ಲಕ್ನೋ: ಮಕ್ಕಳನ್ನು ಆಟವಾಡಲು ಬಿಡುವ ಮುನ್ನ ಪೋಷಕರು ಈ ಸುದ್ದಿ ಓದಲೇಬೇಕು…ಪೋಷರು ಸ್ವಲ್ಪ ಎಚ್ಚರ ತಪ್ಪಿದರೂ ಇಂತಹ ಅನಾಹುತ ಸಂಭವಿಸುತ್ತದೆ. ಏನಿದು ಘಟನೆ ಅಂತೀರಾ…ಈ ಸುದ್ದಿ ಓದಿ.
ಕುದಿಯುತ್ತಿರುವ ಸಾಂಬಾರಿನ ಪಾತ್ರೆಯೊಳಗೆ ಬಿದ್ದು ಐದು ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ.
ಮೃತ ಬಾಲಕನನ್ನು ಉತ್ತರ ಪ್ರದೇಶ ಕರಣ್ಪುರದ ಸುತಾರಿ ಗ್ರಾಮದ ನಿವಾಸಿ ಪ್ರಶಾಂತ್(5) ಎಂದು ಗುರುತಿಸಲಾಗಿದೆ. . ಮನೆಯಲ್ಲಿ ಮುಂಡನ್ ಕಾರ್ಯದ ಅಂಗವಾಗಿ ಅಡುಗೆ ಮಾಡಲಾಗುತ್ತಿತ್ತು. ಆದರೆ ಬಾಲಕ ಪ್ರಶಾಂತ್ ಬಿಸಿ ಪಾತ್ರೆ ಇಡುತ್ತಿದ್ದ ಜಾಗದಲ್ಲಿ ಆಟವಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಆಕಸ್ಮಿಕವಾಗಿ ಬಾಲಕ ಪಾತ್ರೆಯೊಳಗೆ ಬಿದ್ದಿದ್ದಾನೆ.ನಂತರ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
BIG BREAKING NEWS: ಸ್ಯಾಂಡಲ್ ವುಡ್ ನಟಿ ತಾರಾ ಕಾರು ಚಾಲಕನ ವಿರುದ್ಧ FIR ದಾಖಲು | Actress Tara
ವಿಧಾನಸಭಾ ಚುನಾವಣೆ : ಚಾಮರಾಜನಗರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ ವಾಟಾಳ್ ನಾಗರಾಜ್ |Vatal Nagaraj