ನವದೆಹಲಿ : ಇತ್ತೀಚಿಗೆ ಸೈಬರ್ ಮುಂಚೆನೇ ಡಿಜಿಟಲ್ ಬಂಧನ ಸೇರಿದಂತೆ ಹಲವು ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಇಷ್ಟು ದಿನ ವೆಡ್ಡಿಂಗ್ ಸೈಬರ್ ಕ್ರೈಂ, ಮ್ಯಾಟ್ರಿಮೋನಿಯಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಪ್ರಕರಣಗಳನ್ನು ನೋಡಿದ್ದೇವೆ ಕೇಳಿದ್ದೇವೆ. ವ್ಯಕ್ತಿ ಸತ್ತ ಮೇಲೂ ಅಂತ್ಯಸಂಸ್ಕಾರದಲ್ಲಿ ಸೈಬರ್ ಕ್ರೈಂ ವಂಚಕರು ಮೋಸ ಎಸಗುವ ಹೊಸ ಹಾದಿಯನ್ನು ಕಂಡುಹಿಡಿದುಕೊಂಡಿದ್ದಾರೆ.
ಹೌದು ಇಂದಿನ ವೇಗದ ಜಗತ್ತಿನಲ್ಲಿ ಜನರಿಗೆ ಊಟ ತಿಂಡಿ ಮಾಡಲು ಸಹ ಸಮಯವಿಲ್ಲ. ಇನ್ನು ಮನೆಯ ಪ್ರೀತಿಪಾತ್ರರು ಸತ್ತಾಗ ಅವರ ಅಂತ್ಯಕ್ರಿಯೆಗೆ ಎಲ್ಲಿ ಟೈಮ್ ಇರುತ್ತೆ ಹೇಳಿ? ಹಾಗಾಗಿ ಅಂತ್ಯ ಸಂಸ್ಕಾರಕ್ಕೂ ಕೂಡ ಇದೀಗ ಕೆಲವು ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳನ್ನೇ ದುರುಪಯೋಗಪಡಿಸಿಕೊಂಡು ಕೆಲವು ಸೈಬರ್ ವಂಚಕರು ಅಂತ್ಯಸಂಸ್ಕಾರ ಹೆಸರಿನಲ್ಲಿ ವಂಚನೆ ಎಸಗುವ ಹೊಸ ದಾರಿಯನ್ನು ಕಂಡುಕೊಂಡಿವೆ.
ಈ ರೀತಿ ಅಂತ್ಯಸಂಸ್ಕಾರ ನಡೆಸುವ ಹಲವು ಎಜೆನ್ಸಿಗಳ ಜಾಹೀರಾತು, ನಂಬರ್ ಸುಲಭವಾಗಿ ಸಿಗುತ್ತದೆ. ಹೀಗೆ ನೀವು ಆಪ್ತರನ್ನು ಕಳೆದುಕೊಂಡ ನೋವಿನಲ್ಲಿ ಎಜೆನ್ಸಿಗೆ ಕರೆ ಮಾಡಿ ಅಂತ್ಯಸಂಸ್ಕಾರಕ್ಕೆ ನಡೆಸಬೇಕು ಎಂದು ಕೇಳಿಕೊಂಡರೆ ತಕ್ಷಣವೇ ನಿಮ್ಮ ಮಾಹಿತಿ ಪಡೆದು ಲಿಂಕ್ ಕಳುಹಿಸಿದ್ದಾರೆ. ಈ ಲಿಂಕ್‌ನಲ್ಲಿ ನೀವು ನಿಮ್ಮ ಹೆಸರು ವಿಳಾಸ, ಮೃತಪಟ್ಟವರ ಹೆಸರು, ಧರ್ಮ, ಗೋತ್ರ, ಅಂತ್ಯಸಂಸ್ಕಾರ ಸಂಪ್ರದಾಯದ ಬಗ್ಗೆ ಮಾಹಿತಿ ನೀಡಬೇಕು.
ಬಳಿಕ 5,000 ರೂಪಾಯಿ ಅಥವಾ ಅಡ್ವಾನ್ಸ್ ಮೊತ್ತವನ್ನು ಪಾವತಿಸಬೇಕು. ತಕ್ಷಣವೇ ನಿಮಗೆ ಮೆಸೇಜ್ ಬರಲಿದೆ. ಅಂತ್ಯಸಂಸ್ಕಾರ ನಡೆಸುವ ಪೂಜಾರಿ ಹೆಸರು, ಘಳಿಗೆ ಸೇರಿದಂತೆ ಎಲ್ಲದರ ಕರ್ಮಫೇಶನ್ ಮೆಸೇಜ್ ಬರಲಿದೆ. ಇದೇ ವೇಳೆ ಒಟಿಪಿಯೊಂದು ಬರಲಿದೆ. ಈ ಒಟಿಪಿಯನ್ನು ಎಜೆನ್ಸಿ ಮಂದಿ ಕೇಳುತ್ತಾರೆ. ಇದಕ್ಕೆ ಹಲವು ಕಾರಣಗಳನ್ನು ನೀಡುತ್ತಾರೆ.
ನೀವು ಎಲ್ಲವೂ ಅಚ್ಚುಕಟ್ಟಾಗಿ ಆಗಲಿ ಎಂದ ನೋವಿನಿಂದಲೇ ಒಟಿಪಿ ಹಂಚಿಕೊಂಡರೆ ಕತೆ ಮುಗೀತು. ನಿಮ್ಮ ಖಾತೆಯಲ್ಲಿರುವ ಎಲ್ಲಾ ಹಣ ಮಾಯವಾಗಲಿದೆ. ಇಲ್ಲಿ ಮತ್ತೊಂದು ಎಚ್ಚರವಹಿಸಬೇಕು. ನಿಮ್ಮಲ್ಲಿ ಒಟಿಪಿ ಕೇಳದೆಯೂ ವಂಚನೆ ನಡೆಯುತ್ತದೆ. ವಂಚಕರು ಹಂಚಿಕೊಂಡ ಲಿಂಕ್ ಕ್ಲಿಕ್ ಮಾಡಿದರೆ ಸಾಕು ಮಾಲ್‌ವೇರ್ ವೈರಸ್ ನಿಮ್ಮ ಫೋನ್ ಸೇರಿಕೊಳ್ಳಲಿದೆ. ಇದರಿಂದ ನಿಮ್ಮ ಫೋನ್‌ನ ವೈಯುಕ್ತಿಕ ಮಾಹಿತಿ ಸೋರಿಕೆ ಮಾಡಿ ಬಳಿಕ ಬ್ಯಾಂಕ್ ಖಾತೆಯಿಂದ ಹಣ ಎಗರಿಸುತ್ತಾರೆ.