ಶಿವಮೊಗ್ಗ: ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಿಡಿಸಿಯ ಹಣವನ್ನು ಉತ್ತಮ ರೀತಿಯಲ್ಲಿ ಸದ್ವಿನಿಯೋಗ ಮಾಡಿಕೊಳ್ಳಬೇಕು. ಕಾಲೇಜು ಅಭಿವೃದ್ಧಿಗೆ ಬೇಕಿರುವಂತ ಎಲ್ಲಾ ಸಹಕಾರವನ್ನು ನೀಡುವುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿಡಿಸಿ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಪ್ರಾಂಶುಪಾಲರಾದಂತ ಡಾ.ಸಣ್ಣ ಹನುಮಂತಪ್ಪ ಅವರು ಅಜೆಂಡಾ ಮಂಡಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕಾಗಿ ಈ ವರ್ಷ 2 ಕೋಟಿ ಅನುದಾನ ಬಂದಿದೆ. 8-10 ಕೊಠಡಿಗಳ ಅವಶ್ಯಕತೆ ಇದೆ. ಈಗಾಗಲೇ ರಾಜ್ಯ ಸರ್ಕಾರದಿಂದ 5 ಎಕರೆ ಜಮೀನನ್ನು ಕಾಲೇಜಿನ ಪಕ್ಕದಲ್ಲಿ ನೀಡಲಾಗಿದೆ. ಮೂಲ ಸೌಕರ್ಯಾಭಿವೃದ್ಧಿಗೆ ಇನ್ನೂ ಐದು ಎಕರೆ ಹೆಚ್ಚುವರಿಯಾಗಿ ಬೇಕಿದೆ. ವಾಹನ ನಿಲ್ದಾಣ ನಿರ್ಮಾಣ ಮಾಡಿಕೊಡುವಂತೆಯೂ ಸಿಡಿಸಿ ಅಧ್ಯಕ್ಷರಾದಂತ ಶಾಸಕ ಬೇಳೂರು ಗೋಪಾಲಕೃಷ್ಣ ಅವರಲ್ಲಿ ಮನವಿ ಮಾಡಿದರು.
ಸದ್ಯ ಸಿಡಿಸಿ ಖಾತೆಯಲ್ಲಿ 10.20 ಲಕ್ಷ ಇದೆ. ಇದರಲ್ಲಿ ಗುತ್ತಿಗೆ ನೌಕರರ ವೇತನಕ್ಕೆ 1.20 ಲಕ್ಷ ಹೋಗಲಿದೆ. ಕರೆಂಟ್ ಬಿಲ್, ಪೋನ್ ಬಿಲ್, ಸೇರಿದಂತೆ ಇತರೆ ಖರ್ಚುಗಳಿಗೆ 6 ಲಕ್ಷ ವಾರ್ಷಿಕ ಖರ್ಚಾಗಲಿದೆ. ಸಿಡಿಸಿ ಸದಸ್ಯರ ಗೌರವಧನವನ್ನು 2000ಕ್ಕೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂಬುದಾಗಿ ಪ್ರಾಂಶುಪಾಲ ಡಾ.ಸಣ್ಣ ಹನುಮಂತಪ್ಪ ಅವರು ಸಭೆಗೆ ತಿಳಿಸಿದರು.
ಈ ಮನವಿಗೆ ಸಕಾರಾತ್ಮಕವಾಗಿಯೇ ಸ್ಪಂದಿಸಿದಂತ ಶಾಸಕರು, ಸ್ಥಳದಲ್ಲೇ ಇದ್ದಂತ ಪಿಎ ಟಿ.ಪಿ ರಮೇಶ್ ಅವರಿಗೆ ಕಾಲೇಜಿಗೆ ಬೇಕಿರುವಂತ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸುವಂತೆ ಸೂಚಿಸಿದರು. ಅಲ್ಲದೇ ಈ ವರ್ಷ ಅಗತ್ಯವಿರುವಂತ ಸಿಡಿಸಿ ಹಣ ಬಳಕೆಗೂ ಅನುಮತಿಯನ್ನು ನೀಡಿದರು.
ಕಾಲೇಜು ಅಭಿವೃದ್ಧಿಗೆ ನನ್ನಿಂದ ಎಲ್ಲಾ ಸಹಕಾರ ಸಿಗಲಿದೆ. ಸ್ವಚ್ಛತೆಯ ಬಗ್ಗೆ ಪ್ರಾಮುಖ್ಯತೆ ಕೊಡಬೇಕು. ಸಿಡಿಸಿ ಕಮಿಟಿಯ ಸದಸ್ಯರೊಂದಿಗೆ ಚರ್ಚಿಸಿ ಅನುದಾನ ಬಳಕೆ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳುವಂತೆ ಪ್ರಾಂಶುಪಾಲರಿಗೆ ಸೂಚಿಸಿದರು. ಅಲ್ಲದೇ ಸಿಡಿಸಿ ಸದಸ್ಯರಿಗೆ ಈ ಕಾಲೇಜು ನಿಮ್ಮದು. ನಿಮ್ಮ ಜವಾಬ್ದಾರಿ ಕೂಡ ಇಲ್ಲಿ ಇದೆ. ಬಿಡುವಾದಾಗ ಕಾಲೇಜಿಗೆ ಭೇಟಿ ನೀಡುವಂತೆ ತಿಳಿಸಿದರು.
