ಬೆಂಗಳೂರು : ನಿನ್ನೆ ನಡೆದ ರಾಮೇಶ್ವರಂ ಕೆಫೆಯಲ್ಲಿ ಬಾಂಬೆ ಬ್ಲಾಸ್ಟ್ ಪ್ರಕರಣದಲ್ಲಿ ಸುಮಾರು 9 ಜನರು ಗಾಯಗೊಂಡಿದ್ದರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಸ್ಪತ್ರೆಗೆ ಭೇಟಿ ನೀಡಿ ನಂತರ ವೈದೇಹಿ ಆಸ್ಪತ್ರೆಗು ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದರು.
ರಾಮೇಶ್ವರಂ ಕೆಫೆ ಸ್ಫೋಟ: ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ!
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲಾ ರೋಗಿಗಳು ಅರೋಗ್ಯವಾಗಿದ್ದರೆ. ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸುತ್ತದೆ. ಒಳ್ಳೆಯ ಚಿಕಿತ್ಸೆ ನೀಡಿ ಎಂದು ವೈದ್ಯರಿಗೆ ಸಲಹೆ ನೀಡಿದ್ದೇನೆ. ಗಾಯಾಳುಗಳಿಗೆ ಮಾತನಾಡಿದ್ದು ಎರಡು ಮೂರು ದಿನಗಳಲ್ಲಿ ಗುಣಮುಖರಾಗುತ್ತಾರೆ ಎಂದು ತಿಳಿದುಬಂದಿದೆ . ಈಗಾಗಲೇ ಇಬ್ಬರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದರು.
ಘಟನೆ ಕುರಿತಂತೆ ಈಗಾಗಲೇ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಓರ್ವ ಶಂಕಿತನನ್ನು ಪತ್ತೆ ಹಚ್ಚಿದ್ದಾರೆ. ಟೋಪಿ ಹಾಕಿಕೊಂಡು ಮಾಸ್ಕ್ ಹಾಕಿಕೊಂಡು ಬಸ್ಸಿನಲ್ಲಿ ಬಂದಿದ್ದಾನೆ.ಬ್ಯಾಗಿನಲ್ಲಿ ಬಾಂಬ್ ಇಟ್ಟುಕೊಂಡು ಬಂದಿದ್ದಾನೆ.ಟೈಮ್ ಬಾಂಬ್ ಅನ್ನು ಕೆಫೆಯಲ್ಲಿ ಇಟ್ಟು ತೆರಳಿದ್ದಾನೆ. ನಂತರ ಒಂದು ಗಂಟೆ ಆದಮೇಲೆ ಬ್ಲಾಸ್ಟ್ ಆಗಿದೆ.
ಕೆಫೆಯಲ್ಲಿ ‘ಬಾಂಬ್ ಬ್ಲಾಸ್ಟ್’ ಪ್ರಕರಣ : ಬರೋಬ್ಬರಿ 3 ತಿಂಗಳಿನಿಂದ ತಯ್ಯಾರಿ ಮಾಡಿಕೊಂಡಿದ್ದ ಆರೋಪಿ!
ಆತನ ಚಲನವಲನಗಳು ಸಂಪೂರ್ಣವಾಗಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.ತಕ್ಷಣ ಆತನನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದೆ. ಘಟನಾ ಸ್ಥಳದಲ್ಲಿ ಅವರು ಗಾಯಗೊಂಡವರು ಶಾಕ್ ಆಗಿದ್ದರಿಂದ ಏನು ನಡೆದಿದೆ ಎಂದು ಅವರಿಗೆ ತಿಳಿದಿಲ್ಲ. ಒಬ್ಬರಿಗೆ ಮಾತ್ರ ತುಂಬಾ ಗಂಭೀರವಾಗಿದೆ ವೈದ್ಯರಿಗೆ ಒಳ್ಳೆ ರೀತಿಯ ಚಿಕಿತ್ಸೆ ನೀಡಿ ಎಂದು ಸಲಹೆ ನೀಡಿದ್ದೇನೆ ಎಂದರು.