ಬೆಂಗಳೂರು : ಕಳೆದ ಒಂದು ವಾರದ ಹಿಂದೆ ಬೆಂಗಳೂರಿನ ಕುಂದಲಹಳ್ಳಿ ಬಳಿ ಇರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಈ ಒಂದು ಘಟನೆಯಲ್ಲಿ ಹತ್ತು ಜನರು ಗಾಯಗೊಂಡಿದ್ದರು.ಇದೀಗ ಇಂದಿನಿಂದ ರಾಮೇಶ್ವರಂ ಕೆಫೆ ಮತ್ತೆ ಪುನರಾರಂಭಗೊಂಡಿದೆ ಈ ಕುರಿತು ಕೆಫೆ ಮಾಲೀಕ ರಾಘವೇಂದ್ರ ರಾವ್ ಮಾತನಾಡಿದ್ದಾರೆ.
ಚಿಕ್ಕಬಳ್ಳಾಪುರ : ಸಂಬಂಧಿ ಯುವಕನಿಂದಲೇ ಅತ್ಯಾಚಾರ : 7ನೇ ತರಗತಿ ಬಾಲಕಿ 6 ತಿಂಗಳ ಗರ್ಭಿಣಿ
ರಾಮೇಶ್ವರಂ ಕೆಫೆಯನ್ನು ಮತ್ತೆ ಆರಂಭಿಸಿರುವ ಕುರಿತಾಗಿ ಮಾತನಾಡಿದ ಅವರು, ಎಲ್ಲರೂ ಜೊತೆಗೂಡಿ ಎದುರಿಸಬೇಕು ಅನ್ನೋ ಧೈರ್ಯ ತುಂಬಿದ್ದಾರೆ. ಶಿವರಾತ್ರಿ ಹಬ್ಬದ ಮರುದಿನ ಕೆಫೆಯನ್ನು ಪ್ರಾರಂಭ ಮಾಡಿದ್ದೇವೆ. ಘಟನೆಯಿಂದ ಎಲ್ಲಾ ಹೋಟೆಲ್ನವರು ಕೂಡ ಎಚ್ಚೆತ್ತುಕೊಂಡಿದ್ದಾರೆ.ಕೆಫೆಗೆ ಬರುವಂತಹ ಗ್ರಾಹಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದೆ.ಘಟನೆಗೆ ಸಂಬಂಧಿಸಿದಂತೆ ಸಹಕರಿಸಿದ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಧನ್ಯವಾದಗಳು ಎಂದು ರಾಮೇಶ್ವರಂ ಕೆಫೆ ಮಾಲಿಕ ರಾಘವೇಂದ್ರ ರಾವ್ ತಿಳಿಸಿದ್ದಾರೆ.
ಬಾಂಬ್ ಸ್ಪೋಟದಿಂದ ಒಂದು ವಾರದಿಂದ ರಾಮೇಶ್ವರಂ ಕೆಫೆ ಬಂದ್ ಆಗಿತ್ತು. ಪೊಲೀಸರು NIA ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಅಲ್ಲದೆ ಕೆಫೆಯಲ್ಲಿನ ಪೀಠೋಪಕರಣಗಳು ಕೂಡ ಹಾಳಾಗಿದ್ದವು. ಆದರೆ ಇಂದಿನಿಂದ ಮತ್ತೆ ರಾಮೇಶ್ವರಂ ಕೆಫೆ ಆರಂಭವಾಗಿದೆ. ಕೆಫೆಗೆ ಬರುವ ಸಂಶಯ ಆಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಡಲಾಗುತ್ತದೆ. ಕೆಫೆಯ ಬಳಿ 2 ಮೆಟಲ್ ಡಿಟೆಕ್ಟರ್ ಕೂಡ ಅಳವಡಿಸಲಾಗಿದೆ.
ಮಾಲ್ಡೀವ್ಸ್ ಜನರಿಗೆ ‘ವಿಷಾದವಿದೆ’: ಭಾರತದೊಂದಿಗಿನ ಸಂಬಂಧ ಹದಗೆಡುತ್ತಿರುವ ಬಗ್ಗೆ ಮಾಜಿ ಅಧ್ಯಕ್ಷ