ಮಂಡ್ಯ : ಖಾಸಗಿ ಫೈನಾನ್ಸ್ ಗಳಲ್ಲಿ ಚಿನ್ನ ಅಡ ಇಡುವವರೇ ಹುಷಾರ್. ಮಂಡ್ಯದಲ್ಲಿ ಚಿನ್ನ ಅಡಮಾನ ವಂಚನೆ ಪ್ರಕರಣ ಬಯಲಿಗೆ ಬಂದಿದೆ.
ಹೌದು, ಚಿನ್ನ ಫೈನಾನ್ಸ್ ನಲ್ಲಿ 70 ಕ್ಕೂ ಹೆಚ್ಚು ಗ್ರಾಹಕರ 3 ಕೋಟಿಯ ಚಿನ್ನಕ್ಕೆ ಕನ್ನ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.ಕಡಿಮೆ ಬಡ್ಡಿ ಆಸೆ ತೋರಿಸಿ ಅನಘ ಗೋಲ್ಡ್ ಕಂಪನಿ ವಂಚಿಸಿದೆ. ಕಡಿಮೆ ಬಡ್ಡಿ ಆಸೆ ತೋರಿಸಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆನಘ ಗೊಲ್ಡ್ ಕಂಪನಿ ಮಾಲೀಕ ಪ್ರವೀಣ್, ಪತ್ನಿ ಮಂಜುಳ, ಸಿಬ್ಬಂದಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ 70 ಕ್ಕೂಅಧಿಕ ಜನರು ವಂಚನೆಗೆ ಒಳಗಾಗಿದ್ದು, ಮೂರು ಕೋಟಿ ರೂ ಮೌಲ್ಯದ 3 ಕೆಜಿ ಚಿನ್ನಾಭರಣ ವಂಚನೆ ಎಸಗಿದ್ದಾರೆ. ಇದೀಗ ಈ ಮೂವರನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿಗಳಿಂದ 500 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.