ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಕೊರೊನಾ ಜನರಿಗೆ ಒಂದು ಹೊಸ ಪಾಠವನ್ನು ಕಲಿಸಿದೆ. ಈ ನಿಟ್ಟಿನಲ್ಲಿ ಜನರು ಈಗ ತಮ್ಮನ್ನು ತಾವು ನೋಡಿಕೊಳ್ಳುತ್ತಿದ್ದಾರೆ. ಆರೋಗ್ಯದ ಜಾಗೃತಿ ನಮ್ಮಲ್ಲಿ ಹೆಚ್ಚಾಗುತ್ತಿದ್ದು, ಜನತೆ ಆರೋಗ್ಯವನ್ನು ಕಾಪಾಡಿಕೊಳ್ಳಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳನ್ನು ಸೇವನೆ ಮಡುತ್ತಿರುವುದು ಕೂಡ ನಾವು ನೋಡಬಹುದಾಗಿದೆ.

ಈ ನಡುವೆ ಕೆಲವು ಆಹಾರಗಳನ್ನು ಸೇವನೆ ಮಾಡಿದ ಬಳಿಕ ನೀರು ಕುಡಿಯದೇ ಇರುವುದು ಅವುಗಳ ಬಗ್ಗೆ ಇಲ್ಲಿದೆ ವಿವರ
ಮೊಸರು: ಸದ್ಯ ಮಳೆಗಾಲ ಶುರುವಾಗಿದ್ದು, ಆಯುರ್ವೇದದ ಪ್ರಕಾರ, ಹಾಲು ಮತ್ತು ಮೊಸರನ್ನು ಈ ಋತುವಿನಲ್ಲಿ ಸೇವಿಸಬಾರದು. ಮೊಸರನ್ನು ಸೇವಿಸಿದ ನಂತರ ನೀವು ಯಾವುದೇ ದ್ರವ ವಸ್ತುವನ್ನು ತೆಗೆದುಕೊಳ್ಳಬಾರದಂತೆ.

ಜೇನುತುಪ್ಪ ಸೇವಿಸಿದ ನಂತರ: ಇತ್ತೀಚಿನ ದಿನಗಳಲ್ಲಿ, ಬೆಳಿಗ್ಗೆ ಬೆಚ್ಚಗಿನ ನೀರಿನೊಂದಿಗೆ ಬೆರೆಸಿದ ನಿಂಬೆ ಜೇನುತುಪ್ಪವನ್ನು ತೂಕ ಇಳಿಸುವ ಪಾನೀಯವಾಗಿ ಕುಡಿಯುವುದು ಸಾಕಷ್ಟು ಟ್ರೆಂಡ್ ಆಗಿದೆ. ಆದರೆ ಜೇನುತುಪ್ಪವನ್ನು ಎಂದಿಗೂ ಬಿಸಿ ನೀರಿನೊಂದಿಗೆ ಸೇವಿಸಬಾರದು, ಜೇನುತುಪ್ಪವನ್ನು ಸೇವಿಸಿದ ನಂತರ ಬಿಸಿ ನೀರನ್ನು ಎಂದಿಗೂ ಕುಡಿಯಬಾರದು.

ಹೀಗೆ ಯಾಕೆ ಮಾಡಬಾರದು?
ಮೊಸರನ್ನು ಸೇವಿಸಿದ ನಂತರ ಬಿಸಿ ನೀರು ಅಥವಾ ಇತರ ಯಾವುದೇ ಬಿಸಿ ಪಾನೀಯವನ್ನು ಕುಡಿಯುವುದರಿಂದ ಆಹಾರ ವಿಷಕ್ಕೆ ಕಾರಣವಾಗಬಹುದು. ಆದರೆ ಜೇನುತುಪ್ಪದ ನಂತರ ಬಿಸಿ ನೀರನ್ನು ಅಥವಾ ಜೇನುತುಪ್ಪದೊಂದಿಗೆ ಬಿಸಿ ನೀರನ್ನು ಸೇವಿಸುವುದು ದೇಹಕ್ಕೆ ನಿಧಾನ ವಿಷದಂತೆ ಕಾರ್ಯನಿರ್ವಹಿಸುತ್ತದೆ.

Share.
Exit mobile version