ಅಂಬಿಕಾಪುರ್ (ಛತ್ತೀಸ್ಗಢ): ಭಾರತದಲ್ಲಿ ವಾಸಿಸುತ್ತಿರುವವರೆಲ್ಲ ಹಿಂದೂಗಳು. ಭಾರತೀಯರ ಎಲ್ಲ ಡಿಎನ್ಎಗಳು ಒಂದೇ ಎಂದು ರಾಷ್ಟ್ರೀಯ ಸ್ವಯಂ ಸೇವಕ್ ಸಂಘ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಪುನರುಚ್ಛರಿಸಿದ್ದಾರೆ.
G-20 Summit: ವಿಶ್ವ ನಾಯಕರೊಂದಿಗೆ ಮ್ಯಾಂಗ್ರೋವ್ ಕಾಡಿಗೆ ಭೇಟಿ ನೀಡಿ, ಸಸಿ ನೆಟ್ಟ ಪ್ರಧಾನಿ ಮೋದಿ
ಇಲ್ಲಿ ನಡೆದ ಸ್ವಯಂಸೇವಕ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಚರಣೆ ವಿಚಾರದಲ್ಲಿ ಯಾರು ಕೂಡ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಭಾರತದ ವೈವಿಧ್ಯತೆಯಲ್ಲಿ ಏಕತೆಯ ಗುಣ ಬಹಳ ಹಿಂದಿನದು. ಪ್ರಪಂಚದಲ್ಲಿ ಎಲ್ಲರನ್ನು ಒಗ್ಗೂಡಿ ಕರೆದುಕೊಂಡು ಹೋಗುವ ತತ್ವ ಹೊಂದಿರುವ ಕಲ್ಪನೆ ಹೊಂದಿರುವುದು ಹಿಂದುತ್ವದಲ್ಲಿ ಮಾತ್ರ ಎಂಬುದನ್ನು ಪ್ರತಿಪಾದಿಸಿದರು.
ಆರ್ಎಸ್ಎಸ್ ಜನ್ಮತಾಳಿದಾಗಿನಿಂದ ಅಂದರೆ 1925ರಿಂದಲೂ ನಾವು ಭಾರತದಲ್ಲಿ ವಾಸಿಸುವ ಎಲ್ಲರೂ ಹಿಂದೂಗಳು ಎಂದು ಹೇಳಿಕೊಂಡು ಬಂದಿದ್ದೇವೆ. ನಾವು ಭಾರತವನ್ನು ಮಾತೃಭೂಮಿ ಎಂದು ಪರಿಗಣಿಸಿದ್ದು, ವಿವಿಧತೆಯಲ್ಲಿ ಏಕತೆ ಎಂಬಂತೆ ಬದುಕುತ್ತಿದ್ದೇವೆ. ಧರ್ಮ, ಜಾತಿ, ಮತ, ಭಾಷೆ, ಅವರ ಸಿದ್ಧಾಂತಗಳನ್ನು ಲೆಕ್ಕಿಸದೆ ಈ ದೇಶದಲ್ಲಿ ವಾಸಿಸುವವರನ್ನೆಲ್ಲಾ ಹಿಂದೂ ಎಂದು ಪರಿಗಣಿಸಿದ್ದೇವೆ. ಹಿಂದುತ್ವದ ಸಿದ್ದಾಂತ ವಿವಿಧತೆ ಮತ್ತು ಎಲ್ಲರೂ ಒಂದೇ ಎಂಬ ಏಕತೆ ಅನುಸಾರವಾಗಿದೆ. ಹಿಂದುತ್ವ ಎಂದರೆ ವಿವಿಧತೆಯಲ್ಲಿ ಏಕತೆ ಎಂಬುದನ್ನು ಇಡೀ ಪ್ರಪಂಚ ನಂಬಿದೆ. ಕಾರಣ ಸಾವಿರಾರು ವರ್ಷಗಳಿಂದ ವಿವಿಧತೆಯಲ್ಲಿ ಏಕತೆಯನ್ನು ಈ ದೇಶ ಕಾಪಾಡಿಕೊಂಡು ಬಂದಿದೆ. ಇದು ಸತ್ಯವಾಗಿರುವುದರಿಂದ ನಿರ್ಭಯವಾಗಿ ಹೇಳಬೇಕಿದೆ. ಸಂಘ ಜನರ ನಡುವಿನ ಏಕತೆ ನಿರ್ಮಾಣಕ್ಕಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಭಾಗವತ್ ಹೇಳಿದರು.
