Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ನಾಳೆಯಿಂದ ಡಿಜಿಟಲ್ ಪಾವತಿಯಲ್ಲಿ ಮಹತ್ವದ ಬದಲಾವಣೆ : RBI ಇಂದ ಹೊಸ ಮಾರ್ಗಸೂಚಿ ಬಿಡುಗಡೆ

31/03/2026 3:06 PM

Good News ; ಕೇವಲ ಒಂದೇ ಕ್ಲಿಕ್’ನಲ್ಲಿ 15 ರೀತಿಯ ಸರ್ಕಾರಿ ಯೋಜನೆಗಳು, ಲಕ್ಷಾಂತರ ರೂಪಾಯಿ ಸಾಲ ಪಡೆಯುವ ಸುವರ್ಣಾವಕಾಶ!

31/03/2026 3:04 PM

BREAKING : ಬೆಂಗಳೂರಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ : ಪ್ರಯಾಣಿಕರು ಪಾರು!

31/03/2026 2:59 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : ರಾಜ್ಯಾದ್ಯಂತ `ಬಿಸಿಲಿನ ತಾಪಮಾನ’ ಹೆಚ್ಚಳ : ಸಾರ್ವಜನಿಕರು ಏನು ಮಾಡಬಾರದು.? ಏನು ಮಾಡಬೇಕು ತಿಳಿಯಿರಿ
KARNATAKA

ALERT : ರಾಜ್ಯಾದ್ಯಂತ `ಬಿಸಿಲಿನ ತಾಪಮಾನ’ ಹೆಚ್ಚಳ : ಸಾರ್ವಜನಿಕರು ಏನು ಮಾಡಬಾರದು.? ಏನು ಮಾಡಬೇಕು ತಿಳಿಯಿರಿ

By kannadanewsnow5711/03/2026 11:06 AM

ರಾಜ್ಯದಲ್ಲಿ ಬೇಸಿಗೆಯ ತಾಪಮಾನ ದಿನೇ ದಿನೇ ಏರುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಸಿಲಿನ ಅಲೆ (Heat Wave) ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.

ಬಿಸಿಲಿನ ಬೇಗೆಯಿಂದ ಉಂಟಾಗುವ ಶಾಖಾಘಾತ ಮತ್ತು ಇತರ ಅನಾರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಾರ್ವಜನಿಕರು ಅನುಸರಿಸಬೇಕಾದ ಪ್ರಮುಖ ಕ್ರಮಗಳು ಇಲ್ಲಿವೆ:

ಸಾರ್ವಜನಿಕರು ಏನು ಮಾಡಬೇಕು?

ಉಡುಪು: ಸಡಿಲವಾದ, ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಬೇಕು. ಗಾಳಿಯಾಡುವಂತಹ ಪಾದರಕ್ಷೆಗಳನ್ನು ಬಳಸಿ.

ಪಾನೀಯ: ಬಾಯಾರಿಕೆಯಾಗದಿದ್ದರೂ ಆಗಾಗ್ಗೆ ನೀರು ಕುಡಿಯಬೇಕು. ಉಪ್ಪು-ಸಕ್ಕರೆ ಮಿಶ್ರಿತ ನೀರು, ಹಣ್ಣಿನ ರಸ, ಮಜ್ಜಿಗೆ, ಎಳೆನೀರು ಮತ್ತು ಪಾನಕಗಳ ಸೇವನೆ ಉತ್ತಮ.

ಆಹಾರ: ಮನೆಯಲ್ಲಿ ತಯಾರಿಸಿದ ತಾಜಾ, ಸಾತ್ವಿಕ ಮತ್ತು ಮಸಾಲೆ ರಹಿತ ಆಹಾರಕ್ಕೆ ಆದ್ಯತೆ ನೀಡಿ.

ಶುಚಿತ್ವ: ಆಹಾರ ಸೇವಿಸುವ ಮೊದಲು 45 ಸೆಕೆಂಡುಗಳ ಕಾಲ ಸಾಬೂನಿನಿಂದ ಕೈ ತೊಳೆಯಬೇಕು. ಕುಡಿಯಲು ಶುದ್ಧೀಕರಿಸಿದ ನೀರನ್ನೇ ಬಳಸಿ.

