ಬಾಗಲಕೋಟೆ : ಕಳೆದ ಕೆಲವು ತಿಂಗಳ ಹಿಂದೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಡ್ಡಿ ಗ್ಯಾಂಗ್ ಅಲರ್ಟ್ ಆಗಿದ್ದು ಇದೀಗ ಮತ್ತೆ ರಾಜ್ಯದಲ್ಲಿ ಚಡ್ಡಿ ಗ್ಯಾಂಗ್ ಅಲರ್ಟ್ ಆಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ರಾತ್ರಿ ಮನೆಯೊಂದಕ್ಕೆ ಕನ್ನ ಹಾಕಲು ಕಳ್ಳರು ಹೊಂಚು ಹಾಕಿದ್ದರು. ಆದರೆ ಅಮೆರಿಕಾದಲ್ಲಿರುವ ಮನೆಯ ಮಾಲಿಕನ ಪುತ್ರಿ ಅಲ್ಲಿಂದಲೇ ಕಳ್ಳರನ್ನು ಓಡಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆದಿದೆ.
ಹೌದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿರುವ ಪಿಡಬ್ಲ್ಯೂಡಿ ನಿವೃತ್ತ ಇಂಜಿನಿಯರ್ ಹನುಮಂತಗೌಡರ ಮನೆಗೆ ಚಡ್ಡಿ ಗ್ಯಾಂಗ್ ಕನ್ನ ಹಾಕಿತ್ತು. ನಾಲ್ವರು ಚಡ್ಡಿ ಗ್ಯಾಂಗ್ ರಾತ್ರಿ ಒಂದು ಗಂಟೆಗೆ ಮನೆಗೆ ಎಂಟ್ರಿ ಕೊಟ್ಟಿದ್ದು ಇದೇ ಮನೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಈ ಒಂದು ಸಿಸಿಟಿವಿ ಕ್ಯಾಮೆರಾ ನನ್ನ ಮೊಬೈಲ್ ಗೆ ಕನೆಕ್ಟ್ ಮಾಡಿಕೊಂಡಿರುವ ಹನುಮಂತಗೌಡರ ಪುತ್ರಿ ಶೃತಿ ಅಮೇರಿಕಾದಲ್ಲಿ ವಾಸಿಸುತ್ತಿದ್ದಾರೆ.
ಅಲ್ಲಿಂದಲೇ ಮನೆಯವರನ್ನು ನೋಡುತ್ತಿದ್ದರು ಆದರೆ ಮಧ್ಯರಾತ್ರಿ ಚಡ್ಡಿ ಗ್ಯಾಂಗ್ ಮನೆ ಒಳಗೆ ನುಗ್ಗಿದ್ದಾರೆ. ಈ ವೇಳೆ ಶೃತಿ ಮೊಬೈಲ್ ಗೆ ಅಲರ್ಟ್ ಮೆಸೇಜ್ ಬಂದಾಗ ಮೊಬೈಲ್ ಓಪನ್ ಮಾಡಿ ನೋಡಿದಾಗ ಚಡ್ಡಿ ಗ್ಯಾಂಗ್ ಮನೆಗೆ ಬಂದಿರುವುದು ಕಂಡು ಬಂದಿದೆ. ಕೂಡಲೆ ಮನೆ ಅವರಿಗೆ ಫೋನ್ ಮಾಡಿದ್ದಾಳೆ, ಕಳ್ಳರು ನುಗ್ಗಿರುವ ಬಗ್ಗೆ ಹೇಳಿದ್ದಾಳೆ. ತಕ್ಷಣ ಹನುಮಂತ ಗೌಡರು ಮನೆಯ ಬಾಗಿಲು ತೆರೆದಾಗ ಚಡ್ಡಿ ಗ್ಯಾಂಗ್ ಅಲ್ಲಿಂದ ಕಾಲ್ಕಿತ್ತಿದ್ದಾರೆ.








