ಬೆಂಗಳೂರು : ಬೆಂಗಳೂರಿನ ವಿವಿಧ ಠಾಣೆಗಳ ನಾಲ್ವರು ಪೊಲೀಸ್ ಸಿಬ್ಬಂದಿಗಳನ್ನು ಇದೀಗ ಸಸ್ಪೆಂಡ್ ಮಾಡಲಾಗಿದೆ. ನಾಲ್ವರನ್ನು ಅಮಾನತುಗೊಳಿಸಿ ಉತ್ತರ ವಿಭಾಗ ಡಿಸಿಪಿ ನೇಮಗೌಡ ಆದೇಶ ಹೊರಡಿಸಿದ್ದಾರೆ. ಕರ್ತವ್ಯ ಲೋಪ ಎಸಗಿದ್ದ ಆರೋಪ ಹಿನ್ನೆಲೆಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿಗಳನ್ನ ಮಾಡಲಾಗಿದೆ.
ನಂದಿನಿ ಲೇಔಟ್ ಪೊಲೀಸ್ ಠಾಣೆಯ ASI ಶ್ರೀನಿವಾಸ, ಸುಬ್ರಮಣ್ಯ ನಗರ ಠಾಣೆಯ ASI ಜಯ ರಾಮೇಗೌಡ, ಹೆಡ್ ಕಾನ್ಸ್ಟೇಬಲ್ ಧರ್ಮ ಹಾಗು ಸಂಜಯ ನಗರ ಠಾಣೆ ಕಾನ್ಸ್ಟೇಬಲ್ ನಜೀರ್ ಎನ್ನುವ ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ. ಕರ್ತವ ಲೋಪ ಹಿನ್ನೆಲೆಯಲ್ಲಿ ನಾಲ್ವರನ್ನು ಅಮಾನತುಗೊಳಿಸಿ ಡಿಸಿಪಿ ಆದೇಶ ಹೊರಡಿಸಿದ್ದಾರೆ