G-20 Summit: ವಿಶ್ವ ನಾಯಕರೊಂದಿಗೆ ಮ್ಯಾಂಗ್ರೋವ್ ಕಾಡಿಗೆ ಭೇಟಿ ನೀಡಿ, ಸಸಿ ನೆಟ್ಟ ಪ್ರಧಾನಿ ಮೋದಿ
ಪ್ರತಿಯೊಬ್ಬರ ನಂಬಿಕೆಯನ್ನು ಗೌರವಿಸುವ ಮತ್ತು ಎಲ್ಲಾ ಭಾರತೀಯರ ಡಿಎನ್ಎ ಒಂದೇ ಎಂಬುದನ್ನು ಒತ್ತಿ ಹೇಳಿದ ಅವರು, ನಮ್ಮ ಪೂರ್ವಿಕರು 40 ಸಾವಿರ ವರ್ಷಗಳಿಂದ ಅಖಂಡ ಭಾರತದಲ್ಲಿದ್ದು, ನಮ್ಮೆಲ್ಲಾ ಡಿಎನ್ಎ ಒಂದೇ. ನಮ್ಮ ಪೂರ್ವಿಕರು ಪ್ರತಿಯೊಬ್ಬರು ತಮ್ಮ ನಂಬಿಕೆ ಮತ್ತು ಆಚರಣೆಗೆ ಅಂಟಿಕೊಂಡಿರಬೇಕು ಎಂದು ತಿಳಿಸಿದರು. ಅವರು ಯಾರನ್ನು ಮತಾಂತರ ಮಾಡಲಿಲ್ಲ. ಪ್ರತಿಯೊಂದು ಧರ್ಮದ ನಂಬಿಕೆ ಮತ್ತು ಆಚರಣೆಗಳನ್ನು ಗೌರವಿಸಬೇಕು ಎಂದು ಕರೆ ನೀಡಿದ ಅವರು, ಪ್ರತಿಯೊಬ್ಬರ ಮಾರ್ಗವನ್ನು ನಾವು ಗೌರವಿಸಬೆಕಿದೆ. ಪ್ರತಿಯೊಬ್ಬರ ಯಶಸ್ಸಿಗೆ ನಾವು ಹಾದಿಯಾಗಬೇಕು. ಆದರೆ ಬೇರೆಯವರ ಬಗ್ಗೆ ಕಾಳಜಿ ಇಲ್ಲದೇ ಸ್ವಾರ್ಥಿಗಳಾಗಬಾರದು ಎಂದು ಆರ್ಎಸ್ಎಸ್ ಕಿವಿಮಾತು ಹೇಳಿದರು.
G-20 Summit: ವಿಶ್ವ ನಾಯಕರೊಂದಿಗೆ ಮ್ಯಾಂಗ್ರೋವ್ ಕಾಡಿಗೆ ಭೇಟಿ ನೀಡಿ, ಸಸಿ ನೆಟ್ಟ ಪ್ರಧಾನಿ ಮೋದಿ
ಕೋವಿಡ್ ವಿರುದ್ಧ ಹೋರಾಡುವಾಗ ಇಡೀ ಪ್ರಪಂಚ ಒಟ್ಟಾಗಿ ಹೋರಾಡುವುದನ್ನು ಹೇಳಿಕೊಟ್ಟಿತು. ನಮಗಾಗಿ ನಾವು ಎಷ್ಟು ಹೋರಾಡುತ್ತೇವೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಬಿಕ್ಕಟ್ಟಿನ ಸಮಯದಲ್ಲಿ ನಾವು ಒಟ್ಟಾಗಿ ಇರಬೇಕು. ದೇಶ ಯಾವುದಾದರೂ ತೊಂದರೆಯಲ್ಲಿದ್ದಾಗ ಒಟ್ಟಾಗಿ ನಾವು ಹೋರಾಡಬೇಕು. ಕೋವಿಡ್ ವೇಳೆ ಸೋಂಕಿನ ವಿರುದ್ಧ ಇಡೀ ರಾಷ್ಟ್ರ ಒಂದಾಗಿ ಹೋರಾಡಿತು. 97 ವರ್ಷದ ಸಂಘಟನೆ ಮುಖ್ಯ ಗುರಿ ಸತ್ಯದ ಹಾದಿಯಲ್ಲಿ ನಡೆಯುವಾಗ ಜನರನ್ನು ಒಂದುಗೂಡಿಸುವುದು ಎಂದು ಮೋಹನ್ ಭಾಗವತ್ ಉಲ್ಲೇಖಿಸಿದರು.
G-20 Summit: ವಿಶ್ವ ನಾಯಕರೊಂದಿಗೆ ಮ್ಯಾಂಗ್ರೋವ್ ಕಾಡಿಗೆ ಭೇಟಿ ನೀಡಿ, ಸಸಿ ನೆಟ್ಟ ಪ್ರಧಾನಿ ಮೋದಿ
ಈ ಹಿಂದೆಯೂ ಅನೇಕ ಬಾರಿ ಭಾರತದಲ್ಲಿರುವ ಎಲ್ಲ ಜನರ ಡಿಎನ್ಎ ಒಂದೇ ಎಂದಿದ್ದ ಭಾಗವತ್, ಇದೀಗ ಮತ್ತೊಮ್ಮೆ ಈ ಕುರಿತು ಹೇಳಿಕೆ ನೀಡಿದ್ದಾರೆ.