ಇದೇ ವೇಳೆ ಮಾತನಾಡಿದಂತ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ವರ್ಷ 1050 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರಲ್ಲಿ 150 ಬಾಲಕಿಯರು ಸಹ ಸೇರಿದ್ದಾರೆ. ಕಾಲೇಜಿನ ಲೈಬ್ರರಿಗೆ ದೊಡ್ಡದಾದಂತ ಕೊಠಡಿ ನಿರ್ಮಿಸಿಕೊಡಲು ಕೋರಿದ್ದಾರೆ. ಅದರ ಕಾಮಗಾರಿಯು ಪ್ರಗತಿಯಲ್ಲಿದೆ. ಅನುದಾನ ಕೂಡ ಒದಗಿಸಲಾಗಿದೆ ಎಂದರು.
ಕಾಲೇಜಿನ ಸಮೀಪದಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವಂತಿಲ್ಲ. ಕಾಲೇಜಿನ ಎದುರಿನ ಅಂಗಡಿಯಲ್ಲಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅದನ್ನು ನಿಲ್ಲಿಸುವಂತೆ ಸಂಬಂಧಿಸಿದಂತ ಇಲಾಖೆಗೆ ಸೂಚಿಸಿ, ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಕಾಲೇಜಿಗೆ ಬರೋದಕ್ಕೆ, ವಾಪಾಸ್ಸು ತೆರಳೋದಕ್ಕೆ ಸಾರಿಗೆ ಸಂಚಾರದ ಸಮಸ್ಯೆ ಆಗುತ್ತಿದೆ ಎಂಬುದಾಗಿ ವಿದ್ಯಾರ್ಥಿನಿಯರು ಸಮಸ್ಯೆ ಸರಿಪಡಿಸಿ, ಮತ್ತಷ್ಟು ಬಸ್ ಸಂಚಾರದ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆಗೆ ಚರ್ಚಿಸಿ, ಕಾಲೇಜು ಸಮಯದಲ್ಲಿ ಹೆಚ್ಚುವರಿ ಬಸ್ ಸಂಚಾರದ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಸಾಗರದ ಇಂದಿರಾ ಗಾಂಧಿ ಮಹಿಳಾ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜ್ಯೂನಿಯರ್ ಕಾಲೇಜು, ಸರ್ಕಾರಿ ಆಸ್ಪತ್ರೆಯ ಬಳಿಯಲ್ಲಿ ನಂದಿನಿ ಬೂತ್ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಇದರಿಂದ ಉತ್ತಮ ಗುಣಮಟ್ಟದ ನಂದಿನಿ ಉತ್ಪನ್ನಗಳು ವಿದ್ಯಾರ್ಥಿಗಳಿಗೆ ಸಿಗುವಂತೆ ಆಗಲಿದೆ ಎಂದು ಹೇಳಿದರು.
ಈ ವೇಳೆ ಕಾಲೇಜು ಕ್ಯಾಂಟೀನ್ ಗೂ ಭೇಟಿ ನೀಡಿದಂತ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಉತ್ತಮ ಗುಣಮಟ್ಟದ ಆಹಾರ ನೀಡುವಂತೆ ಸೂಚಿಸಿದರು. ಜೊತೆಗೆ ಸ್ಯಾಂಡ್ ವೆಜ್ ಕೂಡ ಮಾಡಿ ವಿದ್ಯಾರ್ಥಿಗಳಿಗೆ ನೀಡಲು ಸಲಹೆ ಮಾಡಿದರು.
ಇಂದಿನ ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿಯ ಸಭೆಯ ವೇಳೆ ಸದಸ್ಯರಾದಂತ ಚೇತನ್ ರಾಜ್ ಕಣ್ಣೂರು, ಚಿದಂಬರ್, ಪ್ರಕಾಶ್, ಶ್ರೀಧರ್ ಈಳಿ, ಗಣಪತಿ ಮಂಡಗಳಲೆ, ಷಣ್ಮುಖ ಸೂರನಗದ್ದೆ, ಹನೀಸ್ ಖಾನ್, ಕೃಷ್ಣ, ಸದ್ಗುರು ಸಂತೋಷ್, ಯಶೋಧಮ್ಮ, ಇಂಜಿನಿಯರ್ ರಕ್ಷಿತ್, ವಿದ್ಯಾರ್ಥಿ ಪ್ರತಿನಿಥಿ ವೈಷ್ಣವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ
BREAKING: ಸಚಿವ ಜಮೀರ್ ಅಹ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ: ಪುನೀತ್ ಕೆರೆಹಳ್ಳಿ ವಿರುದ್ಧ ‘FIR’ ದಾಖಲು
BREAKING: ರಾಜ್ಯದ 3 ಕ್ಷೇತ್ರಗಳ ಉಪ ಚುನಾವಣೆಗೆ ತೆರೆ: ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ ಗೊತ್ತಾ? ಇಲ್ಲಿದೆ ವಿವರ
BIG NEWS: ರಾಜ್ಯ ಸರ್ಕಾರದಿಂದ ಒಳಮೀಸಲಾತಿ ಜಾರಿಗೆ ನಾಗಮೋಹನ್ ನೇತೃತ್ವದಲ್ಲಿ ಆಯೋಗ ರಚಿಸಿ ಅಧಿಕೃತ ಆದೇಶ