ಬೆಂಗಳೂರು : ಡಿಜಿಟಲ್ ಅರೆಸ್ಟ್ ಎಂದರೆ ವಂಚಕರು ಸರ್ಕಾರಿ ಅಧಿಕಾರಿ / ಪೊಲೀಸರ ಸೋಗಿನಲ್ಲಿ ವಾಟ್ಸಾಪ್ ಕರೆ ಮಾಡಿ, ಅಪರಾಧ ಪ್ರಕರಣದಲ್ಲಿ ಬಂಧಿಸುವುದಾಗಿ ಬೆದರಿಸಿ ಹಣ ವಸೂಲಿ ಮಾಡುವುದಾಗಿದೆ.
ಡಿಜಿಟಲ್ ಅರೆಸ್ಟ್ ಹೇಗೆ ಸಂಭವಿಸುತ್ತದೆ?
• ನಿಮ್ಮ ಹೆಸರಿನಲ್ಲಿರುವ ಪಾರ್ಸೆಲ್‌ನಲ್ಲಿ ಕಾನೂನು ಬಾಹಿರ ವಸ್ತುಗಳು ಕಂಡುಬಂದಿದೆ ಅಥವಾ ನೀವು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೀರಿ ಎಂದು ಆರೋಪಿಸಿ ವಂಚಕರು ನಿಮ್ಮನ್ನು ಮೋಸಗೊಳಿಸಲು ಫೋನ್ ಕರೆಗಳನ್ನು ಮಾಡುತ್ತಾರೆ.
• ಪೊಲೀಸ್ ಅಧಿಕಾರಿಗಳಂತೆ ವೇಷ ಧರಿಸಿ, ನಿಮ್ಮನ್ನು ವಿಡಿಯೋ ಕಾಲ್‌ನಲ್ಲಿಯೇ ಇರುವಂತೆ ಒತ್ತಾಯಿಸುತ್ತಾರೆ.
• ನಿಮ್ಮನ್ನು ಬೆದರಿಸಿ, ಹಣ ಸುಲಿಗೆ ಮಾಡುತ್ತಾರೆ.
• ವಂಚಕರು ಆಂಗ್ಲಭಾಷೆಯಲ್ಲಿ ಸಂವಹಿಸಿ ಅಧಿಕಾರಿಗಳಂತೆಯೇ ಸೌಜನ್ಯದಿಂದ ಮಾತನಾಡುತ್ತಾರೆ.
• ವಿಡಿಯೋ ಕರೆ ಮಾಡಿ ನಕಲಿ ಗುರುತಿನ ಚೀಟಿಗಳನ್ನು ತೋರಿಸಿ ಭಯಪಡಿಸುತ್ತಾರೆ.
• ಅಪರಿಚಿತ ಕರೆಗಳನ್ನು ಸ್ವೀಕರಿಸಬೇಡಿ. ಕರೆ ಬಂದ ನಂಬರ್ ಅನ್ನು ಬ್ಲಾಕ್ ಮತ್ತು ರಿಪೋರ್ಟ್ ಮಾಡಿ.
• ಹಣ ವರ್ಗಾವಣೆ ವೇಳೆ ಎಚ್ಚರದಿಂದಿರಿ, ಸೈಬರ್ ರಕ್ಷಣಾ ಕ್ರಮ ಅನುಸರಿಸಿ
• ನಿಮ್ಮ ವೈಯಕ್ತಿಕ ಬ್ಯಾಂಕ್ ಮಾಹಿತಿಯನ್ನು ನೀಡಬೇಡಿ.
• ನೈಜತೆ ಪರಿಶೀಲಿಸಲು ಹತ್ತಿರದ ಪೊಲೀಸ್ ಠಾಣೆ ಸಂಪರ್ಕಿಸಿ.
• ಹಿಂಭಾಗದಲ್ಲಿ ಸರ್ಕಾರಿ ತನಿಖಾ ಸಂಸ್ಥೆ, ಸೈಬರ್ ಕ್ರೈಂ, ಪೊಲೀಸ್ ಇಲಾಖೆಯ ಲೋಗೋ ಬಳಸುತ್ತಾರೆ.
• ನ್ಯಾಯಾಲಯ ಕೊಠಡಿ, ಪೊಲೀಸ್ ಠಾಣೆಯ ವಾತಾವರಣವನ್ನು ಸೃಷ್ಟಿಸುತ್ತಾರೆ.
• ಹಿರಿಯ ನಾಗರಿಕರು, ನಿವೃತ್ತರು, ಉನ್ನತ ಶಿಕ್ಷಣ ಪಡೆದವರನ್ನು ಗುರಿಯಾಗಿಸಲಾಗುತ್ತದೆ.
• ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅದಕ್ಕೆ ಪೂರಕ ದಾಖಲೆಗಳನ್ನು ತೋರಿಸುತ್ತಾರೆ. ನಂತರ ಹಣಕ್ಕಾಗಿ ಬೇಡಿಕೆ ಇಡುತ್ತಾರೆ.
• ಡಿಜಿಟಲ್ ಅರೆಸ್ಟ್ ಬಗ್ಗೆ ಜಾಗೃತರಾಗಿರಿ.
• ಯಾವುದೇ ಕಾರಣಕ್ಕೂ ಪೊಲೀಸ್ ಅಧಿಕಾರಿಗಳು, ನ್ಯಾಯಾಧೀಶರು ವಿಡಿಯೋ ಕರೆ ಮಾಡುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ.
• ಯಾರಾದರೂ ಪೊಲೀಸರ ಸೋಗಿನಲ್ಲಿ ವಿಡಿಯೋ ಕರೆ ಮಾಡಿದ್ದಲ್ಲಿ ತಕ್ಷಣವೇ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.