Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರೈತರಿಗೆ ಗುಡ್ ನ್ಯೂಸ್ : ಇಂದಿನಿಂದ ಎಡದಂಡೆ, ಜ.8ರಿಂದ ಬಲದಂಡೆ ನಾಲೆಗೆ ಭದ್ರಾ ನೀರು ಹರಿಸಲು ನಿರ್ಣಯ

03/01/2026 5:47 AM

BIG NEWS `ಗೃಹಲಕ್ಷ್ಮೀ’ ಸೇರಿ ವಿವಿಧ ಯೋಜನೆಗಳಿಗೆ 3 ಕಂತಿನ ಹಣ ಬಿಡುಗಡೆ : ಸರ್ಕಾರ ಮಹತ್ವದ ಆದೇಶ

03/01/2026 5:40 AM

ALERT : ಪೋಷಕರೇ ಎಚ್ಚರ : ನಿಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನ ಕೊಟ್ರೆ 25,000 ರೂ. ದಂಡ ಫಿಕ್ಸ್.!

03/01/2026 5:40 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : ಪೋಷಕರೇ ಎಚ್ಚರ : ನಿಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನ ಕೊಟ್ರೆ 25,000 ರೂ. ದಂಡ ಫಿಕ್ಸ್.!
KARNATAKA

ALERT : ಪೋಷಕರೇ ಎಚ್ಚರ : ನಿಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನ ಕೊಟ್ರೆ 25,000 ರೂ. ದಂಡ ಫಿಕ್ಸ್.!

By kannadanewsnow5703/01/2026 5:40 AM

ದಿನನಿತ್ಯ ಬಳಸುವ ರಸ್ತೆಯಲ್ಲಿ ಪ್ರತಿಯೊಬ್ಬರ ಜೀವನ ಅಡಗಿದ್ದು, ಜಾಗರೂಕರಾಗಿ ವಾಹನ ಚಲಾಯಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ಹೇಳಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಹಯೋಗದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 37 ನೇ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಸ್ತೆ ಅಪಘಾತಗಳು ಅಪಾಯಕಾರಿಯಾಗಿದ್ದು, ಸಾರ್ವಜನಿಕ ರಸ್ತೆಗಳಲ್ಲಿ ಸಂಚರಿಸುವ ಪ್ರತಿಯೊಬ್ಬರೂ ರಸ್ತೆ ನಿಯಮಗಳನ್ನು ಪಾಲಿಸಬೇಕು. ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಅರಿವು ಮೂಡಿಸಲು ಜನವರಿ ಮಾಸಾದ್ಯಂತ ಜಿಲ್ಲೆಯಲ್ಲಿ ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ರಸ್ತೆ ಅಪಘಾತಗಳಲ್ಲಿ ಪ್ರತಿವರ್ಷ ಸಾವನ್ನಪ್ಪುವವರ ಸಂಖ್ಯೆ ಮೊದಲನೇ ಮತ್ತು ಎರಡನೇ ಮಹಾಯುದ್ಧದಲ್ಲಿ ಸಾವನ್ನಪ್ಪಿದ್ದ ಸಂಖ್ಯೆಗೆ ಹೋಲಿಸಬಹುದಾಗಿದೆ. 2025ರ ಅಂಕಿ-ಸAಖ್ಯೆ ಪ್ರಕಾರ ದೇಶದಲ್ಲಿ ಸುಮಾರು 4.08 ಲಕ್ಷ ರಸ್ತೆ ಅಪಘಾತ ಘಟನೆಗಳು ಸಂಭವಿಸಿದ್ದು, 1.72 ಲಕ್ಷ ಜನ ತಮ್ಮ ಪ್ರಾಣ ತೆತ್ತಿದ್ದಾರೆ. ವಾಹನ ಚಾಲಕರ ವೃತ್ತಿಯು ಸಹ ಗಡಿ ಕಾಯುವ ಯೋಧರಂತೆ ಕಷ್ಟಕರವಾಗಿದೆ ಎಂದರು.

