ಬಾಗಲಕೋಟೆ : ಚರಂಡಿ ನೀರಿನಲ್ಲಿ ಶಾಲಾ ಮಕ್ಕಳು ತಟ್ಟೆ ತೊಳದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಸಹ ಶಿಕ್ಷಕಿ ನಂದಾ ಭೀಮಾಜಿ ಕುಲಕರ್ಣಿಯನ್ನು ಇದೀಗ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಸಹ ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು ಆಲಬಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಿನ್ನೆ ಈ ಒಂದು ಘಟನೆ ನಡೆದಿತ್ತು.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಳಬಾಳ ಗ್ರಾಮದಲ್ಲಿ ಮಕ್ಕಳ ತಟ್ಟೆಗಳನ್ನು ಚರಂಡಿNನೀರಿನಲ್ಲಿ ತೊಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಇದೀಗ ಈ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದ್ದು, ನಾಗರೀಕ ಸೇವಾ ಅಧಿನಿಯಮ, 1957 ನಿಯಮ 10(01) ರ ಅಡಿ ಕ್ರಮ ಕೈಗೊಳ್ಳಲಾಗಿದೆ.
ತಪ್ಪೇಸಗಿದ್ದಲ್ಲಿ ಕ್ರಮ ಕೈಗೊಳ್ಳುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೇ ಸೂಚನೆ ನೀಡಿದ್ದರು..ಆಯೋಗದ ಅಧ್ಯಕ್ಷರ ಸೂಚನೆಯ ಮೇರೆಗೆ ಇದೀಗ ಸಹ ಶಿಕ್ಷಕಿ ನಂದಾ ಅವರನ್ನ ಅಮಾನತು ಮಾಡಿ ಉಪ ನಿರ್ದೇಶಕರು ಹಾಗೂ ಶಿಸ್ತು ಪ್ರಾಧಿಕಾರಗಳ ಶಾಲಾ ಶಿಕ್ಷಣ ಇಲಾಖೆ ಕರ್ತವ್ಯ ನಿರ್ಲಕ್ಷ್ಯ ಮತ್ತು ಕಾರಣ ಕೇಳಿ ನೋಟಿ ನೀಡಲಾಗಿತ್ತು.ನೋಟಿಸ್ ಗೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಸಹ ಶಿಕ್ಷಕಿ ನಂದ ಅವರನ್ನು ಅಮಾನತು ಮಾಡಿ ಎಸಿ ಮನ್ನಿಕೆರಿ ಆದೇಶ ಹೊರಡಿಸಿದ್ದಾರೆ.