ಪ್ರಥಮ ಚಿಕಿತ್ಸೆ: ಯಾರಾದರೂ ಬಿಸಿಲಿನಿಂದ ಸುಸ್ತಾಗಿ ಬಿದ್ದರೆ, ತಕ್ಷಣ ಅವರನ್ನು ನೆರಳಿನ ಜಾಗಕ್ಕೆ ಕರೆದೊಯ್ದು, ಕಾಲುಗಳನ್ನು ಮೇಲಕ್ಕೆತ್ತಿ ಮಲಗಿಸಿ. ಒದ್ದೆ ಬಟ್ಟೆಯಿಂದ ದೇಹವನ್ನು ಒರೆಸಿ.

ಏನು ಮಾಡಬಾರದು?
ಬಟ್ಟೆ: ಬಿಗಿಯಾದ ಅಥವಾ ಸಿಂಥೆಟಿಕ್ ಬಟ್ಟೆಗಳನ್ನು ಧರಿಸಬೇಡಿ.

ಪಾನೀಯ: ಕಾಫಿ, ಟೀ, ಮದ್ಯಪಾನ ಮತ್ತು ಅತಿಯಾದ ಸಕ್ಕರೆಯುಕ್ತ ತಂಪು ಪಾನೀಯಗಳನ್ನು (Soda/Carbonated drinks) ವರ್ಜಿಸಿ.

ಆಹಾರ: ರಸ್ತೆ ಬದಿಯ ತೆರೆದಿಟ್ಟ ಆಹಾರ ಪದಾರ್ಥಗಳು ಹಾಗೂ ಕತ್ತರಿಸಿದ ಹಣ್ಣುಗಳನ್ನು ತಿನ್ನಬೇಡಿ. ಮಾಂಸಾಹಾರ ಮತ್ತು ಅತಿಯಾದ ಮಸಾಲೆ ಪದಾರ್ಥಗಳಿಂದ ದೂರವಿರಿ.

ತಪ್ಪು ಕ್ರಮ: ಬಿಸಿಲಿನಿಂದ ಸುಸ್ತಾದಾಗ ಅತಿಯಾದ ತಣ್ಣೀರು ಅಥವಾ ಐಸ್ ನೀರಿನಿಂದ ದೇಹ ಒರೆಸಬೇಡಿ. ಇದರಿಂದ ರಕ್ತನಾಳಗಳು ಸಂಕುಚಿತಗೊಂಡು ಆಂತರಿಕ ಅಂಗಗಳಿಗೆ ಹಾನಿಯಾಗಬಹುದು.

ನೀರು: ಕೆರೆ, ಕುಂಟೆಗಳ ನೀರನ್ನು ನೇರವಾಗಿ ಕುಡಿಯಬೇಡಿ ಮತ್ತು ಬಯಲು ಪ್ರದೇಶದಲ್ಲಿ ಮಲ-ಮೂತ್ರ ವಿಸರ್ಜನೆ ಮಾಡಬೇಡಿ.

ಶಾಖಾಘಾತದ ಲಕ್ಷಣಗಳು ಮತ್ತು ತುರ್ತು ಚಿಕಿತ್ಸೆ

ವ್ಯಕ್ತಿಯು ಅಸಂಗತವಾಗಿ ಮಾತನಾಡುವುದು (ತೊದಲುವುದು), ಪ್ರಜ್ಞೆ ತಪ್ಪುವುದು, ಚರ್ಮ ಕೆಂಪಾಗುವುದು, ಅತಿಯಾದ ದೇಹದ ಉಷ್ಣತೆ ಮತ್ತು ಉಸಿರಾಟದ ತೊಂದರೆ ಕಂಡಬಂದರೆ ಅದು ಶಾಖಾಘಾತದ (Heat Stroke) ಲಕ್ಷಣಗಳಾಗಿವೆ.

