ದಾವಣಗೆರೆ : ಸರ್ಕಾರಿ ಅಧಿಕಾರಿ ಒಬ್ಬರ ಮಾತನ್ನು ನಂಬಿ ಹಣ ಡಬಲ್ ಆಗುತ್ತೆ ಎಂದು ಅಂತಾರಾಷ್ಟ್ರೀಯ ಗೋಲ್ಡ್ ಮ್ಯಾನ್ ಸ್ಮಾಚ್ ಕಂಪನಿಯಲ್ಲಿ ಕೋಟ್ಯಾಂತರ ರೂಪಾಯಿ ಹಣ ಹೂಡಿಕೆ ಮಾಡಿದ ವಿದ್ಯಾಸಂಸ್ಥೆಯ ಮುಖ್ಯಸ್ಥೆಯೊಬ್ಬರು ಇದೀಗ 10 ಕೋಟಿಗೂ ಅಧಿಕ ಹಣ ಕಳೆದುಕೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಹೌದು ದಾವಣಗೆರೆಯ ಚೇತನ ವಿದ್ಯಾ ಸಂಸ್ಥೆಯ ಮುಖ್ಯಸ್ಥೆ ಡಾ. ವಿಜಯಲಕ್ಷ್ಮಿ ವೀರಮಾಚಿನೇನಿ ಅವರಿಗೆ ದಾವಣಗೆರೆ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ಡಿ. ಉಮೇಶ್ ಅಂತಾರಾಷ್ಟ್ರೀಯ ಗೋಲ್ಡ್ ಮ್ಯಾನ್ ಸ್ನಾಚ್ ಕಂಪನಿಯಲ್ಲಿ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದರೆ ಹೆಚ್ಚು ಹೆಚ್ಚು ಲಾಭ ಬರುತ್ತದೆಂದು ಹೇಳಿದ್ದ ಮಾತು ಕೇಳಿ ಹಂತ ಹಂತವಾಗಿ ಜೂ.12 ರಿಂದ ಆ.2 ರ ವರೆಗೆ 10.45 ಕೋಟಿ ರೂಪಾಯಿಗೂ ಹೆಚ್ಚು ಹಣ ತೊಡಗಿಸಿದ್ದರು.
ಹೂಡಿದ್ದ ಹಣ 10.45 ಕೋಟಿಯಾಗಿದ್ದರೂ ಆನ್‌ಲೈನ್‌ನಲ್ಲಿ ಮಾತ್ರ ಅವರಿಗೆ 23 ಕೋಟಿ ರೂಪಾಯಿ ಎಂದು ತೋರಿಸುತ್ತಿತ್ತು. ಹೂಡಿಕೆಯ ಜತೆಗೆ ಹೆಚ್ಚುವರಿಯಾಗಿ ಬಂದ ಹಣವನ್ನು ಸೇರಿದಂತೆ ಎಲ್ಲ ಹಣವನ್ನು ಬಿಡಿಸಿಕೊಳ್ಳಲು ಮುಂದಾ ದಾಗ ಕಂಪನಿಯವರು ಅರ್ಧಕ್ಕೆ ಹಣವನ್ನು ಡ್ರಾ ಮಾಡಿಕೊಳ್ಳಲು ಬರುವುದಿಲ್ಲ. ಮತ್ತಷ್ಟು ಹಣ ಹೂಡಿಕೆ ಮಾಡು ವಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ.
ಯಾವಾಗ ಹೂಡಿಕೆ ಮಾಡಿರುವ ಹಣ ವಾಪಾಸ್ ಪಡೆ ಯಲು ಅವಕಾಶ ಇಲ್ಲ ಎಂಬುದಾಗಿ ಕಂಪನಿಯವರು ಮಾಹಿತಿ ನೀಡಿತ್ತೋ, ಸೈಬರ್ ವಂಚಕರ ವಂಚನೆ ಬಯಲಿಗೆ ಬಂದಿದೆ. ಕೂಡಲೇ ವಿಜಯಲಕ್ಷ್ಮಿ ಅವರು ತಾನು ಸೈಬರ್ ವಂಚಕರಿಗೆ ಮೋಸ ಹೋಗಿದ್ದೇನೆ ಎಂದು ತಿಳಿದು ಬಂದಿದೆ. ತಕ್ಷಣ ಅವರು ಈ ಸಂಬಂಧ ದಾವಣಗೆರೆಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.