ರಸ್ತೆ ಪಾದಾಚಾರಿಗಳು ಸಹ ಜಾಗ್ರತೆಯಿಂದ ರಸ್ತೆ ಸಂಚಾರ ನಿಮಯಗಳನ್ನು ಪಾಲಿಸಬೇಕಿದೆ. ಅವಘಡ ಯಾವ ರೀತಿಯಲ್ಲಾದರೂ ಸಂಭವಿಸಬಹುದಾಗಿದೆ. ಹಾಗಾಗಿ ಪ್ರಾದೇಶಿಕ ಸಾರಿಗೆ ಇಲಾಖೆ, ಪೊಲೀಸ್, ಶಿಕ್ಷಣ ಇಲಾಖೆಗಳನ್ನೊಳಗೊಂಡAತೆ ರಸ್ತೆ ಸುರಕ್ಷತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.

*ಮೆಗಾ ಡ್ರೆಂವ್ ಆಯೋಜಿಸಿ:*

ವಾಹನಗಳಿಗೆ ವಿಮೆ ಬಹುಮುಖ್ಯವಾಗಿದ್ದು, ಯಾವುದೇ ರೀತಿಯ ಅಪಘಾತ ಸಂಭವಿಸಿದಲ್ಲಿ, ವಿಮೆ ಮೂಲಕ ನೆರವು ಪಡೆಯಬಹುದಾಗಿದೆ. ಇದರಿಂದ ಅವರ ಕುಟುಂಬದ ಅವಲಂಬಿತರಿಗೆ ಸಹಾಯವಾಗಲಿದೆ. ಹಾಗಾಗಿ ಸಾರಿಗೆ ಇಲಾಖೆಯು ಹಳ್ಳಿಗಳಲ್ಲಿರುವ ವಾಹನಗಳ ಮಾಹಿತಿ ಸಂಗ್ರಹಿಸಿ ಅವರಿಗೆ ಜಾಗೃತಿ ಮೂಡಿಸುವ ಮೂಲಕ ವಿಮೆ ವಿತರಣೆ ಮಾಡಲು ಮೆಗಾ ಡ್ರೆಂವ್ ಆಯೋಜನೆ ಮಾಡಬೇಕು ಎಂದು ಸಲಹೆ ನೀಡಿದರು.

18 ವರ್ಷದೊಳಗಿನ ಮಕ್ಕಳಿಗೆ ವಾಹನ ಚಲಾಯಿಸಲು ನೀಡಿದಲ್ಲಿ ಮಕ್ಕಳ ಪೋಷಕರ ವಿರುದ್ಧ ಪ್ರಕರಣ ಮತ್ತು 25,000 ಸಾವಿರ ದಂಡ ವಿಧಿಸಲಾಗುವುದು ಮತ್ತು ಚಾಲನಾ ಪರವಾನಿಗೆ ಇಲ್ಲದೇ ವಾಹನ ಚಲಾಯಿಸುವಂತಿಲ್ಲ. ಈ ಕುರಿತು ಪ್ರತಿಯೊಬ್ಬರೂ ಎಚ್ಚರವಹಿಸಬೇಕು ಎಂದು ತಿಳಿಸಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಅಧೀಕ್ಷಕ ಅಡಿವೇಶ ಗೌಡ ಅವರು ಮಾತನಾಡಿ, ಸಾರಿಗೆಯು ದೇಶದ ಆರ್ಥಿಕ ಅಭಿವೃದ್ಧಿಗೆ ಕೀಲಿ ಕೈ. ಯಾವ ದೇಶ ಉತ್ತಮ ಸಾರಿಗೆ ವ್ಯವಸ್ಥೆ ಹೊಂದಿರುತ್ತದೆಯೋ ಆ ದೇಶ ಅಭಿವೃದ್ಧಿ ಹೊಂದಲಿದೆ. ಅದರ ಜೊತೆಗೆ ಸುರಕ್ಷತೆಯು ಅಷ್ಟೇ ಮುಖ್ಯವಾಗಿರುತ್ತದೆ. ವಾಯು, ಜಲ ಸಾರಿಗೆಗಳಂತೆ ಭೂ ಸಾರಿಗೆಯಲ್ಲಿ ರಸ್ತೆ ಬಳಸುವವರ ಸಂಖ್ಯೆ ಹೆಚ್ಚಾಗಿದ್ದು, ರಸ್ತೆ ನಿಮಯ, ಸಂಚಾರಿ ಚಿಹ್ನೆಗಳನ್ನು ಅರಿತುಕೊಳ್ಳುವುದು ಅತ್ಯಗತ್ಯವಾಗಿದೆ ಎಂದು

ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಬಿ.ಶಫೀವುಲ್ಲಾ ಅವರು ಮಾತನಾಡಿ, ವಾಹನ ಚಾಲನೆ ವೇಳೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಬೆಲ್ಟ್ ಕಟ್ಟಿಕೊಳ್ಳಬೇಕು. ಚಾಲನೆ ವೇಳೆ ಮೊಬೈಲ್ ಫೋನ್ ಬಳಸಬಾರದು. ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು ಎಂದು ತಿಳಿಸಿದ ಅವರು, ಕೆಲವು ಮುಖ್ಯ ರಸ್ತೆ ಸಂಚಾರ ನಿಯಮಗಳನ್ನು ಕೈ ಸನ್ನೆಯ ಮೂಲಕ ಸಾರ್ವಜನಿಕರಿಗೆ ತಿಳಿಸಿದರು.

ಬಳ್ಳಾರಿ ಪ್ರಭಾರಿ ಪ್ರಾದೇಶಿಕ ಸಾರಿಗೆ ಅಧಿಕಾರಿ ನಿಜಾಮುದ್ದೀನ್ ಶರೀಫ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕರು ದುರಸ್ಥಿ ವಾಹನಗಳನ್ನು ಬಳಸಬಾರದು. ಇದರಿಂದ ವಾಯುಮಾಲಿನ್ಯ ತಡೆಗಟ್ಟಬಹುದಾಗಿದೆ. ನಿಯಮಿತವಾಗಿ ವಾಹನಗಳ ತಪಾಸಣೆ ಕೈಗೊಂಡು ಬಳಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತಾ ಕ್ರಮಗಳ ಕುರಿತ ಮಾಹಿತಿ ಭಿತ್ತಿಪತ್ರ ಗಣ್ಯರು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಸಾರಿಗೆ ವಿಭಾಗದ ಅಧೀಕ್ಷಕ ಗೋವಿಂದಪ್ಪ, ಹಿರಿಯ ಮೋಟಾರು ವಾಹನ ನಿರೀಕ್ಷಕ ಬಸವರಾಜ ಬೀರದಾರ ಸೇರಿದಂತೆ ಸಾರಿಗೆ ಇಲಾಖೆಯ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ALERT: Parents beware: If you rent a vehicle to your minor children you will be fined Rs. 25000
Share. Facebook Twitter LinkedIn WhatsApp Email

Related Posts

ರೈತರಿಗೆ ಗುಡ್ ನ್ಯೂಸ್ : ಇಂದಿನಿಂದ ಎಡದಂಡೆ, ಜ.8ರಿಂದ ಬಲದಂಡೆ ನಾಲೆಗೆ ಭದ್ರಾ ನೀರು ಹರಿಸಲು ನಿರ್ಣಯ

03/01/2026 5:47 AM2 Mins Read

BIG NEWS `ಗೃಹಲಕ್ಷ್ಮೀ’ ಸೇರಿ ವಿವಿಧ ಯೋಜನೆಗಳಿಗೆ 3 ಕಂತಿನ ಹಣ ಬಿಡುಗಡೆ : ಸರ್ಕಾರ ಮಹತ್ವದ ಆದೇಶ

03/01/2026 5:40 AM3 Mins Read

BIG NEWS : ಅನಧಿಕೃತವಾಗಿ `ರಜೆ’ ಹಾಕುವುದು ಉದ್ಯೋಗಿಯ ಹಕ್ಕಲ್ಲ : ಹೈಕೋರ್ಟ್ ಮಹತ್ವದ ತೀರ್ಪು.!

