಎಂಬ ಅಧಿಕಾರಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದಾರೆ ಎಂದು ಅರೋಪಿಸಲಾಗಿದೆ.
545 ಪಿಎಸ್ಐ ಹುದ್ದೆ ಸಿಟಿಐ(ಕಮರ್ಷಿಯಲ್ ಟ್ಯಾಕ್ಸ್ ಇನ್ಸೆಕ್ಟರ್) ಕೆಪಿಎಸ್ಸಿ ನಡೆಸುತ್ತಿರುವ ಪರೀಕ್ಷೆ ಇದಾಗಿದೆ. ಇತ್ತ ಲಿಂಗಯ್ಯ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಹಾಗೂ ವಾಟ್ಸ್ಆ್ಯಪ್ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೂರಾರು ಪರೀಕ್ಷಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಮಾಡಿದ್ದಾರೆ.
ಹಣಕ್ಕೆ ಬೇಡಿಕೆ, ಪರೀಕ್ಷೆ ವಿಚಾರವಾಗಿ ಡೀಲ್ ಬಗ್ಗೆ ಲಿಂಗಯ್ಯ ಮಾತಾಡಿದ್ದಾರೆ ಎನ್ನುವ ಆಡಿಯೋ, ವಾಟ್ಸಾಪ್ ಚಾಟ್ ವೈರಲ್ ಹಿನ್ನೆಲೆ ಚಂದ್ರಾಲೇಔಟ್ ಠಾಣೆಯಲ್ಲಿ ಪರೀಕ್ಷಾರ್ಥಿಗಳು ದೂರು ನೀಡಿದ್ದಾರೆ. ಇತ್ತ ನೂರಾರು ಪರೀಕ್ಷಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಆರೋಪಿಸಿ ದೂರು ದಾಖಲಿಸುತ್ತಿದ್ದಂತೆ ಎಚ್ಚೆತ್ತ ಸಿಸಿಬಿ ಅಧಿಕಾರಿಗಳು ಪಿಎಸ್ಐ ಲಿಂಗಯ್ಯ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.