ಗಮನಿಸಿ: ಪರಿಸ್ಥಿತಿ ಗಂಭೀರವಾಗಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಅಥವಾ ಉಚಿತ ಆರೋಗ್ಯ ಸಹಾಯವಾಣಿ 104 ಕ್ಕೆ ಕರೆ ಮಾಡಿ ತುರ್ತು ನೆರವು ಪಡೆಯಿರಿ.

ALERT: Rising temperatures across the state: What should the public not do? Know what to do
Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ : ಪ್ರಯಾಣಿಕರು ಪಾರು!

31/03/2026 2:59 PM1 Min Read

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಮದ್ವೆ ಮಾಡಿಲ್ಲ ಎಂದು ಕಲ್ಲು ಎತ್ತಿ ಹಾಕಿ ತಾಯಿಯ ಹತ್ಯೆಗೆ ಯತ್ನಿಸಿದ ಪುತ್ರ!

31/03/2026 2:42 PM2 Mins Read

BREAKING : ಬೆಂಗಳೂರಲ್ಲಿ ಪತಿಯ ಆತ್ಮಹತ್ಯೆ, ಬಳಿಕ 17ನೇ ಫ್ಲೋರ್ ನಿಂದ ಜಿಗಿದು ಪತ್ನಿಯು ಸೂಸೈಡ್!

31/03/2026 2:32 PM1 Min Read
Recent News

BREAKING : ನಾಳೆಯಿಂದ ಡಿಜಿಟಲ್ ಪಾವತಿಯಲ್ಲಿ ಮಹತ್ವದ ಬದಲಾವಣೆ : RBI ಇಂದ ಹೊಸ ಮಾರ್ಗಸೂಚಿ ಬಿಡುಗಡೆ

31/03/2026 3:06 PM

Good News ; ಕೇವಲ ಒಂದೇ ಕ್ಲಿಕ್’ನಲ್ಲಿ 15 ರೀತಿಯ ಸರ್ಕಾರಿ ಯೋಜನೆಗಳು, ಲಕ್ಷಾಂತರ ರೂಪಾಯಿ ಸಾಲ ಪಡೆಯುವ ಸುವರ್ಣಾವಕಾಶ!

31/03/2026 3:04 PM

BREAKING : ಬೆಂಗಳೂರಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ : ಪ್ರಯಾಣಿಕರು ಪಾರು!

31/03/2026 2:59 PM

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಮದ್ವೆ ಮಾಡಿಲ್ಲ ಎಂದು ಕಲ್ಲು ಎತ್ತಿ ಹಾಕಿ ತಾಯಿಯ ಹತ್ಯೆಗೆ ಯತ್ನಿಸಿದ ಪುತ್ರ!

31/03/2026 2:42 PM
State News
KARNATAKA

BREAKING : ಬೆಂಗಳೂರಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ : ಪ್ರಯಾಣಿಕರು ಪಾರು!

By kannadanewsnow0531/03/2026 2:59 PM KARNATAKA 1 Min Read

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹೊರವಲಯದ ಹೊಸಕೋಟೆ-ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ…

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಮದ್ವೆ ಮಾಡಿಲ್ಲ ಎಂದು ಕಲ್ಲು ಎತ್ತಿ ಹಾಕಿ ತಾಯಿಯ ಹತ್ಯೆಗೆ ಯತ್ನಿಸಿದ ಪುತ್ರ!

31/03/2026 2:42 PM

BREAKING : ಬೆಂಗಳೂರಲ್ಲಿ ಪತಿಯ ಆತ್ಮಹತ್ಯೆ, ಬಳಿಕ 17ನೇ ಫ್ಲೋರ್ ನಿಂದ ಜಿಗಿದು ಪತ್ನಿಯು ಸೂಸೈಡ್!

31/03/2026 2:32 PM

BIG NEWS : ಬೀದರ್‌ನಲ್ಲಿ ಘೋರ ದುರಂತ : ಸಿಡಿಲು ಬಡಿದು ಯುವರೈತ ಸ್ಥಳದಲ್ಲೇ ಸಾವು!

31/03/2026 2:19 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.