03/01/2026 5:40 AM1 Min Read
Recent News

ರೈತರಿಗೆ ಗುಡ್ ನ್ಯೂಸ್ : ಇಂದಿನಿಂದ ಎಡದಂಡೆ, ಜ.8ರಿಂದ ಬಲದಂಡೆ ನಾಲೆಗೆ ಭದ್ರಾ ನೀರು ಹರಿಸಲು ನಿರ್ಣಯ

03/01/2026 5:47 AM

BIG NEWS `ಗೃಹಲಕ್ಷ್ಮೀ’ ಸೇರಿ ವಿವಿಧ ಯೋಜನೆಗಳಿಗೆ 3 ಕಂತಿನ ಹಣ ಬಿಡುಗಡೆ : ಸರ್ಕಾರ ಮಹತ್ವದ ಆದೇಶ

03/01/2026 5:40 AM

ALERT : ಪೋಷಕರೇ ಎಚ್ಚರ : ನಿಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನ ಕೊಟ್ರೆ 25,000 ರೂ. ದಂಡ ಫಿಕ್ಸ್.!

03/01/2026 5:40 AM

BIG NEWS : ಅನಧಿಕೃತವಾಗಿ `ರಜೆ’ ಹಾಕುವುದು ಉದ್ಯೋಗಿಯ ಹಕ್ಕಲ್ಲ : ಹೈಕೋರ್ಟ್ ಮಹತ್ವದ ತೀರ್ಪು.!

03/01/2026 5:40 AM
State News
KARNATAKA

ರೈತರಿಗೆ ಗುಡ್ ನ್ಯೂಸ್ : ಇಂದಿನಿಂದ ಎಡದಂಡೆ, ಜ.8ರಿಂದ ಬಲದಂಡೆ ನಾಲೆಗೆ ಭದ್ರಾ ನೀರು ಹರಿಸಲು ನಿರ್ಣಯ

By kannadanewsnow5703/01/2026 5:47 AM KARNATAKA 2 Mins Read

ಶಿವಮೊಗ್ಗ : ಭದ್ರಾ ಜಲಾಶಯದಲ್ಲಿನ ನೀರನ್ನು ಜನವರಿ 03ರಿಂದ ಎಡದಂಡೆ ನಾಲೆಗೆ ಹಾಗೂ ಜನವರಿ 08ರಿಂದ ಬಲದಂಡೆ ನಾಲೆಗೆ ನಿರಂತರವಾಗಿ…

BIG NEWS `ಗೃಹಲಕ್ಷ್ಮೀ’ ಸೇರಿ ವಿವಿಧ ಯೋಜನೆಗಳಿಗೆ 3 ಕಂತಿನ ಹಣ ಬಿಡುಗಡೆ : ಸರ್ಕಾರ ಮಹತ್ವದ ಆದೇಶ

03/01/2026 5:40 AM

ALERT : ಪೋಷಕರೇ ಎಚ್ಚರ : ನಿಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನ ಕೊಟ್ರೆ 25,000 ರೂ. ದಂಡ ಫಿಕ್ಸ್.!

03/01/2026 5:40 AM

BIG NEWS : ಅನಧಿಕೃತವಾಗಿ `ರಜೆ’ ಹಾಕುವುದು ಉದ್ಯೋಗಿಯ ಹಕ್ಕಲ್ಲ : ಹೈಕೋರ್ಟ್ ಮಹತ್ವದ ತೀರ್ಪು.!

03/01/2026 5:40 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.